ಟಿವಿಎಸ್ ಕಂಪನಿಯು ಐಕ್ಯೂಬ್ (iQube) ಇ-ಸ್ಕೂಟರ್ ಬಿಡುಗಡೆ!

ಒಂದು ಚಾರ್ಜ್‌ನಲ್ಲಿ 140 ಕಿ.ಮೀ. ಓಡುವ ಜತೆಗೆ ಹಲವು ಆಕರ್ಷಕ ಸೌಲಭ್ಯಗಳನ್ನು ಹೊಂದಿದೆ ಎಂದು ಸಂಸ್ಥೆಯು ಘೋಷಿಸಿದೆ.

ಹೊಸ ಐ-ಕ್ಯೂಬ್ ಕ್ಲೀನ್ ಯುಐ ಸಹಿತವಾದ 7-ಇಂಚಿನ ಟಿಎಫ್‌ಟಿ ಟಚ್‌ ಸ್ಕ್ರೀನ್, ಅನಿಯಮಿತವಾದ ಥೀಮ್ ವೈಯಕ್ತೀಕರಣ, ವಾಯ್ಸ್ ಅಸಿಸ್ಟ್ ಮತ್ತು ಟಿವಿಎಸ್ ಐಕ್ಯೂಬ್ ಅಲೆಕ್ಸಾ ಹೊಂದಿದೆ ಎಂದು ವಿಎಸ್ ಮೋಟಾರ್ ಕಂಪನಿಯ ಎಂಡಿ ಸುದರ್ಶನ್ ವೇಣು ತಿಳಿಸಿದ್ದಾರೆ.

ದೇಶದ 3ನೇ ಅತಿ ದೊಡ್ಡ ಮೋಟಾರು ವಾಹನಗಳ ಉತ್ಪಾದಕ ಸಂಸ್ಥೆಯಾದ ಟಿವಿಎಸ್, ಐಕ್ಯೂಬ್ ಅನ್ನು 3 ವೈವಿಧ್ಯಗಳಲ್ಲಿ ಪರಿಚಯಿಸಿದೆ- TVS iQube, iQube S ಹಾಗೂ iQube ST. ದೆಹಲಿಯಲ್ಲಿ iQube S ಎಕ್ಸ್-ಶೋರೂಮ್ ಬೆಲೆ 1,08.690 ಆಗಿರುತ್ತದೆ.

iQube ST ಬೆಲೆಯನ್ನು ಅದು ಬಹಿರಂಗಗೊಳಿಸಿಲ್ಲ. ಕೇವಲ 999 ರೂ. ಮುಂಗಡ ನೀಡಿ ಬುಕ್ ಮಾಡಬಹುದು. ತಕ್ಷಣದ ವಿತರಣೆಗೆ ವಾಹನಗಳು ಲಭ್ಯವಿವೆ. TVS iQube ST ಮುಂಗಡ ಬುಕಿಂಗ್ ಮಾಡಿದವರಿಗಷ್ಟೇ ಲಭ್ಯವಿದೆ ಎಂದು ಕಂಪನಿ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಎಸ್ ಆರ್ ಟಿಸಿ ಬಸ್ ಚಲಾಯಿಸಿದ ಶಾಸಕ ಯು.ಟಿ.ಖಾದರ್...

Thu May 19 , 2022
ಉಳ್ಳಾಲ: ತಾಲೂಕಿನ ಪಜೀರು ಗ್ರಾಮಸ್ಥರ ಹಲವು ವರ್ಷದ ಬೇಡಿಕೆಯಂತೆ ಪಾನೆಲಕ್ಕೆ ಬಸ್ಸು ಸಂಚಾರ ಆರಂಭವಾಗಿದೆ. ಮಂಗಳೂರು ಗ್ರಾಮ ಚಾವಡಿ- ಪಾನೆಲ- ಬೋಳಿಯಾರ್ – ಮುಡಿಪು ಮಾರ್ಗವಾಗಿ ಕೆಎಸ್ ಆರ್ ಟಿಸಿ ಬಸ್ಸು ಸಂಚಾರ ಆರಂಭವಾಗಿದ್ದು, ಸ್ವತಃ ಶಾಸಕ ಯು.ಟಿ. ಖಾದರ್ ಅವರೇ ಬಸ್ಸು ಚಲಾಯಿಸಿ ಚಾಲನೆ ನೀಡಿದರು. ಬಿಜೆಪಿ ಮುಖಂಡ ಹಾಗೂ ಮೈಸೂರು ಎಲೆಕ್ರ್ಟಿಕ್ ಪ್ರೈವೆಟ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು. ಇತ್ತೀಚಿನ […]

Advertisement

Wordpress Social Share Plugin powered by Ultimatelysocial