ಮಂಡ್ಯ: ಅಲುಗಾಡುತ್ತಿದೆಯಾ ಜೆಡಿಎಸ್‌ ಭದ್ರಕೋಟೆ

ಮಂಡ್ಯ: ಜೆಡಿಎಸ್‌ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆ ಕಳೆದೆರಡು ಚುನಾವಣೆಗಳಿಂದ ತನ್ನ ಅಸ್ತಿತ್ವಕಳೆದುಕೊಳ್ಳುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿದ್ದು, ಜಿಲ್ಲೆಯಲ್ಲಿ ಪಕ್ಷದ ನಾಯಕತ್ವದ ಪ್ರಶ್ನೆಯೂ ಎದ್ದಿದೆ. ಅಲ್ಲದೆ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಶಾಸಕರ ನಡುವೆ ಅಂತರ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.ಈಗಾಗಲೇ ಲೋಕಸಭೆ ಹಾಗೂ ವಿಧಾನಪರಿಷತ್‌ ಚುನಾವಣೆಯ ಸೋಲಿ ನಿಂದ ಭದ್ರಕೋಟೆ ಅಲುಗಾಡುವ ಸ್ಥಿತಿಗೆ ಬಂದು ನಿಂತಿದೆ.ಇದಕ್ಕೆ ದಳಪತಿಗಳ ನಡುವಿನ ಒಗ್ಗಟ್ಟು ಹಾಗೂ ನಾಯಕತ್ವದ ಕೊರತೆಯೂ ಕಾರಣವಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಶಾಸಕ ಸಿ.ಎಸ್‌.ಪುಟ್ಟರಾಜು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಎಚ್‌ಡಿಕೆ-ಪುಟ್ಟರಾಜು ಮುನಿಸು: ಪಕ್ಷದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಪಾಂಡವ ಪುರ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಅವರನಡುವೆ ಎಲ್ಲವೂ ಸರಿಯಿಲ್ಲ ಎಂಬುದು ತಿಳಿದವಿಚಾರವಾಗಿದೆ. ಆದರೆ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಮಾತಿಗೆ ಕಟ್ಟುಬಿದ್ದಿರುವ ಪುಟ್ಟರಾಜು ಎಲ್ಲವನ್ನು ಸಹಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕಾರ್ಯಕರ್ತರು ಮುಖ್ಯ: ಗುರುವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡುವ ಮೊದಲು ದೇವೇ ಗೌಡರಿಗೆ ತಿಳಿಸಿದ್ದೆ ಎಂದು ಪುಟ್ಟರಾಜು ಹೇಳುತ್ತಾರೆ.ಆದರೆ ಕುಮಾರಸ್ವಾಮಿ ಬಗ್ಗೆ ಚಕಾವೆತ್ತಿಲ್ಲ. ಅಲ್ಲದೆ, ಕುಮಾರಸ್ವಾಮಿ ಸಹ ಚನ್ನಪಟ್ಟಣದಲ್ಲಿಯಾರೇ ಪಕ್ಷ ಬಿಟ್ಟರೂ ತೊಂದರೆಯಿಲ್ಲ. ಪಕ್ಷ,ಕಾರ್ಯಕರ್ತರು ಮುಖ್ಯ ಎಂದಿದ್ದಾರೆ. ಅಲ್ಲದೆ,ಪುಟ್ಟರಾಜು ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ವಿಚಾರ ನನಗೆ ಗೊತ್ತಿಲ್ಲ ಎಂದಿರುವುದು ಎಲ್ಲ ಅನುಮಾನಕ್ಕೂ ಪುಷ್ಟಿ ನೀಡಿದಂತಾಗಿದೆ.

ಈಗಾಗಲೇ ಹಲವು ಬಾರಿಶಾಸಕ ಪುಟ್ಟರಾಜು ಅವರ ಮನವೊಲಿಸಿ ಪಕ್ಷ ಬಿಡದಂತೆ ದೇವೇಗೌಡರು ಮನವೊಲಿಸಿದ್ದರು ಎಂದು ಹೇಳುತ್ತಾರೆ ಜೆಡಿಎಸ್‌ ಮುಖಂಡರೊಬ್ಬರು.

ಒಗ್ಗಟ್ಟಿನ ಕೊರತೆ: ಪ್ರಸ್ತುತ ಜೆಡಿಎಸ್‌ ಪಕ್ಷದಲ್ಲಿ ಒಗ್ಗಟ್ಟಿನ ಕೊರತೆ ಕಾಡುತ್ತಿದೆ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಲು ಯಾರೂ ಮುಂದಾಗುತ್ತಿಲ್ಲ. ವಿಧಾನ ಪರಿಷತ್‌ ಚುನಾವಣೆಯಲ್ಲಿ ದೇವೇಗೌಡರು ಹಾಗೂಕುಮಾರಸ್ವಾಮಿ ಬಂದಾಗ ಮಾತ್ರ ಒಗ್ಗಟ್ಟು ಎಂದು ಬಿಂಬಿಸಿಕೊಂಡವರು ಮತ್ತೆ ಒಂದುಗೂಡಲಿಲ್ಲ.ಶಾಸಕರಾದ ಎಂ.ಶ್ರೀನಿವಾಸ್‌, ಸಿ.ಎಸ್‌.ಪುಟ್ಟರಾಜುಈಗಾಗಲೇ ಕುಮಾರಸ್ವಾಮಿ ಶಕ್ಯದಿಂದ ದೂರಸರಿಯುತ್ತಿದ್ದಾರೆ. ಅತ್ತ ಹಿರಿಯ ಶಾಸಕ ಡಿ.ಸಿ.ತಮ್ಮಣ್ಣ,ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ.ಅನ್ನದಾನಿ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿದ್ದಾರೆ.

ಕಾಂಗ್ರೆಸ್‌ ಸೇರುವ ಬಗ್ಗೆ ವದಂತಿ :

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಈಗಾಗಲೇ ಜೆಡಿಎಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಇವರ ಜತೆಯಲ್ಲಿಯೇ ಶಾಸಕ ಸಿ.ಎಸ್‌.ಪುಟ್ಟರಾಜು, ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇ ಗೌಡ ಅವರು ಕಾಂಗ್ರೆಸ್‌ ಸೇರುವ ಚರ್ಚೆ, ವದಂತಿಗಳು ಹರಿದಾಡುತ್ತಿವೆ. ಈಗಾಗಲೇ ಮರಿತಿಬ್ಬೇಗೌಡ ಹಾಗೂ ಕೆ.ಟಿ.ಶ್ರೀಕಂಠೇಗೌಡ ನಡುವೆ ತಮ್ಮ ಆಪ್ತರಿಗೆ ದಕ್ಷಿಣ ಪದವೀಧರ ಕ್ಷೇತ್ರದ ಟಿಕೆಟ್‌ ಕೊಡಿಸುವ ನಿಟ್ಟಿನಲ್ಲಿ ಕೋಲ್ಡ್‌ ವಾರ್‌ ನಡೆದಿತ್ತು. ಕೊನೆಗೆ ಶ್ರೀಕಂಠೇಗೌಡ ತಮ್ಮ ಆಪ್ತನಿಗೆ ಟಿಕೆಟ್‌ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಮರಿತಿಬ್ಬೇಗೌಡ ಅಸಮಾಧಾನಗೊಂಡಿದ್ದು, ಪಕ್ಷದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ.

ಜಿಲ್ಲೆಯಲ್ಲಿ ನಾವಿಕನಿಲ್ಲದ ದೋಣಿ :

ಜಿಲ್ಲೆಯಲ್ಲಿ ನಾಯಕತ್ವದ ಕೊರತೆಯೂ ಜೆಡಿಎಸ್‌ ಪಕ್ಷವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ದೇವೇಗೌಡರು ತಿಳಿಸಿದ್ದರು. ಆದರೆ ಸಾಮೂಹಿಕವಾಗಿ ಶಾಸಕರು ಚುನಾವಣೆಯಲ್ಲಿ ಒಂದಾಗಲೇ ಇಲ್ಲ. ತಮ್ಮ ಕ್ಷೇತ್ರಗಳಿಗೆ ಸೀಮಿತ ರಾಗಿದ್ದರು. ಇದರಿಂದ ಜೆಡಿಎಸ್‌ಗೆ ನಾವಿಕನಿಲ್ಲದ ದೋಣಿಯಂತಾದ ಸ್ಥಿತಿ ಎದುರಾಗಿತ್ತು. ಅಲ್ಲದೆ, ಜಿಲ್ಲೆಯ ಶಾಸಕರಿಗೆ ನಾಯಕತ್ವ ನೀಡುವ ಬದಲು ನಿಖೀಲ್‌ಕುಮಾರಸ್ವಾಮಿ ಅವರಿಗೆ ನೇತೃತ್ವ ವಹಿಸಲಾಗಿತ್ತು. ಇದು ಸಹ ಜಿಲ್ಲೆಯ ಶಾಸಕರಿಗೆಪಕ್ಷದಲ್ಲಿನ ನಾಯಕತ್ವ ಪ್ರಶ್ನಿಸುವಂತಾಗಿತ್ತು. ನಾಯಕತ್ವ ವಿಚಾರದಲ್ಲೂ ಪಕ್ಷದ ವರಿಷ್ಠರನಿರ್ಧಾರಗಳು ಜಿಲ್ಲೆಯಲ್ಲಿನ ಪಕ್ಷದ ಹಿನ್ನಡೆಗೆಕಾರಣವಾಗಿದೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿನಿಮಾ ಮಂದಿರಗಳಲ್ಲಿ 50:50 ರಿಯಾಯಿತಿ ನೀಡದಿರುವ ವಿಷಯಕ್ಕೆ ,ಸಿಎಂ ಭೇಟಿ ಮಾಡಲು ಮುಂದಾದ ಶಿವಣ್ಣ;

Sun Jan 30 , 2022
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯೇನು ಆಗುತ್ತಿಲ್ಲ. ಆದರೆ ಮೂರನೇ ಅಲೆ ಜನರಿಗೆ ಮಾರಕ ಎನ್ನುವ ಆತಂಕದಿಂದ ಸದ್ಯಕ್ಕಂತೂ ಹೊರಬಂದಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂವನ್ನು ತೆಗೆದುಹಾಕಿದೆ. ಇನ್ನು ಕೆಲವೇ ದಿನಗಳಲ್ಲಿ ನೈಟ್ ಕರ್ಫ್ಯೂವನ್ನೂ ತೆಗೆದು ಹಾಕಲು ಮುಂದಾಗಿದೆ ಎನ್ನಲಾಗಿದೆ. ಈ ಮಧ್ಯೆ 50:50 ನೀತಿಯನ್ನು ಜಾರಿ ಮಾಡಿದ್ದ ಬಹುತೇಕ ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದೆ. ರಾಜ್ಯ ಸರ್ಕಾರ ನೀಡಿರುವ ಈ ವಿನಾಯಿತಿಯಿಂದ ಥಿಯೇಟರ್‌ಗಳಿಗೆ ಮಾತ್ರ ಮುಕ್ತಿ ಸಿಕ್ಕಿಲ್ಲ. ಹೀಗಾಗಿ […]

Advertisement

Wordpress Social Share Plugin powered by Ultimatelysocial