ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಇಬ್ಬರೂ ಕೂಡ ಮೊದ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ!

ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಇಬ್ಬರೂ ಕೂಡ ಮೊದ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ವಿಚಾರವನ್ನು ಅವರು ಹಲವು ದಿನಗಳ ಹಿಂದೆಯೇ ಹಂಚಿಕೊಂಡಿದ್ದರು. ಈ ಜೋಡಿಗೆ ಶುಭವಾಗಲಿ ಎಂದು ಅಭಿಮಾನಿ ಬಳಗ ಹರಸಿ ಹಾರೈಸಿತು. ಇತ್ತೀಚೆಗೆ ಅವರ ಸೀಮಂತ ಕಾರ್ಯ ಕೂಡ ಅದ್ದೂರಿಯಾಗಿ ನೆರವೇರಿದೆ.ಕೆಲವು ದಿನಗಳ ಹಿಂದೆ ಅಮೂಲ್ಯ ಫೋಟೊಗಳನ್ನು ಶೇರ್ ಮಾಡಿಕೊಳ್ಳುವುದರ ಮೂಲಕ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ಜೊತೆಗೆ ಅವರ ಬೇಬಿ ಬಂಪ್ ಫೋಟೋ ಶೂಟ್‌ಕೂಡ ವೈರಲ್ ಆಗಿತ್ತು. ಇದೀಗ ಅಮೂಲ್ಯ ಅವರ ಕುಟುಂಬ ಈ ಸಂತಸವನ್ನು ತಮ್ಮ ಸಿನಿಮಾ ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ.ಸೀಮಂತ ಕಾರ್ಯವನ್ನು ಮನೆಯಲ್ಲೇ, ಕುಟುಂಬಸ್ಥರ ಸಮ್ಮುಖದಲ್ಲಿ ಮಾಡಲಾಗಿತ್ತು. ಅಲ್ಲಿ ಹೆಚ್ಚಾಗಿ ಸಿನಿಮಾ ತಾರೆಯರು ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಅವರು ಸ್ಯಾಂಡಲ್‌ವುಡ್ ಸ್ನೇಹಿತರಿಗಾಗಿ ಬೇಬಿ ಶವರ್ ಪಾರ್ಟಿ ಮಾಡಿದ್ದಾರೆ. ಈ ಕಾರ್ಯಕ್ರಮದ ವಿಶೇಷತೆ ಏನಿತ್ತು. ಯಾರೆಲ್ಲಾ ಭಾಗಿ ಆಗಿದ್ದರು ಎನ್ನುವ ಬಗ್ಗೆಅಮೂಲ್ಯ ಬೇಬಿ ಶವರ್‌ನಲ್ಲಿ ಸ್ಯಾಂಡವುಲ್ ತಾರೆಯರುನಟಿ ಅಮೂಲ್ಯ ಅವರು ಇತ್ತೀಚೆಗೆ ಸೀಮಂತ ಕಾರ್ಯಕ್ರಮದ ಮೂಲಕ ಸುದ್ದಿ ಆಗಿದ್ದರು. ಈಗ ಅಮೂಲ್ಯ ಮತ್ತೇ ಅದೇ ವಿಚಾರಕ್ಕೆ ಗಮನ ಸೆಳೆದಿದ್ದಾರೆ. ಅದರೆ ಈ ಬಾರಿ ಅವರು ಸ್ಯಾಂಡಲ್‌ವುಡ್‌ ಸ್ನೇಹಿತರಿಗಾಗಿ ಪಾರ್ಟಿ ಮಾಡಿದ್ದಾರೆ. ಅಮೂಲ್ಯ ಅವರು ಚಿತ್ರರಂಗದ ಸ್ನೇಹಿತರೊಂದಿಗೆ ತಮ್ಮ ಬೇಬಿ ಶವರ್ ಕಾರ್ಯಕ್ರಮ ಮಾಡಿಕೊಂಡಿದ್ದಾರೆ. ಈ ಪಾರ್ಟಿಯಲ್ಲಿ ಬಹುತೇಕ ಕನ್ನಡದ ಸಿನಿಮಾ ತಾರೆಯರು ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಮೂಲ್ಯ ಅವರ ಕುಟುಂಬ ಕೂಡ ಭಾಗಿ ಆಗಿದೆ.ನಟಿ ಅಮೂಲ್ಯ ಅವರು ತಮ್ಮ ಬೇಬಿ ಶವರ್ ಕಾರ್ಯಕ್ರಮದಲ್ಲಿ ಗೊಂಬೆಯಂತೆ ಕಂಗೊಳಿಸಿದ್ದಾರೆ. ಅಮೂಲ್ಯ ಈ ಹಿಂದೆ ಸೀಮಂತ ಕಾರ್ಯದಲ್ಲಿ ರೇಷ್ಮೆ ಸೀರೆಯುಟ್ಟು ಕಂಗೊಳಿಸಿದ್ದರು. ಆದರೆ ಈ ಬೇಬಿ ಶವರ್ ಕಾರ್ಯಕ್ರಮದಲ್ಲಿ ಅಮೂಲ್ಯ ಅವರು ತಿಳಿ ಗುಲಾಬಿ ಬಣ್ಣದ ಗೌನ್ ಧರಿಸಿದ್ದರು. ಜೊತೆಗೆ ಪಾರ್ಟಿ ಥೀಮ್ ಹಲವು ಬಣ್ಣಗಳಿಂದ ಕೂಡಿತ್ತು. ಬಲೂನ್ ಮತ್ತು ಹೂವುಗಳಿಂದ ವೇದಿಕೆ ಅಲಂಕಾರಗೊಂಡಿತ್ತು.ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮದಲ್ಲಿ ಕನ್ನಡದ ಹಲವು ತಾರೆಯರು ಭಾಗಿಯಾಗಿದ್ದಾರೆ. ನಟಿ ರಾಧಿಕಾ ಪಂಡಿತ್, ಹರಿಪ್ರಿಯಾ, ಸುಧಾರಾಣಿ, ಕಾರುಣ್ಯ ರಾಮ್, ಆಶಿಕಾ ರಂಗನಾಥ್, ಭಾರತಿ, ಶೃತಿ, ಮಾಳವಿಕ ಅವಿನಾಶ್, ಉಪೇಂದ್ರ ದಂಪತಿ, ಗಣೇಶ್ ಕುಟುಂಬ ಸೇರಿದಂತೆ ಹಲವು ತಾರೆಯರು ಅಮೂಲ್ಯ ಬೇಬಿ ಶವರ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಎಲ್ಲರ ಸಮ್ಮುಖದಲ್ಲಿ ಅಮೂಲ್ಯ ಅವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.ನಟಿ ಅಮೂಲ್ಯ ಅವರು ಸಿನಿಮಾಗಳಲ್ಲಿ ನಟನೆ ಮಾಡುವುದನ್ನು ಬಿಟ್ಟು ವರ್ಷಗಳೇ ಕಳೆದಿವೆ. ಆದರೂ ಕೂಡ ಅವರು ಅಭಿಮಾನಿಗಳ ಮನಸ್ಸಿಂದ, ಜನರ ಮನಸ್ಸಿಂದ ದೂರ ಆಗಿಲ್ಲ. ಸಿನಿಮಾ ರಂಗದಲ್ಲಿ ಬೇರೆ ನಟಿಯರೂ ಇದ್ದಾರೆ. ಆದರೆ ಅವರೆಲ್ಲರಿಗೂ ಮೀರಿದ ಕ್ರೇಜ್ ಇನ್ನೂ ಅಮೂಲ್ಯ ಅವರ ಬಗ್ಗೆ ಇದೆ. ಅವರ ಮದುವೆ, ನಿಶ್ಚಿತಾರ್ಥ, ಈಗ ಮಗು. ಯಾವುದೇ ವಿಚಾರ ಆದರೂ ಅಮೂಲ್ಯ ಅವರ ಸಂಭ್ರಮವನ್ನು ಜನ ಅಭಿಮಾನಿಗಳು ಸಂಭ್ರಮಿಸುತ್ತಾರೆ .

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022 ಹರಾಜುದಾರರು ಕೆಲವು ಆಟಗಾರರನ್ನು ಹೈಲೈಟ್ ಮಾಡಿರಬೇಕು,ಉದ್ಯೋಗಿ ಆಶಿಶ್ ಕಾಂಬ್ಳೆ;

Mon Feb 14 , 2022
ಐಪಿಎಲ್ ಮೆಗಾ ಹರಾಜು ಎರಡು ದಿನಗಳ ಕಾಲ ಮನರಂಜನೆ ನೀಡಿತು, ಕಿರಿಯ ಮತ್ತು ಹಿರಿಯ ಕ್ರಿಕೆಟಿಗರನ್ನು ಮಿಲಿಯನೇರ್‌ಗಳನ್ನಾಗಿ ಮಾಡಿತು, ಕೆಲವು ವೀಕ್ಷಕರು ಕೇವಲ ಅಂಕಿಅಂಶಗಳನ್ನು ಪ್ರದರ್ಶಿಸುವುದಕ್ಕಿಂತ ಕೆಲವು ಅಪರಿಚಿತ ಆಟಗಾರರ ಬಗ್ಗೆ ಸ್ವಲ್ಪ ಹೆಚ್ಚು ತಿಳಿಸಿದ್ದರೆ ಅವರಿಗೆ ಉತ್ತಮ ಮಾಹಿತಿ ನೀಡಬಹುದಿತ್ತು ಎಂದು ಭಾವಿಸಿದರು. ನಗರ ಮೂಲದ ಬಿಪಿಒ ಉದ್ಯೋಗಿ ಆಶಿಶ್ ಕಾಂಬ್ಳೆ ಹೀಗೆ ಹೇಳಿದರು: “ನಾನು ಭಾರತೀಯ ಕ್ರಿಕೆಟ್‌ನ ತೀವ್ರ ಅನುಯಾಯಿ, ಆದರೆ ಹರಾಜಿನಲ್ಲಿದ್ದ ಕೆಲವು ಅನ್‌ಕ್ಯಾಪ್ ಆಟಗಾರರನ್ನು […]

Advertisement

Wordpress Social Share Plugin powered by Ultimatelysocial