ಸೈಬರ್ ಒಪ್ಪಂದಕ್ಕೆ ಸಹಿಹಾಕಿದ ಭಾರತ ಇಸ್ರೇಲ್

ಸೈಬರ್ ಭದ್ರತೆಯಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವ ಒಪ್ಪಂದಕ್ಕೆ ಭಾರತ ಮತ್ತು ಇಸ್ರೇಲ್ ಸಹಿ ಹಾಕಿವೆ. ಇಸ್ರೇಲ್‌ನ ನ್ಯಾಷನಲ್ ಸೈಬರ್ ನಿರ್ದೇಶನಲಯದ ಮಹಾ ನಿರ್ದೇಶಕ ಯಿಗಲ್ ಉನ್ನಾ ಹಾಗೂ ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರಿ ಸಂಜೀವ್ ಶುಕ್ಲಾ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕೊರೊನಾ ಕಾಲಘಟ್ಟದಲ್ಲಿ ಡಿಜಿಟಲೀಕರಣ ತೀವ್ರ ವೇಗ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಭದ್ರತೆಯಲ್ಲಿ ಪರಸ್ಪರ ಸಹಕಾರ ಹೆಚ್ಚಿಸುವ ಒಪ್ಪಂದಕ್ಕೆ ಭಾರತ ಮತ್ತು ಇಸ್ರೇಲ್ ಸಹಿ ಹಾಕಿವೆ. ಸೈಬರ್ ಕಳ್ಳರಿಂದ ಆನ್‌ಲೈನ್ ವಹಿವಾಟುಗಳನ್ನು ಸುರಕ್ಷಿತವಾಗಿಸುವುದು ಒಪ್ಪಂದ ಪ್ರಮುಖ ಸಂಗತಿಯಾಗಿದೆ. ಭಾರತವು ಈಗಾಗಲೇ ಇಸ್ರೇಲ್ ಜತೆಗೆ ರಕ್ಷಣೆ, ವಿಜ್ಞಾನ-ತಂತ್ರಜ್ಞಾನ, ಕೃಷಿ ಸೇರಿ ಹಲವು ಕ್ಷೇತ್ರಗಳಲ್ಲಿ ಒಪ್ಪಂದ ಮಾಡಿಕೊಂಡಿದೆ. ಸೈಬರ್ ಭದ್ರತೆ ಕುರಿತು ಪರಸ್ಪರ ತಂತ್ರಜ್ಞಾನ ಹಾಗೂ ಮಾಹಿತಿ ವಿನಿಮಯ ಸಂಬAಧ ಇರುವ ಸಹಕಾರವನ್ನು ಹೊಸ ಒಪ್ಪಂದದ ಮೂಲಕ ಮತ್ತಷ್ಟು ವಿಸ್ತರಿಸಿಕೊಂಡಿದೆ.ಕೊರೊನಾ ಬಿಕ್ಕಟ್ಟಿನಿಂದ ಜನರು ಹೊರಗೆ ಹೋಗದೇ ಮನೆಯಲ್ಲಿಯೇ ಕುಳಿತು ಆನ್‌ಲೈನ್ ವ್ಯವಹಾರಗಳಿಗೆ ಹೆಚ್ಚಿನ ಒತ್ತುಕೊಡುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಜೂಮ್‌ಗೆ ಟಕ್ಕರ್ ಕೊಟ್ಟ ಫೇಸ್‌ಬುಕ್

Fri Jul 17 , 2020
ಕೊರೊನಾ  ಸಂದರ್ಭದಲ್ಲಿ  ಆನ್ಲೈನ್  ಕ್ಲಾಸ್  ಸೇರಿದಂತೆ  ಆನ್ಲೈನ್  ಅಪ್ಲಿಕೇಷನ್ ಗೆ  ಬೇಡಿಕೆ  ಜಾಸ್ತಿಯಾಗಿದೆ. ಆನ್ಲೈನ್  ಕ್ಲಾಸ್ ಗಳಿಗೆ  ಜೂಮ್  ಅಪ್ಲಿಕೇಷನ್  ಹೆಚ್ಚಾಗಿ  ಬಳಕೆಯಾಗ್ತಿದೆ. ಇದಕ್ಕೆ  ಟಕ್ಕರ್  ನೀಡಲು  ಈಗ ಫೇಸ್ಬುಕ್  ಹೊಸ  ವೈಶಿಷ್ಟ್ಯಗಳನ್ನು  ಹೊರತರುತ್ತಿದೆ.ಹೊಸ  ವೈಶಿಷ್ಟ್ಯವನ್ನು  ಮೆಸೆಂಜರ್‌ಗೆ  ಸೇರಿಸಲಾಗಿದೆ. ಇದು ಜೂಮ್  ವಿಡಿಯೋ  ಕಾಲಿಂಗ್  ಪ್ಲಾಟ್‌ಫಾರ್ಮ್‌ಗೆ  ಹೋಲುತ್ತದೆ. ಮೆಸೆಂಜರ್‌ನಲ್ಲಿಯೂ  ಸಹ  ವಿಡಿಯೊ  ಕರೆ ಮಾಡುವಾಗ  ಸ್ಕ್ರೀನ್  ಹಂಚಿಕೊಳ್ಳಲು  ಸಾಧ್ಯವಾಗುತ್ತದೆ. ಆಂಡ್ರಾಯ್ಡ್  ಮತ್ತು  ಐಒಎಸ್ ನ  ಮೆಸೆಂಜರ್ ಅಪ್ಲಿಕೇಶನ್‌ನಲ್ಲಿ  ಈ  ವೈಶಿಷ್ಟ್ಯವನ್ನು  […]

Advertisement

Wordpress Social Share Plugin powered by Ultimatelysocial