ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಸಂಕಷ್ಟ, ನೈರುತ್ಯ ರೈಲ್ವೆ ಮಾತ್ರ ಆರಾಮವಾಗಿ ಓಡ್ತಿದೆ!

ಹುಬ್ಬಳ್ಳಿ(ಮೇ.19): ಕಲ್ಲಿದ್ದಲು ಕೊರತೆಯಿಂದ (Coal Shortage) ಭಾರತ ದೇಶಾದ್ಯಂತ ನೂರಾರು ರೈಲುಗಳ (Train) ಸಂಚಾರ ಸ್ಥಗಿತಗೊಂಡಿದೆ. ದೇಶಾದ್ಯಂತ ತೀವ್ರ ವಿದ್ಯುತ್ (Electricity) ಸಂಕಷ್ಟ ಎದುರಾಗಿದ್ದು, ವಿದ್ಯುತ್ ಅಭಾವದಿಂದ ರೈಲು ಇಲಾಖೆಯೂ ಸಂಕಷ್ಟ ಅನುಭವಿಸುವಂತಾಗಿದೆ.
ಕಲ್ಲಿದ್ದಲು ಕೊರತೆ ವಿದ್ಯುತ್ ತಯಾರಿಕೆ ಮೇಲೆ ಪ್ರತಿಕೂಲ ಪರಿಣಾಮವಾಗಿದ್ದು, ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿಯೇ ಮಹತ್ವದ ಹೆಜ್ಜೆ ಇಡೋ ಮೂಲಕ ನೈರುತ್ಯ ರೈಲ್ವೆ ಗಮನ ಸೆಳೆಯಲಾರಂಭಿಸಿದೆ. ಹುಬ್ಬಳ್ಳಿಯನ್ನು (Hubballi) ಕೇಂದ್ರ ಸ್ಥಾನವಾಗಿಸಿಕೊಂಡಿರೋ ನೈರುತ್ಯ ರೈಲ್ವೆ ವಿದ್ಯುತ್ ಸ್ವಾವಲಂಬನೆಯತ್ತ ಸಾಗಿದೆ.
ತನ್ನ ವ್ಯಾಪ್ತಿಯ 308 ರೈಲ್ವೆ ನಿಲ್ದಾಣಗಳ ಪೈಕಿ 120 ರೈಲ್ವೆ ನಿಲ್ದಾಣಗಳಿಗೆ ಸೌರಶಕ್ತಿ ಅಳವಡಿಕೆ ಮಾಡಿದೆ. ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಲಯ ಜಿಎಂ ಕಛೇರಿ ರೈಲ್ ಭವನ್, ಮೂರು ವಿಭಾಗೀಯ ವ್ಯವಸ್ಥಾಪಕರ ಕಛೇರಿ, ರೈಲ್ವೆ ವರ್ಕ್ ಶಾಪ್, ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಸೌರಶಕ್ತಿ ಅಳವಡಿಕೆ ಮಾಡಲಾಗಿದೆ. ನೈರುತ್ಯ ರೈಲ್ವೆ ವಲಯದಾದ್ಯಂತ 4535 ಕೆಡಬ್ಲ್ಯುಪಿ ಸಾಮರ್ಥ್ಯದ ಸೋಲಾರ್ ಪೆನಲ್ ಅಳವಡಿಕೆ ಮಾಡಲಾಗಿದೆ.
120 ನಿಲ್ದಾಣಗಳ ಮೇಲ್ಛಾವಣಿಗಳಿಗೆ ಹಾಗೂ 7 ಸರ್ವಿಸ್ ಬಿಲ್ಡಿಂಗ್ ಗಳಿಗೆ ಸೌರ ಫಲಕ
ರೈಲು ನಿಲ್ದಾಣ, ಸರ್ವಿಸ್ ಬಿಲ್ಡಿಂಗ್, ಎಲ್ಸಿ ಗೇಟ್ಸ್ ಸೇರಿ ಇತರೆಡೆ ಸೌರ ಫಲಕಗಳನ್ನು ಅಳವಡಿಸಲಾಗಿದೆ. ಹುಬ್ಬಳ್ಳಿ, ಕೆಎಸ್‌ಆರ್ ಬೆಂಗಳೂರು, ಮೈಸೂರು, ಯಶವಂತಪುರ, ಹೊಸಪೇಟೆ, ಗದಗ, ಬಳ್ಳಾರಿ ಸೇರಿ 120 ನಿಲ್ದಾಣಗಳ ಮೇಲ್ಛಾವಣಿಗಳಿಗೆ ಹಾಗೂ 7 ಸರ್ವಿಸ್ ಬಿಲ್ಡಿಂಗ್ ಗಳಿಗೆ ಅಳವಡಿಕೆ ಮಾಡಲಾಗಿದೆ.
ವಿದ್ಯುತ್ ವೆಚ್ಚದಲ್ಲಿಯೂ ಉಳಿತಾಯ
ರೈಲು ನಿಲ್ದಾಣ ಹಾಗೂ ಇತರ ಕಟ್ಟಡಗಳಿಗೆ ಅಗತ್ಯ ವಿದ್ಯುತ್ ಸೌಲಭ್ಯ ಸಿಗಲಾರಂಭಿಸಿದ್ದು, ರೈಲ್ವೆ ಇಲಾಖೆಗೆ ಸಾಕಷ್ಟು ವಿದ್ಯುತ್ ವೆಚ್ಚದಲ್ಲಿಯೂ ಉಳಿತಾಯವಾಗಲಾರಂಭಿಸಿದೆ. ಕಳೆದ ವರ್ಷ ನೈರುತ್ಯ ರೈಲ್ವೆ ವಲಯದ ವ್ಯಾಪ್ತಿಯಲ್ಲಿ 2.09 ಕೋಟಿ ರೂಪಾಯಿ ವಿದ್ಯುತ್ ಉಳಿತಾಯವಾಗಿತ್ತು.
1.96 ಕೋಟಿ ಬಿಲ್ ಉಳಿತಾಯ
2021-22 ರಲ್ಲಿ ಸೌರಶಕ್ತಿಯಿಂದ 46,11ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ, 1.96 ಕೋಟಿ ಬಿಲ್ ಉಳಿತಾಯ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಹೆಚ್ಚುವರಿ 26 ರೈಲ್ವೆ ನಿಲ್ದಾಣಗಳಲ್ಲಿ ಸೌರಶಕ್ತಿ ಅಳವಡಿಕೆಗೆ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ರೈಲ್ವೆ ವಿದ್ಯುದೀಕರಣ ಕಾಮಗಾರಿ ಜೊತೆ ಸೌರಶಕ್ತಿ ಅಳವಡಿಕೆಗೆ ವಿಶೇಷ ಆದ್ಯತೆ ನೀಡಲಾಗಿದೆ. 2020-21ನೇ ಸಾಲಿನಲ್ಲಿ ರೈಲ್ ಸೌಧದಲ್ಲಿ 100 ಕೆಡಬ್ಲ್ಯೂಪಿ ಸೌರ ಫಲಕಗಳನ್ನು ಅಳವಡಿಕೆ ಮಾಡಿದ್ದು, ಇದರಿಂದ 1.008 ಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿ, 9.07 ಲಕ್ಷ ರೂ. ಉಳಿತಾಯ ಮಾಡಲಾಗಿದೆ.
20 ರೈಲು ನಿಲ್ದಾಣಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವ ಯೋಜನೆ
ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕರ ಕಚೇರಿಯಲ್ಲಿ 320 ಕೆಡಬ್ಲ್ಯೂಪಿ ಸೌರ ಫಲಕಗಳನ್ನು ಅಳವಡಿಕೆ ಮಾಡಿದ್ದು, ಇದರಿಂದ 3.42 ಲಕ್ಷ ಯುನಿಟ್ ಉತ್ಪಾದನೆ, 11.37 ಲಕ್ಷ ರೂ. ಪ್ರತಿ ವರ್ಷ ಉಳಿತಾಯ ಮಾಡಲಾಗಿದೆ. 2021-22ನೇ ಸಾಲಿನಲ್ಲಿ 20 ರೈಲು ನಿಲ್ದಾಣಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವ ಯೋಜನೆ ರೂಪಿಸಲಾಗಿದೆ. ಹೆಚ್ಚುವರಿ ವಿದ್ಯುತ್ ಪವರ್ ಗ್ರಿಡ್ ಮೂಲಕ ರಾಜ್ಯದ ಜನತೆಗೆ ಪೂರೈಕೆ ಮಾಡಲಾಗುತ್ತಿದೆ.
ಆ ಮೂಲಕವೂ ಲಾಭ ಗಳಿಸುವತ್ತ ನೈರುತ್ಯ ರೈಲ್ವೆ ವಲಯ ಮಹತ್ವದ ಹೆಜ್ಜೆ ಇಟ್ಟಿದೆ. ಸೌರಶಕ್ತಿ ಅಳವಡಿಕೆ, ವಿದ್ಯುದೀಕರಣ, ಮಳೆನೀರು ಕೊಯ್ಲು ವಿಚಾರದಲ್ಲಿ ನೈರುತ್ಯ ರೈಲ್ವೆ ವಲಯ ದೇಶದಲ್ಲಿಯೇ ಮುಂಚೂಣಿಯಲ್ಲಿದೆ.
‘ಶೂನ್ಯ ವಾಯು ಮಾಲಿನ್ಯ’
2030ನೇ ವರ್ಷದ ಒಳಗೆ ‘ಶೂನ್ಯ ವಾಯು ಮಾಲಿನ್ಯ’ದ ಉದ್ದೇಶವನ್ನು ಸಾಧಿಸಲು ಬದ್ಧವಾಗಿದ್ದೇವೆ. ಶೂನ್ಯ ಇಂಗಾಲ ಹೊರಸೂಸುವ ರೈಲ್ವೆ ಯಾಗಿ ಹೊರಹೊಮ್ಮುವುದು ನಮ್ಮ ಗುರಿಯಾಗಿದೆ. ಸಾಧ್ಯವಿರುವ ಕಡೆಗಳಲ್ಲೆಲ್ಲಾ ಸೋಲಾರ್ ಪೆನಲ್ ಗಳ ಅಳವಡಿಕೆ ಮಾಡ್ತೇವೆ. ಆ ಮೂಲಕ ದೊಡ್ಡ ಮೊತ್ತದ ವಿದ್ಯುತ್ ವೆಚ್ಚ ಉಳಿತಾಯ ಮಾಡ್ತೇವೆ ಎಂದು ನ್ಯೂಸ್ 18 ಕನ್ನಡಕ್ಕೆ ಸಿ.ಪಿ.ಆರ್.ಒ ಅನೀಶ್ ಹೆಗಡೆ ಮಾಹಿತಿ ನೀಡಿದ್ದಾರೆ.
ನೈರುತ್ಯ ರೈಲ್ವೆಯ ಪ್ರಯತ್ನಕ್ಕೆ ಸಾರ್ವಜನಿಕರೂ ಫಿದಾ
ನೈರುತ್ಯ ರೈಲ್ವೆಯ ಪ್ರಯತ್ನಕ್ಕೆ ಸಾರ್ವಜನಿಕರೂ ಫಿದಾ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಮತ್ತು ಹೈಡ್ರೋ ಪವರ್ ಮೇಲೆ ಹೆಚ್ಚು ಅವಲಂಬನೆಯಾಗೋದು ಕಷ್ಟ. ಪ್ರಕೃತಿದತ್ತವಾಗಿ ಸಿಗೋ ಸೂರ್ಯನ ಬೆಳಕು ಹಾಗೂ ಗಾಳಿಯಿಂದ ವಿದ್ಯುತ್ ತಯಾರಿಕೆಗೆ ಆದ್ಯತೆ ಕೊಟ್ಟಲ್ಲಿ ವಿದ್ಯುತ್ ಸ್ವಾವಲಂಬನೆಗೆ ನೆರವಾಗಲಿದೆ. ಈ ನಿಟ್ಟಿನಲ್ಲಿ ನೈರುತ್ಯ ರೈಲ್ವೆ ಎಲ್ಲ ಇಲಾಖೆಗಳಿಗೂ ಮಾದರಿಯಾಗಿದೆ ಎನ್ನುತ್ತಾರೆ ಹುಬ್ಬಳ್ಳಿಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ...

Thu May 19 , 2022
  ಮೈಸೂರು: ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತೇನೆ ಎಂಬ ಊಹಾಪೋಹದ ಸುದ್ದಿಗಳಿಗೂ ನಮಗೂ ಸಂಬಂಧವಿಲ್ಲ. ನಾನು ಕೇಂದ್ರ ಸಚಿವೆಯಾಗಿ ದೊಡ್ಡ ಅವಕಾಶವನ್ನು ನಮ್ಮ ಪಕ್ಷ ನೀಡಿದೆ. ರಾಜ್ಯದಲ್ಲಿ ಹರಡುತ್ತಿರುವ ಸುದ್ದಿಗಳಿಗೂ ನನಗೂ ಸಂಬಂಧವಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರ ಗೋಮುಖ ವ್ಯಾಘ್ರತನ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಮೈಸೂರಿನ ಅಭಿವೃದ್ಧಿಗೆ ಅವರ ಕೊಡುಗೆ ಏನು ಎಂದು ಅವರು ಎದೆ ಮುಟ್ಟಿಕೊಂಡು ಹೇಳಲಿ. […]

Advertisement

Wordpress Social Share Plugin powered by Ultimatelysocial