ಸಿಟಿ ರವಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ.

 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಬಾಯಿ ತೆರೆದರೆ ಸುಳ್ಳು ಎಂಬುದು ಇಂದು ಮತ್ತೆ ಬಹಿರಂಗವಾಗಿದೆ,ಧಾರ್ಮಿಕ ಹೆಸರಿನಲ್ಲಿ ರಾಜಕೀಯ ನಡೆಸುವ ಸಿ.ಟಿ.ರವಿ ಮಾಂಸಹಾರ ಸೇವಿಸಿ ದೇವಸ್ಥಾನಕ್ಕೆ ಹೋಗಿ ನಂತರ ನಾನು ದೇವಸ್ಥಾನಕ್ಕೆ ಹೋಗಿಲ್ಲ ಎಂದು ಹೇಳಿ ನಂತರ ಮಾಧ್ಯಮಗಳಲ್ಲಿ ದೇವಸ್ಥಾನ ಪ್ರವೇಶಿಸಿರುವುದು ಬಹಿರಂಗವಾದ ನಂತರ ನಾನು ಹೋಗಿದ್ದೆ ಎಂದು ಹೇಳುವ ಇಂತಹ ಒಬ್ಬ ಸುಳ್ಳುಗಾರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದು ಬಿಜೆಪಿ ಪಕ್ಷದ ಅವನತಿಗೆ ಮೂಲ ಕಾರಣವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ತಿಳಿಸಿದರು.ನಗರದ ಕಾಂಗ್ರೆಸ್ ಭವನದ ಗಾಂಧಿ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿನಿತ್ಯ ಸುಳ್ಳನ್ನೇ ಸತ್ಯ ಮಾಡುವ ಪರಿಪಾಠವನ್ನು ಮೈಗೂಡಿಸಿಕೊಂಡಿರುವ ಸಿ.ಟಿ. ರವಿ ತನ್ನ ತಪ್ಪನ್ನ ಮತ್ತೊಬ್ಬರ ಮೇಲೆ ಹೊರೆಸುವ ನಿಸ್ಸೀಮ ರಾಜಕಾರಣಿ ಅದರಲ್ಲೂ ಬಿಜೆಪಿಗೆ ಇಂತಹ ಸುಳ್ಳುಗಾರನೇ ಮಾರ್ಗದರ್ಶಕ ಮಂಡಳಿಯ ಅಧ್ಯಕ್ಷ ಎಂದು ಹೇಳಿ ಸಿ.ಟಿ ರವಿ ಧಾರ್ಮಿಕ ಹೆಸರಿನಲ್ಲಿ ನಡೆಸಿದ ಅನಾಚಾರಗಳು ಇಂದು ಬಹಿರಂಗವಾಗಿದೆ ಎಂದರು.ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಸಿ.ಟಿ. ರವಿಯನ್ನು ಇನ್ನು ಮುಂದೆ ಯಾವುದೇ ದೇವಾಲಯಕ್ಕೂ ಪ್ರವೇಶಿಸದಂತೆ ತಡೆಯಬೇಕು ಕೂಡಲೆ ಮಜರಾಯಿ ಇಲಾಖೆ ಸಿ.ಟಿ. ರವಿ. ನೀಡಿರುವ ಹೇಳಿಕೆ ಸುಳ್ಳಾಗಿರುವುದರಿಂದ ಎಲ್ಲಾ ದೇವಸ್ಥಾನಗಳಲ್ಲಿ ಸಿ.ಟಿ.ರವಿ ಪ್ರವೇಶವನ್ನು ನಿಷೇಧಿಸಬೇಕೆಂದು ಆಗ್ರಹಪಡಿಸಿದರು.ಕಾಂಗ್ರೆಸ್ ಪಕ್ಷದ ಮುಖಂಡರಾದ ರವಿಶೇಖರ್. ಎ.ಆನಂದ್. ಬಿ. ಮಂಜುನಾಥ್.ಈ.ಶೇಖರ್. ಉಮೇಶ್. ಪುಟ್ಟರಾಜು. ಪ್ರಶಾಂತ. ಅನಿಲ್ ಕುಮಾರ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಗು ಹೆತ್ತ ಬಳಿಕ ಕೈ, ಕಾಲುಗಳನ್ನೇ ಕಳೆದುಕೊಂಡ ಮಹಿಳೆ

Sun Feb 26 , 2023
ವಾಷಿಂಗ್ಟನ್:‌ ಮಗುವನ್ನು ಹೆತ್ತ ಬಳಿಕ ಸೆಪ್ಟಿಕ್‌ ಶಾಕ್ ನಿಂದ ಮಹಿಳೆಯೊಬ್ಬಳು ತನ್ನ ಎರಡು ಕಾಲು, ಕೈಗಳನ್ನು ಕಳೆದುಕೊಂಡಿರುವ ಪ್ರಕರಣ ಅಮೆರಿಕಾದಲ್ಲಿ ನಡೆದಿದೆ.ಕ್ರಿಸ್ಟಿನಾ ಪ್ಯಾಚೆಕೊ ಎನ್ನುವ 29 ವರ್ಷದ ಮಹಿಳೆ ತನ್ನ ಕುಟುಂಬಕ್ಕೆ ಎರಡನೇ ಮಗು ಬರುವ ಸಂತಸದಲ್ಲಿದ್ದರು.ನಾರ್ಮಲ್‌ ಡೆಲಿವೆರಿ ಬದಲಿಗೆ ಸಿಸೇರಿಯನ್ ಪ್ರಕ್ರಿಯೆಯಲ್ಲಿ ತಮ್ಮ ಮಗುವಿಗೆ ಕ್ರಿಸ್ಟಿನಾ ಪ್ಯಾಚೆಕೊ ಜನ್ಮ ನೀಡುತ್ತಾರೆ.ಮಗುವಿನೊಂದಿಗೆ ಮನೆಗೆ ಬಂದ ಬಳಿಕ ಕ್ರಿಸ್ಟಿನಾ ಪ್ಯಾಚೆಕೊ ಅವರಿಗೆ ಸ್ವಲ್ಪ ಜ್ವರ ಹಾಗೂ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮೊದಲಿಗೆ ಇದು […]

Advertisement

Wordpress Social Share Plugin powered by Ultimatelysocial