Wipro: ಫ್ರೆಶರ್‌ಗಳ ವೇತನ ಶೇ.50ರಷ್ಟು ಕಡಿತಗೊಳಿಸಿದ ವಿಪ್ರೋ, ಸಂಬಳವೆಷ್ಟು?

 

ಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡುವಾಗ ವಿಪ್ರೋ ಹೊಸ ಉದ್ಯೋಗಿಗಳಿಗೆ ಅಧಿಕ ಸಂಬಳವನ್ನು ನೀಡುವ ಭರವಸೆಯನ್ನು ನೀಡಿತ್ತು. ಆದರೆ ಈಗ ಫ್ರೆಶರ್‌ಗಳ, ಹೊಸದಾಗಿ ನೇಮಕಗೊಳ್ಳುವವರ ವೇತನವನ್ನು ವಿಪ್ರೋ ಕಡಿತಗೊಳಿಸುತ್ತಿದೆ. ಅದು ಕೂಡಾ ಶೇಕಡ 50ರಷ್ಟು ಕಡಿತಗೊಳಿಸುತ್ತಿದೆ ವರದಿಯಾಗಿದೆ.

ಈ ಹಿಂದೆ ವಿಪ್ರೋದಲ್ಲಿ ಯಾರು ಯಶಸ್ವಿಯಾಗಿ ತರಬೇತಿಯನ್ನು ಪಡೆದಿರುವ ಫ್ರೆಶರ್‌ಗಳಿಗೆ ವಾರ್ಷಿಕವಾಗಿ 6.5 ಲಕ್ಷ ರೂಪಾಯಿ ವೇತನವನ್ನು ನೀಡುವುದಾಗಿ ವಿಪ್ರೋ ಘೋಷಣೆಯನ್ನು ಮಾಡಿತ್ತು. ಆದರೆ ಈಗ ಫ್ರೆಶರ್‌ಗಳಿಗೆ ಕಳುಹಿಸಲಾದ ಇಮೇಲ್‌ನಲ್ಲಿ, ಹೊಸದಾಗಿ ನೇಮಕಾತಿಯಾಗಲಿರುವ ಫ್ರೆಶರ್‌ಗಳು ಶೇಕಡ 50ರಷ್ಟು ಕಡಿತ ಸಂಬಳವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ತಿಳಿಸಲಾಗಿದೆ.

ಇನ್ನು ಈ ಹಿಂದೆ ಉದ್ಯೋಗದ ಗುಣಮಟ್ಟದ ಆಧಾರದಲ್ಲಿ ವಿಪ್ರೋ ಫ್ರೆಶರ್‌ಗಳನ್ನು ಉದ್ಯೋಗದಿಂದ ತೆಗೆದುಹಾಕಿದೆ. ಹಾಗೆಯೇ ವಿಪ್ರೋದ ಈ ವರ್ಷದ ವೆಲೋಸಿಟಿ ಗ್ರಾಡ್ಸ್ ಪ್ರೋಗ್ರಾಮ್‌ನಲ್ಲಿ ಭಾಗಿಯಾದ ಬಹುತೇಕ ಉದ್ಯೋಗಿಗಳಿಗೆ ವೇತನ ಕಡಿತಗೊಳಿಸಲಾಗಿದೆ. ಆದರೆ ಸಂಸ್ಥೆಯು ಈ ಕಡಿತ ವೇತನವನ್ನು ಒಪ್ಪಿಕೊಂಡು ಸಂಸ್ಥೆಗೆ ಸೇರ್ಪಡೆಯಾಗುವಂತೆ ಒತ್ತಡವನ್ನು ಹೇರುತ್ತಿಲ್ಲ. ಬದಲಾಗಿ ಸಮಯವನ್ನು ತೆಗೆದುಕೊಂಡು ನಿರ್ಧಾರವನ್ನು ಕೈಗೊಳ್ಳಿ, ಎಂದು ತಿಳಿಸಿದೆ.

ಈ ಹಿಂದೆ ಫೆಬ್ರವರಿ 16ರಂದು ಫ್ರೆಶರ್‌ಗಳಿಗೆ ಇಮೇಲ್ ಒಂದು ಬಂದಿದ್ದು, ಇದರಲ್ಲಿ ವಾರ್ಷಿಕವಾಗಿ 6.5 ಲಕ್ಷ ರೂಪಾಯಿ ವೇತನದ ಪ್ಯಾಕೇಜ್ ಎಂದು ತಿಳಿಸಲಾಗಿತ್ತು. ಆದರೆ ಫೆಬ್ರವರಿ 20ರಂದು ಕಳುಹಿಸಲಾದ ಇಮೇಲ್‌ನಲ್ಲಿ ವೇತನದ ಪ್ಯಾಕೇಜ್ ಅನ್ನು 3.5 ಲಕ್ಷ ರೂಪಾಯಿಗೆ ಇಳಿಸಲಾಗಿದೆ. ಈ ಪ್ಯಾಕೇಜ್‌ ಅನ್ನು ಒಪ್ಪಿಕೊಳ್ಳಲು ಡೆಡ್‌ಲೈನ್ ಅನ್ನು ಕೂಡಾ ನೀಡಲಾಗಿದೆ. ಅಂದರೆ ಗಡುವು ನೀಡಲಾಗಿದೆ. “ನಾವು ಪ್ರಸ್ತುತ ಪ್ರೊಡ್ಜೆಕ್ಟ್ ಇಂಜಿನಿಯರ್‌ ಹುದ್ದೆಯನ್ನು ಹೊಂದಿದ್ದು, 3.5 ಲಕ್ಷ ರೂಪಾಯಿ ವಾರ್ಷಿಕ ವೇತನವನ್ನು ಆಫರ್ ಮಾಡಲಾಗುತ್ತದೆ. ಈ ಆಫರ್ ಅನ್ನು ನೀವು ಒಪ್ಪಿಕೊಳ್ಳುವುದಾದರೆ, ಈ ಹಿಂದಿನ ಎಲ್ಲ ಆಫರ್‌ಗಳು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ,” ಎಂದು ಸಂಸ್ಥೆಯು ಇನ್ನೊಂದು ಇಮೇಲ್‌ನಲ್ಲಿ ಉಲ್ಲೇಖ ಮಾಡಿದೆ.

ಹೊಸ ಆಫರ್ ಅನ್ನು ಒಪ್ಪಿಕೊಳ್ಳದೆ ಹಳೆಯ ಆಫರ್‌ ಅನ್ನು ಉಳಿಸಿಕೊಳ್ಳುವ ಆಯ್ಕೆ ಉದ್ಯೋಗಿಗಳಿಗೆ ಇದೆ!. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದವರೊಬ್ಬರು, ಇದು ಅನ್ಯಾಯ. ನಾವೆಲ್ಲರು 6.5 ಲಕ್ಷ ವಾರ್ಷಿಕ ಆದಾಯಕ್ಕಾಗಿ ಕಾಯುತ್ತಿದ್ದೆವು ಎಂದು ತಿಳಿಸಿದ್ದಾರೆ. ಸಂಸ್ಥೆಯು ವೆಚ್ಚ ಕಡಿತ ಮಾಡುವ ನಿಟ್ಟಿನಲ್ಲಿ ಹೊಸ ಉದ್ಯೋಗಿಗಳ ವೇತನ ಕಡಿತಗೊಳಿಸುವ ನಿರ್ಧಾರ ಮಾಡಿದೆ.

ಇಂಡಸ್ಟ್ರಿ ವೃತ್ತಿಪರರು ಹೇಳುವುದೇನು?

ಕೆಲವು ವೃತ್ತಿಪರರು ವಿಪ್ರೋದ ಈ ನಿರ್ಧಾರವನ್ನು ಟೀಕೆ ಮಾಡಿದ್ದಾರೆ. ಇದು ಅನೈತಿಕವಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಪ್ರೋ, ಈ ಫ್ರೆಶರ್‌ಗಳು ಈಗಷ್ಟೇ ತಮ್ಮ ವೃತ್ತಿ ಜೀವನವನ್ನು ಆರಂಭ ಮಾಡುತ್ತಿದ್ದಾರೆ. ತಮ್ಮ ಜ್ಞಾನ ಹೆಚ್ಚಿಸಲು ಮತ್ತು ಹೊಸ ಕೌಶಲ್ಯಗಳನ್ನು ವೃದ್ಧಿಪಡಿಸಲು ಮುಂದಿನ ದಿನಗಳಲ್ಲಿ ಹಲವಾರು ಅವಕಾಶಗಳು ಅವರಿಗೆ ಲಭ್ಯವಾಗಲಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂತಾರ 2ನಲ್ಲಿ ರಜನಿಕಾಂತ್ ನಟನೆ, ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ̤

Tue Feb 21 , 2023
ಕಳೆದ ವರ್ಷ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ದೇಶಾದ್ಯಂತ ಸದ್ದು ಮಾಡಿದ ಚಿತ್ರಗಳ ಸಾಲಿನಲ್ಲಿ ಮೊದಲ ಸ್ಥಾನವನ್ನು ಕಬಳಿಸಿಕೊಂಡ ಕಾಂತಾರ ಚಿತ್ರ ಭಾರತ ಸಿನಿಮಾ ರಂಗದಲ್ಲಿ ವಿಶೇಷ ದಾಖಲೆಯನ್ನು ಬರೆದ ಚಿತ್ರ ಎನಿಸಿಕೊಂಡಿದೆ. ಮೊದಲಿಗೆ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ಚಿತ್ರವನ್ನು ಬಿಡುಗಡೆ ಮಾಡಿದ ಚಿತ್ರತಂಡ ಬೇರೆ ಬೇರೆ ರಾಜ್ಯಗಳ ಸಿನಿ ರಸಿಕರಿಂದ ವ್ಯಕ್ತವಾದ ಪ್ರಶಂಸೆ ಕಂಡು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರವನ್ನು ಪರ ರಾಜ್ಯಗಳಲ್ಲಿಯೂ ಸಹ ಬಿಡುಗಡೆ ಮಾಡಿದರು. […]

Advertisement

Wordpress Social Share Plugin powered by Ultimatelysocial