ವ್ಯಾಯಾಮ ಮಾಡುವುದಕ್ಕಿಂತ ಮುಂಚೆ ಇವುಗಳನ್ನು ಸೇವಿಸಿದರೆ ಒಳ್ಳೆಯದಂತೆ!

 

ವ್ಯಾಯಾಮ ಎನ್ನುವುದು ನಿಮ್ಮ ಮೈಕಟ್ಟನ್ನು ಸರಿಪಡಿಸುತ್ತದೆ. ದೇಹವನ್ನು ಸದೃಢ ಗೊಳಿಸುತ್ತದೆ. ಆದರೆ ಅದಕ್ಕಾಗಿ ನೀವು ತುಂಬಾ ಕಷ್ಟ ಪಡಬೇಕು. ಕಷ್ಟಪಡಲು ನಿಮ್ಮ ದೇಹಕ್ಕೆ ಶಕ್ತಿ ಬೇಕು. ಶಕ್ತಿ ಬೇಕು ಎಂದರೆ ಅದಕ್ಕೆ ತಕ್ಕಂತಹ ಆಹಾರಗಳನ್ನು ವ್ಯಾಯಾಮ ಮಾಡುವುದಕ್ಕಿಂತ ಮುಂಚೆ ತಿನ್ನಬೇಕು.ಯಾವೆಲ್ಲ ಆಹಾರಗಳು ನಿಮಗೆ ವ್ಯಾಯಾಮ ಮಾಡಲು ದೇಹಕ್ಕೆ ಶಕ್ತಿ ಮತ್ತು ಚೈತನ್ಯ ಕೊಡುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಆರೋಗ್ಯ ತಜ್ಞರಾದ ಲವ್ನೀತ್ ಬತ್ರ ಈ ವಿಷಯ ವನ್ನು ತಮ್ಮ ಅಂಕಣದಲ್ಲಿ ಹಂಚಿಕೊಂಡಿದ್ದಾರೆನೀವು ಯಾವುದೇ ಸಂದರ್ಭದಲ್ಲಿ ವ್ಯಾಯಾಮ ಮಾಡುವುದಕ್ಕಿಂತ ಮುಂಚೆ ಬಾಳೆಹಣ್ಣಿನ ಸ್ಮೂತಿ ಸೇವಿಸುವುದರಿಂದ ನಿಮಗೆ ವ್ಯಾಯಾಮ ಮಾಡಬೇಕಾದರೆ ಬೇಗನೆ ಸುಸ್ತು ಅಥವಾ ಆಯಾಸ ಆಗುವುದಿಲ್ಲ.ಏಕೆಂದರೆ ಇದರಲ್ಲಿ ರೆಸಿಸ್ಟಂಟ್ ಸ್ಟಾರ್ಚ್ ಅಥವಾ ಪೆಕ್ಟಿನ್ ಪ್ರಮಾಣ ಹೇರಳವಾಗಿದೆ. ಜೊತೆಗೆ ಬಾಳೆಹಣ್ಣಿನಲ್ಲಿ ಪ್ರಮುಖವಾಗಿ ಪೊಟ್ಯಾಶಿಯಂ ಎಂಬ ಖನಿಜಾಂಶ ಅಪಾರವಾಗಿದ್ದು, ನರ ಮಂಡಲದ ಮಾಂಸಖಂಡಗಳ ಅಭಿವೃದ್ಧಿಯಲ್ಲಿ ಕೆಲಸ ಮಾಡುತ್ತದೆ. ವಿಶೇಷವಾಗಿ ಕಾರ್ಬೋ ಹೈಡ್ರೇಟ್ ಸಿಗುವುದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ.ನೀವು ಜಿಮ್ ಗೆ ಹೋಗುವ ಮುಂಚೆ ಹಾಲು ಬೆರೆಸದೆ ಇರುವ ಬ್ಲಾಕ್ ಕಾಫಿ ಮತ್ತು ಒಂದು ಬಾಳೆ ಹಣ್ಣು ಸೇವಿಸಿ ನಡೆದರೆ ನಿಮಗೆ ಹೆಚ್ಚುವರಿ ಶಕ್ತಿ ಮತ್ತು ಚೈತನ್ಯ ಸಿಗುವುದು ಮಾತ್ರವಲ್ಲದೆ ವ್ಯಾಯಾಮ ಮಾಡಲು ಹೊಸ ಹುರುಪು ಸಿಕ್ಕಂತಾಗುತ್ತದೆ ಎಂದು ಆರೋಗ್ಯ ತಜ್ಞರಾದ ಲವ್ನೀತ್ ಬತ್ರ ಹೇಳುತ್ತಾರೆ.ಏಕೆಂದರೆ ಬಾಳೆಹಣ್ಣು ವ್ಯಾಯಾಮಕ್ಕೆ ಮುಂಚೆ ಸೇವಿಸುವುದರಿಂದ ನಿಮಗೆ ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ ಮತ್ತು ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇರುವುದರಿಂದ ನೀವು ವ್ಯಾಯಾಮ ಮಾಡುವ ಸಂದರ್ಭದಲ್ಲಿ ಹೆಚ್ಚು ಬೆವರಿದರೂ ಕೂಡ ನಿಮ್ಮ ದೇಹದಿಂದ ಎಲೆ ಕ್ಟ್ರೋಲೈಟ್ ಅಂಶಗಳು ನಷ್ಟವಾಗದಂತೆ ನೋಡಿಕೊಳ್ಳುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ದಿಯಾ' ಖ್ಯಾತಿಯ ಖುಷಿ ರವಿ- ವಿವೇಕ್ ಸಿಂಹ ನಟನೆಯ 'ಸ್ಪೂಕಿ ಕಾಲೇಜ್' ಟ್ರೇಲರ್ ರಿಲೀಸ್

Fri Jan 6 , 2023
‘ದಿಯಾ’ ಖ್ಯಾತಿಯ ನಟಿ ಖುಷಿ ರವಿ ಹಾಗೂ ವಿವೇಕ್ ಸಿಂಹ ಒಟ್ಟಿಗೆ ನಟಿಸಿರುವ ‘ಸ್ಪೂಕಿ ಕಾಲೇಜ್’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಸೃಷ್ಟಿಸಿದ್ದ ಈ ಸಿನಿಮಾದ ರಿಲೀಸ್ ಡೇಟ್ ಕೂಡ ಬಹಿರಂಗಗೊಂಡಿದೆ. ಟ್ರೇಲರ್ ನೋಡಿದವರಿಗೆ ಇದೊಂದು ಹಾರರ್ ಸಿನಿಮಾ ಎಂಬುದು ಗೊತ್ತಾಗಿದೆ. ಈ ಚಿತ್ರವನ್ನು ‘ರಂಗಿತರಂಗ’ ಸಿನಿಮಾ ಖ್ಯಾತಿಯ ನಿರ್ಮಾಪಕ ಎಚ್ ಕೆ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಹೊಸ ಪ್ರತಿಭೆ ಭರತ್ ಈ ಸಿನಿಮಾಗೆ ನಿರ್ದೇಶನ […]

Advertisement

Wordpress Social Share Plugin powered by Ultimatelysocial