ಮುಂದಿನ ವಾರ 4 ದಿನ ಬ್ಯಾಂಕ್‌ ರಜೆ

ಮುಂದಿನ ವಾರ ನೀವು ಬ್ಯಾಂಕ್‌ಗೆ ಹೋಗುವ ಮುನ್ನ ಯಾವೆಲ್ಲಾ ದಿನ ಬ್ಯಾಂಕ್‌ ರಜೆ ಇದೆ ಎಂದು ತಿಳಿದು ಬಳಿಕ ಬ್ಯಾಂಕ್‌ಗೆ ಭೇಟಿ ನೀಡುವುದು ಉತ್ತಮವಾಗಿದೆ. ಮುಂದಿನ ವಾರದಲ್ಲಿ ದೇಶದ ಕೆಲವು ಭಾಗಗಳಲ್ಲಿ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್‌ ರಜೆ ಇರಲಿದೆ.ಮಾರ್ಚ್ 17 ರಂದು ಹೋಳಿ ಹಬ್ಬದ ಹಿನ್ನೆಲೆಯಿಂದಾಗಿ ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ನಲ್ಲಿ ಬ್ಯಾಂಕ್‌ಗಳು ಬಂದ್‌ ಆಗಲಿದೆ.ಮಾರ್ಚ್ 18 ರಂದು ದೇಶಾದ್ಯಂತ ಹೋಳಿ ಆಚರಿಸಲಾಗುತ್ತದೆ. ಈ ಕಾರಣದಿಂದಾಗಿ ಮುಂದಿನ ವಾರ ಮಾರ್ಚ್ 18ರ ಶುಕ್ರವಾರ ಕೂಡಾ ದೇಶದ ಕೆಲವು ಪ್ರಮುಖ ನಗರಗಳಲ್ಲಿ ಬ್ಯಾಂಕ್‌ ಬಂದ್‌ ಆಗಲಿದೆ.ಶ್ರೀನಗರ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಣಜಿ, ಪಾಟ್ನಾ, ರಾಯ್‌ಪುರ, ರಾಂಚಿ, ಶಿಲ್ಲಾಂಗ್‌ನಲ್ಲಿ ಮಾರ್ಚ್ 18 ರಂದು ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.

ಸಾಮಾನ್ಯವಾಗಿ ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ವರ್ಗಾವಣೀಯ ಲಿಖಿತಗಳ ಅಧಿನಿಯಮ (ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್) ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಆಗಿದೆ.

ಮುಂದಿನ ವಾರ ನಾಲ್ಕು ದಿನಗಳು ಬ್ಯಾಂಕ್‌ ರಜೆ

* ಮಾರ್ಚ್ 17, 2022, ಗುರುವಾರ: ಹೋಲಿ ಆಚರಣೆ, ಡೆಹ್ರಾಡೂನ್, ಕಾನ್ಪುರ, ಲಕ್ನೋ, ರಾಂಚಿಯಲ್ಲಿ ಬ್ಯಾಂಕ್‌ಗಳು ಬಂದ್‌

* ಮಾರ್ಚ್ 18, 2022, ಶುಕ್ರವಾರ ಹೋಲಿ: ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಭೋಪಾಲ್, ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್‌ಟಕ್, ಗುವಾಹಟಿ, ಹೈದರಾಬಾದ್, ಜೈಪುರ, ಜಮ್ಮು, ಕಾನ್ಪುರ್, ಲಕ್ನೋ, ಮುಂಬೈ, ನಾಗ್‌ಪುರ, ನವದೆಹಲಿ, ಪಣಜಿ, ರಾಯಪುರ, ರಾಂಚಿ, ಶಿಲ್ಲಾಂಗ್, ಶಿಮ್ಲಾ, ಶ್ರೀನಗರ, ಪಾಟ್ನಾದಲ್ಲಿ ಬ್ಯಾಂಕ್‌ಗಳು ಬಂದ್‌

* ಮಾರ್ಚ್ 19, 2022, ಶನಿವಾರ: ಹೋಳಿ/ಯೋಸಾಂಗ್ ಕಾರಣ ಭುವನೇಶ್ವರ್, ಇಂಫಾಲ್, ಪಾಟ್ನಾದಲ್ಲಿ ಬ್ಯಾಂಕ್‌ಗಳು ಬಂದ್‌

* ಮಾರ್ಚ್ 20, 2022, ಭಾನುವಾರ: ಬ್ಯಾಂಕ್ ರಜೆ

ಮಾರ್ಚ್‌ನಲ್ಲಿ ಒಟ್ಟು 13 ದಿನ ಬ್ಯಾಂಕ್‌ ರಜೆ ಇದೆ. ಮಾರ್ಚ್ 22ರಂದು ಬಿಹಾರ ದಿವಸ ಹಿನ್ನೆಲೆಯಿಂದಾಗಿ ಬಿಹಾರದಲ್ಲಿ ಬ್ಯಾಂಕ್‌ ಬಂದ್‌ ಆಗಲಿದೆ. ಮಾರ್ಚ್ 26ರಂದು ನಾಲ್ಕನೇ ಶನಿವಾರವಾದ ಹಿನ್ನೆಲೆ ದೇಶದಾದ್ಯಂತ ಬ್ಯಾಂಕ್‌ಗಳು ಬಂದ್‌ ಆಗಲಿದೆ. ಇನ್ನು ಮಾರ್ಚ್ 27ರಂದು ಭಾನುವಾರ ವಾರದ ರಜೆಯಾದ ಕಾರಣ ದೇಶದಾದ್ಯಂತ ಬ್ಯಾಂಕ್‌ ಮುಚ್ಚಲಿದೆ.

ಇನ್ನುಳಿದಂತೆ ಬ್ಯಾಂಕ್‌ ಮುಷ್ಕರ ಹಿನ್ನೆಲೆ ಮಾರ್ಚ್ 28-29ರಂದು ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕಾರ್ಮಿಕ ಸಂಘಟನೆಗಳು ಕಳೆದ ತಿಂಗಳು ಫೆಬ್ರವರಿ 23-24 ರ ರಾಷ್ಟ್ರವ್ಯಾಪಿ ಮುಷ್ಕರವನ್ನು ನಡೆಸಲು ಮುಂದಾಗಿತ್ತು. ಕೇಂದ್ರ ಸರ್ಕಾರದ ‘ಕಾರ್ಮಿಕ ವಿರೋಧಿ’ ನೀತಿಗಳನ್ನು ವಿರೋಧಿಸಿ ಹಾಗೂ ಬ್ಯಾಂಕುಗಳ ಖಾಸಗೀಕರಣವನ್ನು ವಿರೋಧ ಮಾಡಿ ಹಲವಾರು ಕೇಂದ್ರ ಕಾರ್ಮಿಕ ಸಂಘಟನೆಗಳು ಮಾರ್ಚ್ 28-29ರಂದು ಮುಷ್ಕರ ನಡೆಸಲಿದೆ. ಈ ಹಿನ್ನೆಲೆಯಿಂದಾಗಿ ಈ ಎರಡು ದಿನಗಳು ಬ್ಯಾಂಕ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಬಹುದು

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್‌ ತೊರೆಯಲು ಅಮೆರಿಕ ಪ್ರಜೆಗಳಿಗೆ ರಾಯಭಾರ ಕಚೇರಿ ಸೂಚನೆ

Mon Mar 14 , 2022
ಕೀವ್‌: ಉಕ್ರೇನ್‌ ತೊರೆಯುವಂತೆ ತನ್ನ ಪ್ರಜೆಗಳಿಗೆ ಅಮೆರಿಕದ ರಾಯಭಾರ ಕಚೇರಿ ಸೋಮವಾರ ಸೂಚಿಸಿದೆ.   ಈ ಕುರಿತು ಟ್ವೀಟ್‌ ಮಾಡಿರುವ ರಾಯಭಾರ ಕಚೇರಿಯು, ‘ಸುರಕ್ಷಿತವಾಗಿದ್ದರೆ ರಸ್ತೆ ಸಾರಿಗೆಯ ಮೂಲಕ ಉಕ್ರೇನ್‌ನಿಂದ ಹೊರಡುವಂತೆ ನಾವು ಅಮೆರಿಕ ನಾಗರಿಕರಿಗೆ ಸೂಚಿಸುತ್ತೇವೆ’ ಎಂದು ತಿಳಿಸಿದೆ. ‘ಉಕ್ರೇನ್‌ನ ಗಡಿಗಳು ತೆರೆದಿರುತ್ತವೆ. ರಸ್ತೆಗಳಲ್ಲಿನ ಅಪಾಯಗಳನ್ನು ಪರಿಗಣಿಸಿ ಅಮೆರಿಕ ನಾಗರಿಕರು ಉಕ್ರೇನ್‌ ತೊರೆಯಬೇಕು’ ಎಂದು ರಾಯಭಾರ ಕಚೇರಿ ಹೇಳಿದೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹಾಗೂ ಉಕ್ರೇನ್‌ […]

Advertisement

Wordpress Social Share Plugin powered by Ultimatelysocial