ಇದಪ್ಪಾ ಐಡಿಯಾ: ರಷ್ಯಾ ಯೋಧರನ್ನು ಸದೆ ಬಡೆಯಲು ಉಕ್ರೇನ್ ಉಪಾಯ!

ಉಕ್ರೇನ್ ಸೈನಿಕರಂತೆ ಹಾಗೂ ಉಕ್ರೇನ್ ಪ್ರಜೆಗಳಂತೆ ಒಳ ನುಸುಳುವ ರಷ್ಯಾದ ಯೋಧರು ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ. ಇಂಥದ್ದಕ್ಕೆಲ್ಲ ಕಡಿವಾಣ ಹಾಕವುದುಕ್ಕೆ ಹಾಗೂ ಉಕ್ರೇನ್ ಪರವಾಗಿ ಗನ್ ಹಿಡಿದು ನಿಂತ ಪ್ರಜೆಗಳ ರಕ್ಷಣೆಗಾಗಿ ಉಕ್ರೇನ್ ತನ್ನ ಗುರುತನ್ನೇ ಬದಲಾಯಿಸಿಕೊಂಡಿದೆ.ದೇಶದ ದ್ವಿವರ್ಣ ಧ್ವಜದಲ್ಲಿರುವ ನೀಲಿ ಬಣ್ಣಕ್ಕೆ ಬದಲಾಯಿಸಿಕೊಳ್ಳಲಾಗಿದೆ. ಬಾವುಟದಲ್ಲಿರುವ ನೀಲಿ ಬಣ್ಣವನ್ನು ವಿಶೇಷ ಗುರುತಾಗಿ ಬಳಸಿಕೊಳ್ಳಲಾಗುತ್ತಿದ್ದು, ಕಾರುಗಳು ಮತ್ತು ಸೇನಾ ವಾಹನಗಳ ಮೇಲೆ ನೀಲಿ ಟೇಪ್ ಅನ್ನು ಹಚ್ಚಲಾಗುತ್ತಿದೆ. ಇದಕ್ಕೂ ಮೊದಲು ಎರಡು ಬಣ್ಣಗಳ ಮಗ್ಗಲನ್ನು ಎಡದಿಂದ ಬಲಕ್ಕೆ ಬದಲಾಯಿಸಿಕೊಳ್ಳಲಾಗಿತ್ತು.

ವಿಧ್ವಂಸಕರನ್ನು ಗುರುತಿಸಲು, ಸ್ನೇಹಿತರನ್ನು ರಕ್ಷಿಸಲು ತಂತ್ರ:

ಉಕ್ರೇನ್ ನೆಲದಲ್ಲಿ ನಮ್ಮವರಂತೆ ನುಸುಳಿಕೊಂಡು ಕೆಲವರು ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ. “ಅಂಥ ವಿಧ್ವಂಸಕರನ್ನು ಗುರುತಿಸಲು ಮತ್ತು ವೈರಿಗಳ ಬಗ್ಗೆ ಸ್ನೇಹಿತರಿಗೆ ತಿಳಿಸುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಕಳೆದ ಕೆಲವು ವಾರಗಳಲ್ಲಿ ಇದು ಹಲವಾರು ಬಾರಿ ಬದಲಾಗಿದೆ,” ಎಂದು ನಾಗರಿಕ ಸ್ವಯಂಸೇವಕ ಫಿಲಿಪ್ ತಿಳಿಸಿದ್ದಾರೆ.

ಉಕ್ರೇನ್ ಯೋಧರ ತೋಳಿಗೆ ನೀಲಿ ಟೇಪ್:

ರಷ್ಯಾ ನಿರಂತರ ದಾಳಿಯ ನಡುವೆ ಇಂಥ ಬದಲಾವಣೆಗಳು ಕೆಲವು ಗೊಂದಲಗಳನ್ನು ಉಂಟುಮಾಡುತ್ತದೆ. ಆದರೆ ಯುದ್ಧದಲ್ಲಿ ಉಕ್ರೇನ್‌ ಪ್ರಯತ್ನವನ್ನು ಬೆಂಬಲಿಸುವ ಶಕ್ತಿಗಳಿವೆ. ರಸ್ತೆಗಳಲ್ಲಿ ವಿಶೇಷ ಚಿಕಿತ್ಸೆ ನೀಡಿದ ಸ್ವಯಂಸೇವಕರು ಇದ್ದಾರೆ. ಆದ್ದರಿಂದ ಅವರಿಗೆ ತೋಳು ಪಟ್ಟಿಗಳನ್ನು ನೀಡಲಾಗಿದೆ. ನಿನ್ನೆಯಷ್ಟೇ ನೀಲಿ ಬ್ಯಾಂಡ್ ಅನ್ನು ಪರಿಚಯಿಸಲಾಯಿತು. ಆದರೆ ಈಗ ಪ್ರತಿಯೊಬ್ಬರೂ ತಮ್ಮ ಬಲಭಾಗದಲ್ಲಿ ನೀಲಿ ಟೇಪ್ ಅನ್ನು ಧರಿಸುತ್ತಾರೆ, ಅಂದರೆ ಸ್ವಯಂಸೇವಕರು ಮತ್ತೊಂದಿಷ್ಟನ್ನು ಯೋಚಿಸಬೇಕು. ಇದು ಕೆಲವು ಗೊಂದಲಗಳನ್ನು ಸೃಷ್ಟಿಸಬಹುದು, ಆದರೆ ವಿಧ್ವಂಸಕರು ಒಳನುಸುಳದಂತೆ ಎಚ್ಚರಿಕೆ ವಹಿಸಲು ಹಾಗೂ ಶತ್ರುಗಳ ಬಗ್ಗೆ ಸ್ನೇಹಿತರಿಗೆ ತಿಳಿಸಲು ಸಹಕಾರಿ ಆಗಿರುತ್ತದೆ. ಇದು ಉಕ್ರೇನ್‌ಗೆ ಸಣ್ಣದೊಂದು ಪ್ರಯೋಜನವನ್ನು ನೀಡುತ್ತದೆ, ಅದಕ್ಕಾಗಿ ಕೆಲವು ಗಂಟೆಗಳು ಆಗಬಹುದು,” ಎಂದು ಫಿಲಿಪ್ ಹೇಳಿದ್ದಾರೆ.

ಮರಿಯೋಪೋಲ್ ಮುತ್ತಿಗೆ ಹಾಕಿದ ರಷ್ಯಾ:

ರಷ್ಯಾ ನಡೆಸಿದ 17ನೇ ದಿನದ ಆಕ್ರಮಣದಲ್ಲಿ ಶನಿವಾರ ಮಾರಿಯುಪೋಲ್‌ನ ಪೂರ್ವ ಹೊರವಲಯದಲ್ಲಿರುವ ಪ್ರದೇಶಗಳನ್ನು ವಶಪಡಿಸಿಕೊಂಡಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ತಿಳಿಸಿದೆ. ರಷ್ಯಾದ ಪಾಲಿಗೆ 4,30,000 ಜನರಿಗೆ ನೆಲೆಯಾಗಿರುವ ಆಯಕಟ್ಟಿನ ಬಂದರು ನಗರವಾದ ಮರಿಯೋಪೋಲ್‌ನ ಮೇಲೆ ನಿಯಂತ್ರಣ ಸಾಧಿಸುವುದು ಫೆಬ್ರವರಿ 24ರಂದು ನಡೆಸಿದ ಆಕ್ರಮಣದ ಆರಂಭದ ಆದ್ಯತೆ ಆಗಿತ್ತು. ಮರಿಯೋಪೋಲ್‌ನ ಮುತ್ತಿಗೆಯಿಂದ ಈಗಾಗಲೇ 1,582 ಜನರನ್ನು ಬಲಿ ತೆಗೆದುಕೊಂಡಿದೆ ಎಂದು ಮಾರಿಯೋಪೋಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್ನಲ್ಲಿ ಹತ್ಯೆಗೀಡಾದ ನವೀನ್ನ ಪಾರ್ಥಿವ ಶರೀರವನ್ನು ತರಲು ಪ್ರಧಾನಿ ನಿರ್ದೇಶನ!

Sun Mar 13 , 2022
ಮಾರ್ಚ್ 1 ರಂದು ರಷ್ಯಾದ ಶೆಲ್ ದಾಳಿಯಲ್ಲಿ ಉಕ್ರೇನ್‌ನ ಖಾರ್ಕಿವ್‌ನಲ್ಲಿ ಸಾವನ್ನಪ್ಪಿದ ನವೀನ್ ಶೇಖರಪ್ಪ ಅವರ ಪಾರ್ಥಿವ ಶರೀರವನ್ನು ಮರಳಿ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಭಾರತದ ಭದ್ರತಾ ಸನ್ನದ್ಧತೆ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಸನ್ನಿವೇಶವನ್ನು ಪರಿಶೀಲಿಸಲು ಪ್ರಧಾನ ಮಂತ್ರಿ ಹಿಂದಿನ ದಿನ CCS ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗಡಿ ಪ್ರದೇಶಗಳಲ್ಲಿ ಹಾಗೂ ಕಡಲ […]

Advertisement

Wordpress Social Share Plugin powered by Ultimatelysocial