ಈ ಆರು ಸೂಪರ್​ ಫುಡ್​ ಬಳಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತೆ.

ನಿಮ್ಮ ಆಹಾರದಲ್ಲಿನ ಸಣ್ಣ ಬದಲಾವಣೆ ಮಾಡಿಕೊಂಡರೂ ಸಾಕು, ನಿಮ್ಮ ಒಟ್ಟಾರೆ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ನಮ್ಮಲ್ಲಿ ಹಲವರು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ಎದುರಿಸಬಹುದು. ಇದು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.ಉದಾಹರಣೆಗೆ, ಕಬ್ಬಿಣ, ಫೋಲೇಟ್ ಮತ್ತು ವಿಟಮಿನ್ ಬಿ 12 ಮತ್ತು ಎ ಕೊರತೆಯು ರಕ್ತಹೀನತೆಗೆ ಕಾರಣವಾಗಬಹುದು. ವಿಟಮಿನ್ ಡಿ ಕೊರತೆಯಿಂದ ಕಡಿಮೆ ರಕ್ತದಲ್ಲಿ ಕಡಿಮೆ ಕ್ಯಾಲ್ಸಿಯಂ ಮಟ್ಟ, ರಿಕೆಟ್ಸ್​, ವಯಸ್ಕರಲ್ಲಿ ಮೂಳೆಗಳ ಮೃದು ಆಗುವುದಕ್ಕೂ ಇದು ಕಾರಣವಾಗಬಹುದು.ಬಾದಾಮಿ, ಗೋಡಂಬಿ, ವಾಲ್‌ನಟ್ ಮತ್ತು ಕಡಲೆಕಾಯಿಗಳಂತಹ ಬೀಜಗಳು ಬಿ-ವಿಟಮಿನ್‌ಗಳು, ಫೋಲೇಟ್ ಮತ್ತು ವಿಟಮಿನ್ ಇ ಗಳ ಉತ್ತಮ ಮೂಲವಾಗಿದೆ. ಈ ಸೂಪರ್‌ಫುಡ್‌ಗಳನ್ನು ನಿಯಮಿತವಾಗಿ ಸೇವಿಸಿದರೆ ಆರೋಗ್ಯ ವೃದ್ಧಿಯಲಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಬೀಜಗಳನ್ನು ನೆನೆಸಿಟ್ಟರೆ ದೇಹವು ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ರಾತ್ರಿಯಿಡೀ ನೆನೆಸುವುದರಿಂದ ಫೈಟಿಕ್ ಆಮ್ಲವನ್ನು ತೆಗೆದುಹಾಕಬಹುದು. ಇದರಿಂದಾಗಿ ಈ ಬೀಜಗಳು ಸುಲಭವಾಗಿ ಜೀರ್ಣವಾಗುತ್ತವೆ. ಇದರಿಂದಾಗಿ ಅವುಗಳ ರುಚಿ ಕೂಡ ಉತ್ತಮವಾಗುತ್ತದೆ.ಈ ಸೂಪರ್​ಫುಡ್​ ಸೇವಿಸಿದರೆ ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಬಹುದುಮೊಡವೆ ನಿವಾರಣೆಗೆ ಬಾದಾಮಿ ಚಮತ್ಕಾರನೆನೆಸಿದ ಬಾದಾಮಿಯನ್ನು ತಿನ್ನುವುದು ಪಿಸಿಓಎಸ್, ಮೊಡವೆಗಳನ್ನು ನಿವಾರಿಸಲು ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಸಹಾಯ ಮಾಡುತ್ತದೆ. 5-7 ಬಾದಾಮಿಯನ್ನು ರಾತ್ರಿ ನೆನೆಸಿ, ಬೆಳಿಗ್ಗೆ ಸಿಪ್ಪೆ ತೆಗೆದು ಪ್ರತಿದಿನ ಸೇವಿಸಬೇಕು.ಪೀರಿಯೆಡ್ಸ್​ ತೊಂದರೆಗೆ ನೆನೆಸಿದ ಒಣದ್ರಾಕ್ಷಿ ಮತ್ತು ಕೇಸರ್ ಪರಿಹಾರ:ಮುಟ್ಟಿನ ನೋವು ಮತ್ತು ಅನಿಯಮಿತವಾಗಿ ಮುಟ್ಟಾಗುವುದಕ್ಕೆ, 6-8 ನೆನೆಸಿದ ಒಣದ್ರಾಕ್ಷಿ ಮತ್ತು 2 ಎಳೆಗಳ ಕೇಸರ್ ಅನ್ನು ರಾತ್ರಿಯಿಡೀ ನೆನೆಸಿಡಬೇಕು. ಮರುದಿನ ಬೆಳಗ್ಗೆ ಎದ್ದು ಇದನ್ನು ಸೇವಿಸಿದರೆ ಅನೇಕ ಮುಟ್ಟಿನ ತೊಂದರೆಗಳಿಂದ ಪಾರಾಗಬಹುದು.ಕೂದಲು ಉದುರುವಿಕೆಗಾಗಿ ನೆನೆಸಿದ ಕಪ್ಪು ಒಣದ್ರಾಕ್ಷಿಕೂದಲು ಉದುರುವಿಕೆ ಮತ್ತು ರೋಗನಿರೋಧಕ ಶಕ್ತಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಪ್ಪು ಒಣದ್ರಾಕ್ಷಿಯನ್ನು ರಾತ್ರಿಯಿಡೀ ನೆನೆಸಿ ಮರುದಿನ ಬೆಳಿಗ್ಗೆ ಸೇವಿಸಿ.ನೆನಪಿನಶಕ್ತಿ ಮತ್ತು ಏಕಾಗ್ರತೆಗಾಗಿ ನೆನೆಸಿದ ವಾಲ್​ನಟ್ಸ್ ಪರಿಹಾರಮೆದುಳಿನ ಶಕ್ತಿ, ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಎರಡು ವಾಲ್​ನಟ್ಸ್ ಅನ್ನು ರಾತ್ರಿಯಿಡೀ ನೆನೆಸಿ ಬೆಳಿಗ್ಗೆ ತಿನ್ನಬೇಕು. ಮಕ್ಕಳಿಗೆ ತಮ್ಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಗಾ ವಿಲಾಸ್ ಕ್ರೂಸ್ ನಲ್ಲಿ ಅಡಚಣೆ .

Wed Jan 18 , 2023
ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಗಾಟಿಸಿ ಸಂಚಾರಕ್ಕೆ ಚಾಲನೆ ನೀಡಿದ ಗಂಗಾ ವಿಲಾಸ್ ಕ್ರೂಸ್ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿದೆ.ಗಂಗಾ ವಿಲಾಸ್ ಕ್ರೂಸ್ ಜಲ ಸಂಚಾರ ಬಿಹಾರ ಮೂಲಕ ಹಾದು ಹೋಗುವಾಗ ತೊಂದರ ಉಂಟಾಗಿದೆ ಎಂದು ವರದಿಯಾಗಿದೆ. ಜನವರಿ 13 ರಂದು ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕ್ರೂಸ್‌ಗೆ ಚಾಲನೆ ನೀಡಿದರು.ಎರಡು ದಿನಗಳ ನಂತರ, ಗಂಗಾ ವಿಲ್ಲಾಸ್ ಕ್ರೂಸ್‌ನಲ್ಲಿ ಪ್ರವಾಸಿಗರಿಗೆ ಬಿಕ್ಕಟ್ಟು ಎದುರಾಗಿದೆ.ಘಟನೆ ಬಗ್ಗೆ ಮಾಹಿತಿ ಪಡೆದ ಎಸ್‌ಡಿಆರ್‌ಎಫ್ ತಂಡ […]

Advertisement

Wordpress Social Share Plugin powered by Ultimatelysocial