ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಫರ್ ನಿಮಗೆ ಹಲವಾರು ಲಾಭವನ್ನು ನೀಡುತ್ತದೆ.

 

ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಫರ್ ನಿಮಗೆ ಹಲವಾರು ಲಾಭವನ್ನು ನೀಡುತ್ತದೆ. ಕ್ರೆಡಿಟ್ ಕಾರ್ಡ್ ಡೆಬ್ಟ್ ಅನ್ನು ಸರಿದೂಗಿಸಲು ನೀವು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನು ಬಳಸಿಕೊಳ್ಳಬಹುದು. ನಿಮ್ಮ ಹಣಕಾಸನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಇದು ಸಹಕಾರಿಯಾಗಲಿದೆ.

ಕಡಿಮೆ ಬಡ್ಡಿದರವು ಇರಲಿದೆ.

ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಫರ್ ಎಂದರೇನು?: ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಫರ್ ವ್ಯಕ್ತಿಗೆ ತನ್ನ ಹಳೆಯ ಕ್ರೆಡಿಟ್ ಕಾರ್ಡ್‌ನಿಂದ ಹೊಸ ಕ್ರೆಡಿಟ್ ಕಾರ್ಡ್‌ಗೆ ಉಳಿದಿರುವ ಮೊತ್ತವನ್ನು ವರ್ಗಾವಣೆ ಮಾಡಲು ಅವಕಾಶ ನೀಡುತ್ತದೆ. ಉತ್ತಮ ನಿಯಮ ಮತ್ತು ಬಡ್ಡಿದರದೊಂದಿಗೆ ಈ ವ್ಯವಸ್ಥೆಯು ಲಭ್ಯವಾಗುತ್ತದೆ.

ಇನ್ನು ಕೆಲವು ಸಂಸ್ಥೆಗಳು ಬ್ಯಾಲೆನ್ಸ್ ಟ್ರಾನ್ಫರ್ ವೆಚ್ಚವನ್ನು ಕಡಿತ ಮಾಡುತ್ತದೆ. ಸಾಮಾನ್ಯವಾಗಿ ಹಣ ವರ್ಗಾವಣೆ ಶುಲ್ಕವು ಶೇಕಡ 3-5ರಷ್ಟು ಇರಲಿದೆ. ಆರರಿಂದ ಸುಮಾರು 18 ತಿಂಗಳುಗಳ ಅವಧಿಯನ್ನು ಕೂಡಾ ಸಂಸ್ಥೆಗಳು ನೀಡುತ್ತದೆ. ಈ ಸಂದರ್ಭದಲ್ಲಿ ವರ್ಗಾವಣೆ ಮಾಡಿದ ಮೊತ್ತಕ್ಕೆ ಯಾವುದೇ ಬಡ್ಡಿದರವನ್ನು ವಿಧಿಸಲಾಗುವುದಿಲ್ಲ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ…

ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಟ್ರಾನ್ಫರ್ ನಿರ್ವಹಣೆ ಹೇಗೆ?

ಒಮ್ಮೆ ನಿಮಗೆ ಶೂನ್ಯ ಬಡ್ಡಿದರದಲ್ಲಿ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆಗೆ ಅವಕಾಶ ಲಭ್ಯವಾದಾಗ, ಈ ಬಡ್ಡಿದರ ಫಿಕ್ಸಿಡ್ ಆಗಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ. ನಂತರದ ಹಂತದಲ್ಲಿ ಯಾವ ಬ್ಯಾಲೆನ್ಸ್ ಅನ್ನು ವರ್ಗಾವಣೆ ಮಾಡುವುದು ಎಂದು ಆಯ್ಕೆ ಮಾಡಿಕೊಳ್ಳಿ. ಮುಖ್ಯವಾಗಿ ಯಾವುದರಲ್ಲಿ ಅಧಿಕ ಬಡ್ಡಿದರವಿದೆಯೋ ಆ ಕ್ರೆಡಿಟ್ ಕಾರ್ಡ್ ಮೊತ್ತವನ್ನು ವರ್ಗಾವಣೆ ಮಾಡಿಕೊಳ್ಳಿ. ಇನ್ನು ಸಾಮಾನ್ಯವಾಗಿ ಬ್ಯಾಲೆನ್ಸ್ ಟ್ರಾನ್ಫರ್‌ಗೆ ಪ್ರಕ್ರಿಯಾ ಶುಲ್ಕ ಕೂಡಾ ಇರಲಿದೆ. ಬ್ಯಾಲೆನ್ಸ್ ವರ್ಗಾವಣೆ ಮಾಡಿದ ಬಳಿಕ ನೀವು ಎಷ್ಟು ಉಳಿತಾಯ ಮಾಡಲು ಸಾಧ್ಯವೆಂದು ನೋಡಿ.

ಕ್ರೆಡಿಟ್ ಕಾರ್ಡ್‌ ಬ್ಯಾಲೆನ್ಸ್ ಟ್ರಾನ್ಫರ್ ಮಾಡಿ

ಅಧಿಕವಾಗಿ ಕ್ರೆಡಿಟ್ ಕಾರ್ಡ್ ಸಾಲವನ್ನು ಹೊಂದಿರುವವರಿಗೆ ಮತ್ತು ಯಾರಿಗೆ ತಮ್ಮ ಸಾಲ ಮರುಪಾವತಿ ಮಾಡಲು ಕಷ್ಟವಾಗುತ್ತದೆಯೋ ಅವರು ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆಯನ್ನು ಮಾಡಲು ಸಾಧ್ಯವಾಗುತ್ತದೆ. ಕಡಿಮೆ ಬಡ್ಡಿದರದಲ್ಲಿ ಕ್ರೆಡಿಟ್ ಕಾರ್ಡ್ ಸೇವೆಯನ್ನು ನೀಡುವ ಬ್ಯಾಂಕ್‌ನ ಕಾರ್ಡ್‌ಗೆ ಮೊತ್ತವನ್ನು ವರ್ಗಾವಣೆ ಮಾಡಬಹುದಾಗಿದೆ. ಇದರಿಂದಾಗಿ ಸಾಲ ಹೊಂದಿರುವವರಿಗೆ ಲಾಭ ಉಂಟಾಗಲಿದೆ.

ಬ್ಯಾಲೆನ್ಸ್ ಟ್ರಾನ್ಫರ್ ಆಯ್ಕೆ ನೀಡುವ ಕ್ರೆಡಿಟ್ ಕಾರ್ಡ್‌ಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಾರ್ಡ್
ಆಕ್ಸಿಸ್ ಬ್ಯಾಂಕ್
ಸ್ಟಾಡರ್ಡ್ ಚಾರ್ಟೆರ್ಡ್ ಬ್ಯಾಂಕ್
ಎಚ್‌ಎಸ್‌ಬಿಸಿ
ಐಸಿಐಸಿಐ ಬ್ಯಾಂಕ್
ಎಚ್‌ಡಿಎಫ್‌ಸಿ ಬ್ಯಾಂಕ್

ಕ್ರೆಡಿಟ್ ಕಾರ್ಡ್‌ ಬ್ಯಾಲೆನ್ಸ್ ಟ್ರಾನ್ಫರ್ ಪ್ರಯೋಜನ

ಶೀಘ್ರ ಮತ್ತು ಸರಳ: ಬ್ಯಾಲೆನ್ಸ್ ಟ್ರಾನ್ಫರ್‌ಗೆ ಬೇಕಾದ ಅಗತ್ಯ ದಾಖಲೆಗಳನ್ನು ಪೂರೈಸಿದರೆ, ಬ್ಯಾಂಕ್ ಶೀಘ್ರವಾಗಿ ಮೊತ್ತವನ್ನು ಟ್ರಾನ್ಫರ್ ಮಾಡಲು ಅವಕಾಶ ನೀಡುತ್ತದೆ. ಹಾಗೆಯೇ ಸರಳವಾಗಿ ಒಂದು ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನಿಂದ ಇನ್ನೊಂದು ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗಲಿದೆ. ಇದು ಸಾಲವನ್ನು ನಿರ್ವಹಣೆ ಮಾಡಲು ಸಹಾಯಕವಾಗಲಿದೆ.
ಬಹು ವರ್ಗಾವಣೆ ಆಯ್ಕೆ: ಒಂದು ಕ್ರೆಡಿಟ್ ಕಾರ್ಡ್‌ನ ಎಲ್ಲ ಸಾಲವನ್ನು ಹೊಸ ಕಾರ್ಡ್‌ಗೆ ವರ್ಗಾವಣೆ ಮಾಡಬಹುದು. ಬಹು ವರ್ಗಾವಣೆ ಆಯ್ಕೆಯು ಲಭ್ಯವಿರುತ್ತದೆ. ಹಾಗೆಯೇ ಎಲ್ಲ ಬಿಲ್‌ಗಳನ್ನು ಕೂಡಲೇ ಪಾವತಿಸಬಹುದು.
ಭತ್ಯೆ: ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆಯು ಹೊಸ ಸಾಲದಾರರಿಗೆ ಸಹಾಯಕವಾಗಲಿದೆ. ಬಡ್ಡಿದರ ಇಲ್ಲದ ಅವಧಿ ಹಾಗೂ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Wipro: ಫ್ರೆಶರ್‌ಗಳ ವೇತನ ಶೇ.50ರಷ್ಟು ಕಡಿತಗೊಳಿಸಿದ ವಿಪ್ರೋ, ಸಂಬಳವೆಷ್ಟು?

Tue Feb 21 , 2023
  ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುವಾಗ ವಿಪ್ರೋ ಹೊಸ ಉದ್ಯೋಗಿಗಳಿಗೆ ಅಧಿಕ ಸಂಬಳವನ್ನು ನೀಡುವ ಭರವಸೆಯನ್ನು ನೀಡಿತ್ತು. ಆದರೆ ಈಗ ಫ್ರೆಶರ್‌ಗಳ, ಹೊಸದಾಗಿ ನೇಮಕಗೊಳ್ಳುವವರ ವೇತನವನ್ನು ವಿಪ್ರೋ ಕಡಿತಗೊಳಿಸುತ್ತಿದೆ. ಅದು ಕೂಡಾ ಶೇಕಡ 50ರಷ್ಟು ಕಡಿತಗೊಳಿಸುತ್ತಿದೆ ವರದಿಯಾಗಿದೆ. ಈ ಹಿಂದೆ ವಿಪ್ರೋದಲ್ಲಿ ಯಾರು ಯಶಸ್ವಿಯಾಗಿ ತರಬೇತಿಯನ್ನು ಪಡೆದಿರುವ ಫ್ರೆಶರ್‌ಗಳಿಗೆ ವಾರ್ಷಿಕವಾಗಿ 6.5 ಲಕ್ಷ ರೂಪಾಯಿ ವೇತನವನ್ನು ನೀಡುವುದಾಗಿ ವಿಪ್ರೋ ಘೋಷಣೆಯನ್ನು ಮಾಡಿತ್ತು. ಆದರೆ ಈಗ ಫ್ರೆಶರ್‌ಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ, […]

Advertisement

Wordpress Social Share Plugin powered by Ultimatelysocial