ನಟಿ ಸಮಂತಾ ಸವಾಲ್

ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರೆಲ್ಲಾ, ಒಬ್ಬರು ಇನ್ನೊಬ್ಬರಿಗೆ ಸವಾಲು ಹಾಕುವುದರಲ್ಲೇ ಕಳೆದ ಮೂರು ತಿಂಗಳಿನಿಂದ ಬಿಜಿಯಾಗಿದ್ದಾರೆ. ಸದ್ಯಕ್ಕೆ ಅಲ್ಲಿ ಬಹಳ ಜನಪ್ರಿಯವಾಗಿರುವುದು ‘ಗ್ರೀನ್ ಇಂಡಿಯಾ’ ಚಾಲೆಂಜ್.ಈ ಚಾಲೆಂಜ್‌ನಲ್ಲಿ ಒಬ್ಬ ಸೆಲೆಬ್ರಿಟಿ ಮನೆಯ ಹಿಂದೆ ಮೂರು ಗಿಡಗಳನ್ನು ನೆಡುವುದರ ಜತೆಗೆ, ಮೂರು ಜನರಿಗೆ ಅದೇ ರೀತಿ ಮಾಡುವುದಕ್ಕೆ ನಾಮಿನೇಟ್ ಮಾಡಬೇಕು. ಆ ಮೂರು ಜನ, ಮೂರ್ಮೂರಂತೆ ಒಂಬತ್ತು ಜನರನ್ನು ನಾಮಿನೇಟ್ ಮಾಡಬೇಕು. ಕಳೆದ ವಾರ ತಮ್ಮ ಹಿತ್ತಿಲಲ್ಲಿ ಗಿಡಗಳನ್ನು ನೆಟ್ಟ ಸಮಂತಾ, ರಶ್ಮಿಕಾ ಮಂದಣ್ಣ ಅವರನ್ನು ನಾಮನಿರ್ದೇಶನ ಮಾಡಿದ್ದರು.ಸಮಂತಾ ಹಾಕಿದ್ದ ಸವಾಲನ್ನು ಸ್ವೀಕರಿಸಿರುವ ರಶ್ಮಿಕಾ ಮಂದಣ್ಣ, ಮನೆಯ ಹಿಂದೆ ತೋಟದಲ್ಲಿ ಗಿಡ ನೆಟ್ಟಿದ್ದಾರೆ. ಅಷ್ಟೇ ಅಲ್ಲ, ಗಿಡ ನೆಡುತ್ತಿರುವ ಫೋಟೋವೊಂದನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಇಂಥದ್ದೊಂದು ಕೆಲಸಕ್ಕೆ ಹಚ್ಚಿದ ಸಮಂತಾ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸೈಬರ್ ಒಪ್ಪಂದಕ್ಕೆ ಸಹಿಹಾಕಿದ ಭಾರತ ಇಸ್ರೇಲ್

Fri Jul 17 , 2020
ಸೈಬರ್ ಭದ್ರತೆಯಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವ ಒಪ್ಪಂದಕ್ಕೆ ಭಾರತ ಮತ್ತು ಇಸ್ರೇಲ್ ಸಹಿ ಹಾಕಿವೆ. ಇಸ್ರೇಲ್‌ನ ನ್ಯಾಷನಲ್ ಸೈಬರ್ ನಿರ್ದೇಶನಲಯದ ಮಹಾ ನಿರ್ದೇಶಕ ಯಿಗಲ್ ಉನ್ನಾ ಹಾಗೂ ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರಿ ಸಂಜೀವ್ ಶುಕ್ಲಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕೊರೊನಾ ಕಾಲಘಟ್ಟದಲ್ಲಿ ಡಿಜಿಟಲೀಕರಣ ತೀವ್ರ ವೇಗ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಭದ್ರತೆಯಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವ ಒಪ್ಪಂದಕ್ಕೆ ಭಾರತ ಮತ್ತು ಇಸ್ರೇಲ್ ಸಹಿ ಹಾಕಿವೆ. ಸೈಬರ್ ಕಳ್ಳರಿಂದ ಆನ್‌ಲೈನ್ […]

Advertisement

Wordpress Social Share Plugin powered by Ultimatelysocial