ಹಿಂದೂ ಎಂದರೆ ದೇಹ, ಹಿಂದುತ್ವ ಎಂದರೆ ಜೀವ, ಸಿದ್ದರಾಮಯ್ಯಗೆ ಸಿಟಿ ರವಿ

 

 

ಹಿಂದೂ ಎಂದರೆ ದೇಹ, ಹಿಂದುತ್ವ ಎಂದರೆ ಜೀವ, ದೇಹವಿದ್ದು, ಜೀವ ಇಲ್ಲದಿದ್ದರೆ ಏನಾಗುತ್ತೀರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಗುರುವಾರ ಪ್ರಶ್ನಿಸಿದ್ದಾರೆ. ಕೋಲಾರ: ಹಿಂದೂ ಎಂದರೆ ದೇಹ, ಹಿಂದುತ್ವ ಎಂದರೆ ಜೀವ, ದೇಹವಿದ್ದು, ಜೀವ ಇಲ್ಲದಿದ್ದರೆ ಏನಾಗುತ್ತೀರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಗುರುವಾರ ಪ್ರಶ್ನಿಸಿದ್ದಾರೆ.
ಗುರುವಾರ ಕೋಲಾರ ಲೋಕಸಭಾ ಕ್ಷೇತ್ರದ ಬಿಜೆಪಿ ಎಸ್ಸಿ ಮೋರ್ಚಾ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತ ಪ್ರಶ್ನೆಯೊಂದಕ್ಕೆ ಸಿಟಿ ರವಿಯವರು ಉತ್ತರಿಸಿದರು. ‘ಈ ಪದವನ್ನು ನಾನು ಬಳಸುತ್ತಿಲ್ಲ; ಜನ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರೇ, ಹಿಂದುತ್ವ ಒಪ್ಪಿಕೊಳ್ಳದಿದ್ದರೆ ಅದೇ ಎರಡು ಅಕ್ಷರ ನೀವಾಗುತ್ತೀರಿ. ಆದರೆ, ನೀವು ಅದಾಗಬಾರದು ಎಂಬುದು ನಮ್ಮ ಬಯಕೆ.

ಅದಕ್ಕಾಗಿ ಹಿಂದೂ ಆಗಿದ್ದವನು ಹಿಂದುತ್ವ ಒಪ್ಪಿಕೊಳ್ಳಬೇಕು. ಆಗ ಮಾತ್ರ ಜೀವ ಇರುತ್ತೆ’ ಎಂದು ಪರೋಕ್ಷವಾಗಿ ತಿವಿದರು. ‘ಬಿಜೆಪಿ ರಾಷ್ಟ್ರೀಯತೆ, ಹಿಂದುತ್ವದ ಆಧಾರದ ಮೇಲೆ ರಾಜಕೀಯ ಮಾಡುವ ಪಕ್ಷ. ಹಿಂದುತ್ವ ಪರ ಎಂದರೆ ಮುಸ್ಲಿಮರ ವಿರುದ್ಧ ಅಲ್ಲ.
ಭಾರತ ನಮ್ಮದು ಎಂದವರೆಲ್ಲರೂ ಹಿಂದೂಗಳೇ’ ಎಂದು ತಿಳಿಸಿದರು. ಬಳಿಕ ತಮ್ಮ ಅಧಿಕಾರಾವಧಿಯಲ್ಲಿ ದೇಶದಲ್ಲಿ ಮತ್ತು ರಾಜ್ಯಗಳಲ್ಲಿ ಎಸ್ಸಿಗಳ ಹಿತಾಸಕ್ತಿ ಕಾಪಾಡುವಲ್ಲಿ ಕಾಂಗ್ರೆಸ್ ವಿಫಲವಾದ ಕಾರಣ ಕಾಂಗ್ರೆಸ್ ವಿರುದ್ಧ ರವಿಯವರು ತೀವ್ರ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರು ಕೋಲಾರಕ್ಕೆ ಬಂದಾಗ 1952 ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಯಾವ ಪಕ್ಷ ಸೋಲಿಸಿತು ಎಂಬ ಪ್ರಶ್ನೆಯನ್ನು ಕೇಳಬೇಕು.
ಇದಕ್ಕೆ ಅವರಿಂದ ಉತ್ತರ ಪಡೆಯಬೇಕು ಎಂದರು. ಈ ವೇಳೆ ಅಂಬೇಡ್ಕರ್ ಅವರ ಸೋಲಿಗೆ ಯಾವ ಪಕ್ಷ ಕಾರಣ ಎಂದು ನೆರೆದಿದ್ದವರನ್ನು ಪ್ರಶ್ನಿಸಿದಾಗ ಸ್ಥಳದಲ್ಲಿದ್ದ ಜನರು ಕಾಂಗ್ರೆಸ್ ಎಂದು ಕೂಗಿದರು. ಈ ಮೂಲಕ ನೆರೆದಿದ್ದವರ ಗಮನ ಸೆಳೆದರು. ಇದೇ ವೇಳೆ ರಾಜ್ಯದಲ್ಲಿ ಎಸ್ಸಿಗಳಿಗೆ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಹೆಸರಿಸಿದ ರವಿಯವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಿರ್ಲಕ್ಷಿಸಿ ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೀನ ರಾಶಿ ಭವಿಷ್ಯ.

Fri Feb 10 , 2023
ಮನರಂಜನೆ ಮತ್ತು ಮೋಜಿನ ಒಂದು ದಿನ. ಇಲ್ಲಿಯವರೆಗೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಿದ್ದವರು ಜೀವನದಲ್ಲಿ ಹಣದ ಪ್ರಾಮುಖ್ಯತೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು ಏಕೆಂದರೆ ಇಂದು ಇದ್ದಕ್ಕಿದ್ದಂತೆ ನಿಮಗೆ ಹಣದ ಅಗತ್ಯವಿರುತ್ತದೆ ಮತ್ತು ನಿಮಗೆ ಸಾಕಷ್ಟು ಹಣವಿರುವುದಿಲ್ಲ. ನಿಮ್ಮ ಸಂಗಾತಿಯೊಡನೆ ಒಂದು ಉತ್ತಮ ತಿಳುವಳಿಕೆ ಮನೆಯಲ್ಲಿ ಸಂತೋಷ-ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ. ಒಬ್ಬ ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ನೀವು ಇಂದು ಕೆಲಸದಲ್ಲಿ ಎಲ್ಲದರಲ್ಲೂ ಮೇಲುಗೈ ಸಾಧಿಸಬಹುದು. ಮಯವನ್ನು ಚೆನ್ನಾಗಿ […]

Advertisement

Wordpress Social Share Plugin powered by Ultimatelysocial