ಅನುಮಾನಾಸ್ಪದವಾಗಿ ಓಡಾಡುತ್ತಿದೆ ಅಂತಾ ಕೋಳಿಯನ್ನು ವಶಕ್ಕೆ ಪಡೆದ ಪೊಲೀಸರು..!

ವಾಷಿಂಗ್ಟನ್​: ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸುವುದನ್ನು ನೋಡಿದ್ದೇವೆ. ಆದರೆ, ಅಮೆರಿಕದಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಅನುಮಾನಾಸ್ಪದವಾಗಿ ಓಡಾಡುತ್ತಿದೆ ಎಂದು ಅಲ್ಲಿನ ಪೊಲೀಸರು ಕೋಳಿಯನ್ನು ವಶಕ್ಕೆ ಪಡೆದಿದ್ದಾರೆ.ಅಮೆರಿಕದ ಸೇನಾ ಕಚೇರಿ ಇರುವ ಪೆಂಟಗನ್​ನ ಭದ್ರತಾ ಏರಿಯಾ ಸುತ್ತ ಕೋಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರಿಂದ ಅದನ್ನು ವಶಕ್ಕೆ ಪಡೆದಿದ್ದಾರೆಂದು ಅಮೆರಿಕದ ಪ್ರಾಣಿ ದಯಾ ಸಂಘವೊಂದು ಮಾಹಿತಿ ನೀಡಿದೆ. ಆ ಕೋಳಿ ಎಲ್ಲಿಂದ ಬಂತು? ಪೆಂಟಗನ್‌ ಏರಿಯಾ ಒಳಗೆ ಹೇಗೆ ಬಂತು ಎಂದು ಅಧಿಕಾರಿಗಳು ಹೇಳಿಲ್ಲ.ಕೋಳಿಯನ್ನು ಹೆನ್ನಿ ಪೆನ್ನಿ ಎಂದು ಕರೆಯಲಾಗುತ್ತಿದೆ. ಸದ್ಯ ಆ ಕೋಳಿಯನ್ನು ವರ್ಜೀನಿಯಾದಲ್ಲಿ ಕೋಳಿ ಫಾರ್ಮ್ ಹೊಂದಿರುವ ವ್ಯಕ್ತಿಯೊಬ್ಬರು ತೆಗೆದುಕೊಂಡು ಹೋಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಏನೇ ಆಗಲಿ ಇಲ್ಲಿಯವರೆಗೆ ಅನುಮಾನದ ಮೇಲೆ ಜನರನ್ನು ಬಂಧಿಸಿರುವುದನ್ನು ನೋಡಿದ್ದೇವೆ. ಆದರೆ ಕೋಳಿಯನ್ನು ಈ ರೀತಿ ಬಂಧಿಸಿರುವುದು ಇದೇ ಮೊದಲು ಅನಿಸುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಿಲಿಗುರಿ 'ಡಾಕ್' ರೋಗಿಗೆ ಹಾನಿಯನ್ನು ಪಾವತಿಸಲು ಕೇಳಿದರು;

Sat Feb 5 , 2022
ಪಶ್ಚಿಮ ಬಂಗಾಳ ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ (WBSCDRC) ಸಿಲಿಗುರಿ ಸರ್ಕ್ಯೂಟ್ ಬೆಂಚ್ (ಎಸ್‌ಸಿಬಿ) ತನ್ನ ರೋಗಿಗೆ ತಪ್ಪು ಚಿಕಿತ್ಸೆ ಮತ್ತು ವೈದ್ಯಕೀಯ ನಿರ್ಲಕ್ಷ್ಯ, ದೈಹಿಕ ಗಾಯ, ಮಾನಸಿಕ ಸಂಕಟ ಮತ್ತು ಕಿರುಕುಳವನ್ನು ಉಂಟುಮಾಡಿದ ಆರೋಪದ ಮೇಲೆ 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸುವಂತೆ ಒಬ್ಬ ವೈದ್ಯಾಧಿಕಾರಿಯನ್ನು ಕೇಳಿದೆ. . ಫುಲ್ಬರಿ ಹೈಯರ್ ಸೆಕೆಂಡರಿ ಶಾಲೆಯ 11 ನೇ ತರಗತಿ ವಿದ್ಯಾರ್ಥಿನಿ ಸಮೀನಾ ಖಾತುನ್ ಅವರು 21 ಜನವರಿ […]

Advertisement

Wordpress Social Share Plugin powered by Ultimatelysocial