ಮಹಮ್ಮದ್ ರಫಿ ಈ ಸಿನಿಮಾ ಸಂಗೀತದ ಪ್ರಮುಖ ಮಕುಟ ಪ್ರಾಯರಲ್ಲಿಒಬ್ಬರು.

 

 

ಭಾರತೀಯರಾದ ನಮ್ಮ ಬದುಕಿನ ಅವಿಭಾಜ್ಯ ಅಂಗ ‘ಸಿನಿಮಾ ಸಂಗೀತ’. ಅಂದಿನ ರೇಡಿಯೋ ನಮಗೆ ನಮ್ಮ ದೇಶದ ಪ್ರಮುಖ ಭಾಷೆಗಳು ಗೊತ್ತಿದ್ದವೋ ಇಲ್ಲವೋ, ಅವುಗಳ ನಾದ ಮಾಧುರ್ಯದಲ್ಲಿ ನಾವು ಜೀವಿಸುವುದನ್ನು ಸಹಜವಾಗಿ ಕಲಿಸಿಬಿಟ್ಟಿದ್ದವು. ಅಂದು ಆ ನಾದಲೀಲೆಯಲ್ಲಿ ಮೀಯದೆ, ಬೆಳಗು ರಾತ್ರಿಗಳು ಈ ನಾಡಿನಲ್ಲಿ ಹರಿಯುತಿರಲಿಲ್ಲ. ಒಮ್ಮೊಮ್ಮೆ ಅನಿಸುತ್ತದೆ. ನಮ್ಮ ದೇಶವನ್ನು ಒಂದು ರೀತಿಯಲ್ಲಿ ಅದ್ಭುತವಾಗಿ ಹಿಡಿದಿಟ್ಟಿರುವ ಅನನ್ಯ ಶಕ್ತಿಯಲ್ಲಿ ಸಂಗೀತದ ಪಾತ್ರ ಪ್ರಮುಖವಾದದ್ದು ಎಂದು.
ಈ ಸಿನಿಮಾ ಸಂಗೀತದ ಪ್ರಮುಖ ಮಕುಟ ಪ್ರಾಯರಲ್ಲಿ ಮಹಮ್ಮದ್ ರಫಿ ಅಗ್ರಗಣ್ಯರು. ಅವರು 1924ರ ಡಿಸೆಂಬರ್ 24ರಂದು ಜನಿಸಿದರು. ಅಮೃತಸರದ ಬಳಿಯ ಹಳ್ಳಿಯೊಂದರಲ್ಲಿ ನೆಲೆಸಿದ್ದ ಕುಟುಂಬಕ್ಕೆ ಸೇರಿದ್ದ ಪುಟ್ಟ ಬಾಲಕ ಮಹಮ್ಮದ್ ರಫಿ ತನ್ನ ಗ್ರಾಮದಲ್ಲಿ ಸುಳಿದಾಡುತ್ತಿದ್ದ ಫಕೀರನೊಬ್ಬ ಹಾಡುವುದನ್ನು ನೋಡಿ ಆತನಂತೆಯೇ ಹಾಡಿ ನಲಿಯುತ್ತಿದ್ದ. ಮುಂದೆ ಆ ಕುಟುಂಬ ಲಾಹೋರಿಗೆ ಹೋದಾಗ ಬಾಲಕ ರಫಿ ಪ್ರಸಿದ್ಧ ಸಂಗೀತಗಾರರಾದ ಬಡೇ ಗುಲಾಮ್ ಅಲಿ ಖಾನ್, ಉಸ್ತಾದ್ ಅಬ್ದುಲ್ ವಾಹಿದ್ ಖಾನ್ ಅವರಿಂದ ಸಂಗೀತ ಪಾಠ ಕಲಿತ. ಕೆ. ಎಲ್. ಸೈಗಲ್ ಅವರ ಸಾರ್ವಜನಿಕ ಸಂಗೀತ ವೇದಿಕೆವೊಂದರಲ್ಲಿ ಹದಿಮೂರು ವರ್ಷದ ಬಾಲಕ ಮಹಮ್ಮದ್ ರಫಿಗೆ ಹಾಡಲು ಒಂದು ಅವಕಾಶ ದೊರಕಿತು.
ಮುಂದೆ ರಫಿ ಭಾರತದ ಆಕಾಶವಾಣಿಗೆ ಸೇರಿದ್ದ ಲಾಹೋರಿನ ಆಕಾಶವಾಣಿ ಕೇಂದ್ರದಿಂದ ಗಾಯನಕ್ಕೆ ಆಹ್ವಾನ ಪಡೆದರು. 1941ರಲ್ಲಿ ಶ್ಯಾಮ್ ಸುಂದರ್ ಅವರು ರಫಿಯನ್ನು ಹಿನ್ನಲೆ ಗಾಯಕನನ್ನಾಗಿ ಪರಿಚಯಿಸಿದರು. ಮುಂದೆ ನಲವತ್ತು ವರ್ಷಗಳ ಕಾಲ ಅವರು ಹಾಡಿದ ಗೀತೆಗಳ ಸಂಖ್ಯೆ 26000ಕ್ಕೂ ಹೆಚ್ಚು. ಹಿಂದಿ ಭಾಷೆಯಲ್ಲದೆ ಕನ್ನಡವನ್ನೂ ಸೇರಿದಂತೆ ಬಹುತೇಕ ಭಾರತೀಯ ಭಾಷೆಗಳಲ್ಲಿ ಅವರ ಗಾನ ಮಾಧುರ್ಯ ಗಂಗೆಯಾಗಿ ಹರಿದಿದೆ. ಇಂಗ್ಲೀಷ್, ಪರ್ಷಿಯ, ಸ್ಪಾನಿಷ್, ಡಚ್ ಭಾಷೆಗಳಲ್ಲಿ ಕೂಡ ಅವರು ಹಾಡಿದ್ದಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ ಮುಂಬೈನಗರಿಯಲ್ಲಿ ತಮ್ಮ ಗಾಯನದಿಂದ ಪ್ರಖ್ಯಾತರಾಗಿದ್ದ ಮಹಮ್ಮದ್ ರಫಿ ತಮ್ಮ ಸ್ಥಳವಾದ ಲಾಹೋರಿಗೆ ಹೋಗದೆ ಭಾರತದಲ್ಲೇ ಇರಲು ನಿರ್ಧರಿಸಿದರು. 1948ರಲ್ಲಿ ಅವರು ಹಾಡಿದ ‘ಸುನೋ ಸುನೋ ಆಯೆ ದುನಿಯಾ ವಾಲೋ ಬಾಪು ಕಿ ಯೇ ಅಮರ್ ಕಹಾನಿ’ ಹಾಡು ದೇಶವಾಸಿಗಳ ದೇಶಭಕ್ತಿಯ ಪ್ರತೀಕವಾಗಿ ಜನತೆಯ ನರನಾಡಿಗಳಲ್ಲಿ ಬೆರೆತು ಹೋದಂತಹ ಅಲೆಯನ್ನು ಸೃಷ್ಟಿಸಿತ್ತು. ಈ ಗೀತೆಯನ್ನು ಅವರಿಂದ ಪ್ರತ್ಯೇಕವಾಗಿ ಕೇಳಬೇಕೆಂದು ಪಂಡಿತ್ ನೆಹರೂ ಅವರು ಮಹಮ್ಮದ್ ರಫಿ ಅವರನ್ನು ತಮ್ಮ ಮನೆಗೇ ಆಹ್ವಾನಿಸಿ ಅವರಿಗೆ ವಿಶೇಷ ಗೌರವ ಸತ್ಕಾರಗಳನ್ನು ಸಲ್ಲಿಸಿ ಆ ಗಾನಸುಧೆಯನ್ನು ಆಲಿಸಿದರಂತೆ.
‘ಬೈಜುಭಾವ್ರ’ ಚಿತ್ರದ ‘ಓ ದುನಿಯಾ ರಖ್ ವಾಲೆ’, ‘ಮನ್ ತರ್ಪಿತ್ ಹರಿ ದರ್ಶನ್ ಕೋ ಆಜ್’ ಮುಂತಾದ ಹಾಡುಗಳು ಮಹಮ್ಮದ್ ರಫಿ ಅವರನ್ನು ದೇಶವಾಸಿಗಳ ಹೃದಯಕ್ಕೆ ಇನ್ನಷ್ಟು ಆಪ್ತರನ್ನಾಗಿಸಿತು. ಮುಂದೆ ರಫಿ ಅವರು ಓ.ಪಿ. ನಯ್ಯರ್, ಶಂಕರ್ ಜೈ ಕಿಷನ್, ಎಸ್.ಡಿ. ಬರ್ಮನ್, ನೌಷಾದ್ ಅಂತಹ ಸಂಗೀತ ನಿರ್ದೇಶಕರ ಕಣ್ಮಣಿ ಆದರು. ‘ಪ್ಯಾಸಾ’, ‘ಕಾಗಜ್ ಕೆ ಫೂಲ್’, ‘ಕೊಹಿನೂರ್’, ‘ತೆರೆ ಘರ್ ಕಿ ಸಾಮನೆ’, ‘ಗೈಡ್’, ‘ಅಭಿಮಾನ್’, ‘ಆರಾಧನ’, ‘ನಯಾ ದೌರ್’, ‘ತುಮ್ಸಾ ನಹಿ ದೇಖಾ’, ‘ಕಾಶ್ಮೀರ್ ಕಿ ಕಲಿ’ ಮುಂತಾದ ಸಿನಿಮಾಗಳಲ್ಲಿ ಅವರ ಹಾಡುಗಳು ಒಂದಕ್ಕಿಂದ ಮತ್ತೊಂದು ಎಂಬಂತೆ ಪ್ರಖ್ಯಾತವಾದವು. ದಿಲೀಪ್ ಕುಮಾರ್ ನಟಿಸಿದ ‘ಮಧುಬನ್ ಮೆ ರಾಧಿಕಾ ನಾಛೆ ರೆ’ ಎಂಬ ‘ಕೊಹಿನೂರ್’ ಚಿತ್ರದ ಹಾಡು 1960ರಲ್ಲಿ ಮೂಡಿ ಬಂದ ಅತ್ಯಂತ ಜನಪ್ರಿಯ ಗೀತೆ.
‘ಚಾದ್ವೀ ಕ ಚಾಂದ್’ ಅವರಿಗೆ ಪ್ರಥಮ ಫಿಲಂ ಫೇರ್ ಪ್ರಶಸ್ತಿಯನ್ನೂ, ‘ಬಾಬುಲ್ ಕಿ ದುಯೇ ಲೇತಿ ಜಾ’ ರಾಷ್ಟ್ರಪ್ರಶಸ್ತಿಯನ್ನೂ ತಂದುಕೊಟ್ಟಿತು. ‘ತೆರಿ ಪ್ಯಾರಿ ಪ್ಯಾರಿ ಸೂರತ್ ಕೋ’, ‘ಬಾಹಾರೋನ್ ಫೂಲ್ ಬರ್ಸಾವೋ’, ‘ದಿಲ್ ಕೆ ಝರೋಖೆ ಮೇಂ’, ‘ಯಾಹೂ, ಛಾಯೆಕೊಯಿ ಮುಜ್ಹೆ ಜಂಗಲೀ ಕಹೆ’ ಮುಂತಾದ ಹಾಡುಗಳು ಇನ್ನಿಲ್ಲದ ಜನಪ್ರಿಯತೆ, ಪ್ರಶಸ್ತಿಗಳನ್ನು ಬಾಚಿದವು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅನಿಲ್ ಕಫೂರ್ ಭಾರತೀಯ ಚಿತ್ರರಂಗದ ಯಶಸ್ವೀ ನಟರಲ್ಲಿ ಒಬ್ಬರು.

Sat Dec 24 , 2022
  ಅನಿಲ್ ಕಫೂರ್ ಭಾರತೀಯ ಚಿತ್ರರಂಗದ ಯಶಸ್ವೀ ನಟರಲ್ಲಿ ಒಬ್ಬರು. ನಟ ಹಾಗೂ ನಿರ್ಮಾಪಕರಾದ ಅನಿಲ್ ಕಪೂರ್ ಹಿಂದಿ ಭಾಷೆಯಲ್ಲಿ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಂತರರಾಷ್ಟೀಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಮೆಚ್ಚುಗೆ ಪಡೆದ ಇವರು ಕಿರುತೆರೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ ಅನಿಲ್ ಕಪೂರ್ 1956ರ ಡಿಸೆಂಬರ್ 24ರಂದು ಮುಂಬೈನಲ್ಲಿ ಜನಿಸಿದರು. ತಂದೆ ಸುರಿಂದರ್ ಕಪೂರ್ ಸಿನಿಮಾ ನಿರ್ಮಾಪಕರು. ಹೀಗಾಗಿ ಅನಿಲ್ ಕಪೂರ್ ಅವರಿಗೆ ಸಿನಿಮಾದ ಬಗ್ಗೆ ಅತಿಯಾದ ಆಸಕ್ತಿ ಇತ್ತು. […]

Advertisement

Wordpress Social Share Plugin powered by Ultimatelysocial