ವಿಕ್ರಾಂತ್ ರೋಣ’ ‘ಗಡಾಂಗ್ ರುಕ್ಕಮ್ಮ’ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್..!

ಸಾಮಾನ್ಯವಾಗಿ ಸಿನಿಮಾದ ಟ್ರೇಲರ್, ಟೀಸರ್, ಹಾಡು ಹೀಗೆ ರಿಲೀಸ್ ಮಾಡಿ ಒಂದೊಂದೇ ಹಂತದಲ್ಲಿ ಪ್ರಚಾರ ಮಾಡುತ್ತಾ, ಆನಂತರ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವುದನ್ನು ನೋಡಿದ್ದೇವೆ. ಆದರೆ, ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆ ಮಾಡಲಾಗಿದ್ದು, ಇದೀಗ ಹಾಡುಗಳನ್ನು ರಿಲೀಸ್ ಮಾಡಲು ಹೊರಟಿದೆ ಚಿತ್ರತಂಡ.

ಜುಲೈ 28ಕ್ಕೆ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮೊನ್ನೆಯಷ್ಟೇ ಕೆಲವು ಅಪ್ಡೇಟ್‍ ಗಳನ್ನು ಚಿತ್ರತಂಡವು ನೀಡಿತ್ತು. ವಿದೇಶಗಳಲ್ಲಿ ಸಿನಿಮಾ ವಿತರಣೆ ಹಾಗೂ 3 ಡಿ ಸಿನಿಮಾವನ್ನು ಯಾರು ರಿಲೀಸ್ ಮಾಡುತ್ತಾರೆ ಎನ್ನುವ ದೊಡ್ಡ ಸುದ್ದಿಯನ್ನೇ ನಿರ್ಮಾಪಕರು ನೀಡಿದ್ದರು. ಇದೀಗ ಮೊದಲ ಹಾಡು ಯಾವಾಗ ಬಿಡುಗಡೆ ಆಗಲಿದೆ ಎನ್ನುವುದನ್ನು ಸ್ವತಃ ಸುದೀಪ್ ಅವರೇ ಟ್ವಿಟ್ ಮೂಲಕ ತಿಳಿಸಿದ್ದಾರೆ.

ಈವರೆಗೂ ವಿಕ್ರಾಂತ್ ರೋಣ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇದೇ ಮೊದಲ ಬಾರಿಗೆ ಹಾಡೊಂದು ಬಿಡುಗಡೆ ಆಗುತ್ತಿದ್ದು, ಒಂದೊಂದು ಭಾಷೆಯಲ್ಲೂ ಒಂದೊಂದು ದಿನಾಂಕದಂದು ರಿಲೀಸ್ ಆಗುತ್ತಿರುವುದು ವಿಶೇಷ. ಗಡಂಗ್ ರಕ್ಕಮ್ಮ ಹೆಸರಿನ ಈ ಲಿರಿಕಲ್ ಹಾಡು ರಾ ರಾ ರಕ್ಕಮ್ಮ ಎಂಬ ಸಾಹಿತ್ಯದಿಂದ ಶುರುವಾಗಲಿದ್ದು, ಕನ್ನಡದಲ್ಲಿ ಮೇ 23 ರಂದು ಮಧ್ಯಾಹ್ನ 3.5ಕ್ಕೆ ರಿಲೀಸ್ ಆಗಲಿದೆ.

ಹಿಂದಿಯಲ್ಲಿ ಮೇ 24ಕ್ಕೆ ಮಧ್ಯಾಹ್ನ 01.05 ಕ್ಕೆ ಬಿಡುಗಡೆಯಾದರೆ, ತೆಲುಗಿನಲ್ಲಿ ಮೇ 24 ರಂದು ಮಧ್ಯಾಹ್ನ 01.05ಕ್ಕೆ ಬಿಡುಗಡೆ ಆಗಲಿದೆ, ತಮಿಳಿನಲ್ಲಿ ಮೇ 26ರಂದು ಮಧ್ಯಾಹ್ನ 01.05ಕ್ಕೆ ಹಾಗೂ ಮೇ 27 ರಂದು ಮಲಯಾಳಂನಲ್ಲಿ 01.05ಕ್ಕೆ ಈ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ ಎಂದು ಸುದೀಪ್ ಟ್ವಟರ್ ಮೂಲಕ ಮಾಹಿತಿ ಕೊಟ್ಟಿದ್ದಾರೆ. ಈ ಎಲ್ಲ ಭಾಷೆಯ ಹಾಡುಗಳನ್ನು ಲಹರಿ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ.ಜಿ.ಎಫ್. ಎಂಬ ಬೃಹತ್ ಆಲದ ಮರದ ಸುತ್ತ...

Sun May 22 , 2022
  ಕೆ.ಜಿ.ಎಫ್. ಚಲನ ಚಿತ್ರದ ಎರಡು ಭಾಗಗಳನ್ನು ಬಹುತೇಕ ನಾವೆಲ್ಲರೂ ವೀಕ್ಷಿಸಿದ್ದೇವೆ. ಈ ಚಲನ ಚಿತ್ರ ದೇಶಾದ್ಯಂತ ಸಿನೆಮಾ ಪ್ರಿಯರಲ್ಲಿ ಮೂಡಿಸಿದ ಸಂಚಲನ ಬಾಲಿವುಡನ್ನೂ ಬೆಚ್ಚಿ ಬೀಳಿಸಿದೆ. ಇತ್ತೀಚೆಗೆ ದಕ್ಷಿಣ ಭಾರತದ ಕೆಲವು ಚಲನ ಚಿತ್ರಗಳು ಪ್ಯಾನ್ ಇಂಡಿಯಾ ಪ್ರದರ್ಶನ ಕಂಡು, ಗಲ್ಲಾ ಪೆಟ್ಟಿಗೆಯನ್ನು ಬಾಚಲು ತೊಡಗಿದಾಗ, ತಣ್ಣನೆ ವೀಕ್ಷಿಸಿ, ಮೌನವಾಗಿ ಕುಳಿತಿದ್ದ ಬಾಲಿವುಡ್‌ನ ದೊರೆಗಳು ಮಾತನಾಡಲು ಪ್ರಾರಂಭಿಸಿದ್ದಾರೆ. ‘ರಂಗೀಲ’ವೆಂಬ ರಂಗು ರಂಗಿನ ಮನರಂಜನೀಯ ಚಲನ ಚಿತ್ರದ ಖ್ಯಾತ ನಿರ್ದೇಶಕ […]

Advertisement

Wordpress Social Share Plugin powered by Ultimatelysocial