ಯುಪಿಎಸ್​ಸಿ ಪರೀಕ್ಷೆಯಲ್ಲಿ ಮೊದಲ ನಾಲ್ಕೂ ಸ್ಥಾನ ಮಹಿಳೆಯರದ್ದೇ:

ನವದೆಹಲಿ: ನಾಗರೀಕ ಪರೀಕ್ಷೆ ಪಾಸು ಮಾಡುವುದು ಎಂದರೆ ಸಾಮಾನ್ಯ ಸಂಗತಿಯೇನಲ್ಲ. ಇದಕ್ಕೆ ವರ್ಷಾನುಗಟ್ಟಲೆ ಪಟ್ಟ ಶ್ರಮ, ನಿರಂತರ ಅಭ್ಯಾಸ ಇರಲೇಬೇಕು. ಈ ಪರೀಕ್ಷೆಯಲ್ಲಿ ಪಾಸು ಮಾಡುವುದು ದೊಡ್ಡ ಕನಸೇ ಆಗಿರುತ್ತದೆ. ಅದರಲ್ಲೂ ಮೊದಲ ಸ್ಥಾನ ಪಡೆಯುವುದು ಎಂದರೆ ಅದೊಂದು ತಪಸ್ಸೇ ಆಗಿರುತ್ತದೆ.

ಇಂತಹ ದೊಡ್ಡ ಪರೀಕ್ಷೆಯನ್ನು ಕೇವಲ ಪಾಸು ಮಾಡಿದ್ದಷ್ಟೇ ಅಲ್ಲದೇ ಮೊದಲ ನಾಲ್ಕೂ ಸ್ಥಾನವನ್ನು ಮಹಿಳೆಯರೇ ತುಂಬುವ ಮೂಲಕ ಈ ನಾಲ್ವರು ದೇಶಕ್ಕೆ ಹೆಮ್ಮೆಯ ಪುತ್ರಿಯರಾಗಿದ್ದಾರೆ.

2021ನೇ ಸಾಲಿನ ಯುಪಿಎಸ್​ಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ ಕರ್ನಾಟಕದ 25 ಮಂದಿ ಆಯ್ಕೆಯಾಗಿರುವುದು ವಿಶೇಷ.

ಮೊದಲ ನಾಲ್ಕು ಸ್ಥಾನದಲ್ಲಿ ಮಹಿಳೆಯರೇ ಇದ್ದು, ಶ್ರುತಿ ಶರ್ಮಾ, ಅಂಕಿತಾ ಅಗ್ರವಾಲ್​ ಮತ್ತು ಗಾಮಿನಿ ಸಿಂಗ್ಲಾ ಹಾಗೂ ಐಶ್ವರ್ಯಾ ವರ್ಮಾ ಟಾಪರ್​​ಗಳಾಗಿದ್ದಾರೆ.

ಯುಪಿಎಸ್​ಸಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಶ್ರುತಿ ಶರ್ಮಾ ಪ್ರಥಮ ಸ್ಥಾನ ಪಡೆದುಕೊಂಡಿದ್ದರ, ಎರಡನೇ ಸ್ಥಾನವನ್ನು ಅಂಕಿತಾ ಅಗ್ರವಾಲ್​ ಮತ್ತು ಮೂರನೇ ಸ್ಥಾನದಲ್ಲಿ ಗಾಮಿನಿ ಸಿಂಗ್ಲಾ ಹಾಗೂ ನಾಲ್ಕನೇ ಸ್ಥಾನದಲ್ಲಿ ಐಶ್ವರ್ಯಾ ವರ್ಮಾ ಇದ್ದಾರೆ.

ಒಟ್ಟು 685 ಅಭ್ಯರ್ಥಿಗಳು ಪಾಸಾಗಿದ್ದು, ಕರ್ನಾಟಕದ 25 ಅಭ್ಯರ್ಥಿಗಳು ಪಾಸ್​ ಆಗಿದ್ದಾರೆ. ಫಲಿತಾಂಶವನ್ನು ಯುಪಿಎಸ್​​ಸಿ ಅಧಿಕೃತ ವೆಬ್​ಸೈಟ್​ https://www.upsc.gov.in ನಲ್ಲಿ ನೋಡಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಸಭಾ ಸ್ಥಾನ ನಿರಾಕರಿಸಿದ ಕಾಂಗ್ರೆಸ್ ;ನಟಿ ನಗ್ಮಾ

Mon May 30 , 2022
ಮುಂಬಯಿ : ರಾಜ್ಯಸಭೆಗೆ ಸ್ಥಾನ ಸಿಗದಿರುವ ಬಗ್ಗೆ ನಟಿ, ಕಾಂಗ್ರೆಸ್ ನಾಯಕಿ ನಗ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮಾಡಿ, “ನಮ್ಮ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಜೀ ಅವರು 2003/04 ರಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದಾಗ ಅವರ ಆದೇಶದ ಮೇರೆಗೆ ನನಗೆ ರಾಜ್ಯಸಭೆಯಲ್ಲಿ ಅವಕಾಶ ಕಲ್ಪಿಸಲು ವೈಯಕ್ತಿಕವಾಗಿ ಬದ್ಧರಾಗಿದ್ದರು. ಆಗ ನಾವು ಅಧಿಕಾರದಲ್ಲಿ ಇರಲಿಲ್ಲ. ಅಂದಿನಿಂದ 18 ವರ್ಷಗಳ ಕಾಲ ನನಗೆ ಅವಕಾಶ ಸಿಗಲಿಲ್ಲ. ಇಮ್ರಾನ್ ಅವರು ಮಹಾರಾಷ್ಟ್ರದಿಂದ ಅಭ್ಯರ್ಥಿಯಾಗಿದ್ದಾರೆ. ನಾನು […]

Advertisement

Wordpress Social Share Plugin powered by Ultimatelysocial