ಭಾರತ ಸ್ವತಂತ್ರ, ಪಾಕಿಸ್ತಾನದವರು ಗುಲಾಮರು: ಇಮ್ರಾನ್ ಖಾನ್

ಇಸ್ಲಾಮಾಬಾದ್: ಪಾಕಿಸ್ತಾನದ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಅಮೆರಿಕದ ಗುಲಾಮರು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದ್ದಾರೆ. ಆದರೆ ಭಾರತವು ರಷ್ಯಾದಿಂದ ಅಗ್ಗದ ತೈಲವನ್ನು ಖರೀದಿಸಿ ಬೆಲೆ ಕಡಿತಗೊಳಿಸಿದೆ ಎಂದು ಹೇಳಿದ್ದಾರೆ.

ಇದು ಭಾರತ ಸ್ವತಂತ್ರವಾಗಿದ್ದು, ನಾವು ಪಾಕಿಸ್ತಾನದವರು ಗುಲಾಮರು ಎಂದು ತೋರಿಸಿದೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥರೂ ಆಗಿರುವ ಇಮ್ರಾನ್ ಖಾನ್, ಚಾರ್‌ಸದ್ಧಾದಲ್ಲಿ ನಡೆದ ಕಾರ್ಮಿಕರ ಸಮಾವೇಶದಲ್ಲಿ ಹೇಳಿದರು.

ಅಮೆರಿಕದ ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿರುವ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಇಮ್ರಾನ್ ಖಾನ್ ಹೊಗಳಿದರು. ಪಾಕಿಸ್ತಾನದ ತ್ವರಿತ ಪ್ರಗತಿಗೂ ಸ್ವತಂತ್ರ ವಿದೇಶಾಂಗ ನೀತಿ ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.

‘ಶೇ 30ರಷ್ಟು ರಿಯಾಯಿತಿ ದರದಲ್ಲಿ ತೈಲ ಖರೀದಿಸಲು ನಮ್ಮ ಸರ್ಕಾರವು ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ ಪಿಯೂರಿ ಮೂಲಕ ನಮ್ಮ ಸರ್ಕಾರವನ್ನು ಪದಚ್ಯುತಗೊಳಿಸಲಾಯಿತು’ ಎಂದು ಆರೋಪಿಸಿದರು.

ಶಾಂತಿಯುತ ಪ್ರತಿಭಟನಾಕಾರರ ಮೇಲೆ ಹಿಂಸಾಚಾರ ನಡೆಸಿದ ಪ್ರಧಾನಿ ಶಾಹಬಾಝ್ ಷರೀಫ್ ಅವರನ್ನು ರಾಷ್ಟ್ರ ಕ್ಷಮಿಸುವುದಿಲ್ಲ. ಅವರೆಲ್ಲರನ್ನು ಶೀಘ್ರದಲ್ಲೇ ಜೈಲಿಗೆ ಅಟ್ಟಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಇಸ್ಲಾಮಾಬಾದ್‌ಗೆ ಮತ್ತೊಂದು ಪ್ರತಿಭಟನಾ ಮೆರವಣಿಗೆಗೆ ಸಿದ್ಧರಾಗುವಂತೆ ಇಮ್ರಾನ್ ಖಾನ್ ಕರೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೊದಲ ನಾಲ್ಕೂ ಸ್ಥಾನ ಮಹಿಳೆಯರದ್ದೇ:

Mon May 30 , 2022
ನವದೆಹಲಿ: ನಾಗರೀಕ ಪರೀಕ್ಷೆ ಪಾಸು ಮಾಡುವುದು ಎಂದರೆ ಸಾಮಾನ್ಯ ಸಂಗತಿಯೇನಲ್ಲ. ಇದಕ್ಕೆ ವರ್ಷಾನುಗಟ್ಟಲೆ ಪಟ್ಟ ಶ್ರಮ, ನಿರಂತರ ಅಭ್ಯಾಸ ಇರಲೇಬೇಕು. ಈ ಪರೀಕ್ಷೆಯಲ್ಲಿ ಪಾಸು ಮಾಡುವುದು ದೊಡ್ಡ ಕನಸೇ ಆಗಿರುತ್ತದೆ. ಅದರಲ್ಲೂ ಮೊದಲ ಸ್ಥಾನ ಪಡೆಯುವುದು ಎಂದರೆ ಅದೊಂದು ತಪಸ್ಸೇ ಆಗಿರುತ್ತದೆ. ಇಂತಹ ದೊಡ್ಡ ಪರೀಕ್ಷೆಯನ್ನು ಕೇವಲ ಪಾಸು ಮಾಡಿದ್ದಷ್ಟೇ ಅಲ್ಲದೇ ಮೊದಲ ನಾಲ್ಕೂ ಸ್ಥಾನವನ್ನು ಮಹಿಳೆಯರೇ ತುಂಬುವ ಮೂಲಕ ಈ ನಾಲ್ವರು ದೇಶಕ್ಕೆ ಹೆಮ್ಮೆಯ ಪುತ್ರಿಯರಾಗಿದ್ದಾರೆ. 2021ನೇ ಸಾಲಿನ […]

Advertisement

Wordpress Social Share Plugin powered by Ultimatelysocial