ಇಂದಿರಾ ಕ್ಯಾಂಟೀನ್‌ಗಳಲ್ಲಿ ಇನ್ನು ಮುಂದೆ ಇಸ್ಕಾನ್ ಊಟ: ಬೆಲೆ ದುಬಾರಿ ಸಾಧ್ಯತೆ!

ಬೆಂಗಳೂರು, ಮೇ26: ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೊರಗುತ್ತಿತ್ತು. ಇಂದಿರಾಕ್ಯಾಂಟೀನ್ ನಲ್ಲಿನ ಊಟದ ಸೌಲಭ್ಯ ಸರಿಯಾಗಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಇದರಿಂದಾಗಿ ಬಿಬಿಎಂಪಿ ಪಾಲಿಕೆ ವ್ಯಾಪ್ತಿಯಲ್ಲಿರುವ ಕ್ಯಾಂಟೀನ್‌ಗಳಿಗೆ ಇಸ್ಕಾನ್ ಊಟವನ್ನು ತರಿಸಲು ಸಿದ್ದವಾಗಿದೆ.

ಇನ್ನು ಮುಂದೆ ಇಂದಿರಾ ಕ್ಯಾಂಟೀನ್ ನಲ್ಲಿ ಇಸ್ಕಾನ್ ಊಟ ಲಭ್ಯವಾಗಲಿದೆ. ಈ ಕುರಿತಂತೆ ಮಾಹಿತಿ ನೀಡಿದ ಬಿಬಿಎಂಪಿ ಹಣಕಾಸು ವಿಭಾಗ ಪಾಲಿಕೆ ವ್ಯಾಪ್ತಿಯಲ್ಲಿರೋ ಎಲ್ಲಾ ಕ್ಯಾಂಟೀನ್ ಗಳಲ್ಲಿ ಇಸ್ಕಾನ್ ಊಟ ಲಭ್ಯವಾಗಲಿದೆ ಎಂದಿದೆ. ಬಿಬಿಎಂಪಿಯ ವ್ಯಾಪ್ತಿಯಲ್ಲಿ 174 ಇಂದಿರಾ ಕ್ಯಾಂಟೀನ್‌ಗಳಿದ್ದು ಅಷ್ಟು ಕ್ಯಾಂಟೀನ್‌ಗಳಲ್ಲೂ ಇಸ್ಕಾನ್ ಊಟ ಸಿಗಲಿದೆ ಎನ್ನಲಾಗುತ್ತಿದೆ.

ಇಸ್ಕಾನ್‌ನಿಂದ ತರಿಸಲಾಗುವ ಪ್ರತಿದಿನದ ಊಟಕ್ಕೆ 78 ರೂಪಾಯಿ ವೆಚ್ಚ ತಗುಲಲಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ ಇಷ್ಟು ದಿನ 55.30 ರೂಪಾಯಿ ವೆಚ್ಚ ತಗುಲುತ್ತಿತ್ತು. 2017 ರಲ್ಲಿ ನಿಗದಿಪಡಿಸಲಾಗಿದ್ದ ದರದಲ್ಲಿಯೇ ಆಹಾರವನ್ನು ನೀಡಲಾಗುತ್ತಿತ್ತು. ಇದೀಗ ಇಸ್ಕಾನ್ ಊಟಕ್ಕಾಗಿ ಹೆಚ್ಚಿನ ದರವನ್ನು ಪಾವತಿಸುವುದರಿಂದ ಸಾರ್ವಜನಿಕರಿಗೂ ದರದಲ್ಲಿ ಅಲ್ಪಮಟ್ಟಿಗೆ ಏರಿಕೆಯನ್ನು ಮಾಡುವುದು ಬಿಬಿಎಂಪಿ ಅನಿವಾರ್ಯವಾಗಲಿದೆ. ಆದರೆ ಗ್ರಾಹಕರಿಗೆ ಯಾವುದೇ ಹೊರೆ ಹಾಕದೇ ಬಿಬಿಎಂಪಿಯೇ ಹೆಚ್ಚುವರಿ ಹೊರೆಯನ್ನು ಭರಿಸಲು ತೀರ್ಮಾನಿಸಿದೆ ಎಂದೂ ಸಹ ಹೇಳಲಾಗುತ್ತಿದೆ.

ಇನ್ಕಾನ್ ಫೌಂಡೆಷನ್ ಈಗಾಗಲೇ ಬಿಬಿಎಂಪಿ ಶಾಲೆ, ಸರ್ಕಾರಿ ಶಾಲೆ, ಅನುದಾನಿತ ಶಾಲೆ ಸೇರಿದಂತೆ ಪೌರಕಾರ್ಮಿಕರಿಗೆ ಊಟವನ್ನು ನೀಡುತ್ತಿದೆ. ಉತ್ತಮ ಗುಣಮಟ್ಟ ಮತ್ತು ಸ್ವಚ್ಛತೆಯನ್ನು ಕಾಪಾಡುವುದರಿಂದ ಇಸ್ಕಾನ್ ಊಟಕ್ಕೆ ಬೇಡಿಕೆಯೂ ಇದೆ. ಕೋವಿಡ್ ಸಂಧರ್ಭದಲ್ಲಿಯೂ ಇಸ್ಕಾನ್ ಸಂಸ್ಥೆ ವತಿಯಿಂದ ಬಡಜನರಿಗೆ ಅನುಕೂಲವಾಗಲಿ ಎಂದು ಊಟವನ್ನು ಸಂಪೂರ್ಣ ಪ್ಯಾಕ್ ಮಾಡಿ ಜನರಿಗೆ ವಿತರಿಸಲಾಗಿತ್ತು. ಇಂದಿರಾ ಕ್ಯಾಂಟೀನ್ ಸೊರಗುತ್ತಿರುವ ಸಂದರ್ಭದಲ್ಲಿ ಇಸ್ಕಾನ್ ಊಟ ಸರಬರಾಜು ಆಗಲಿದ್ದು, ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ನೋಡಬೇಕು.

ಸರ್ಕಾರ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಲಿದೆ. ಇಂದಿರಾ ಕ್ಯಾಂಟೀನ್‌ನಿಂದ ಪ್ರಯೋಜನವಾಗುತ್ತಿಲ್ಲ ಎಂದೆಲ್ಲಾ ಮಾತನಾಡತೊಡಗಿದ್ದರು. ಆದರೆ ಬಿಬಿಎಂಪಿ ಚುನಾವಣೆಯ ಹೊಸ್ತಿಲಿನಲ್ಲೇ ಊಟಕ್ಕೊಂದು ಪುನಃಶ್ಚೇತನ ದೊರೆಯುತ್ತಿದೆ. ಇಂದಿರಾ ಕ್ಯಾಂಟೀನ್‌ನಲ್ಲಿ 10ರೂ.ಗೆ ಸಿಗುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗಲಿದೆ. ಇದರೊಂದಿಗೆ ಬಿಬಿಎಂಪಿ ಚುನಾವಣೆಗಳು ನಡೆಯುವುದರಿಂದ ಆಡಳಿತ ಪಕ್ಷ ಬಿಜೆಪಿಗೂ ಇದರಿಂದ ಉತ್ತಮ ಹೆಸರು ಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಇಂದಿರಾಕ್ಯಾಂಟೀನ್‌ನಲ್ಲಿ ಇಸ್ಕಾನ್ ಊಟ ದೊರೆಯಲಿದೆ. ಇಂದಿರಾ ಕ್ಯಾಂಟಿನ್‌ಗಳಲ್ಲಿ ಊಟ ವಿತರಿಸುವ ಒಡಂಬಡಿಕೆಗೆ ಇಸ್ಕಾನ್ ಸಂಸ್ಥೆಯೊಂದಿಗೆ ಮಾಡಿಕೊಳ್ಳಲಾಗಿದೆ. ಇಸ್ಕಾನ್ ಸಂಸ್ಥೆಗೆ 4ಜಿ ವಿನಾಯಿತಿ ಅಡಿಯಲ್ಲಿ ಟೆಂಡರ್ ನೀಡಲು ಬಿಬಿಎಂಪಿ ಸಮ್ಮತಿಸಿದೆ ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಿಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆ ತಿಂಡಿಗೆ 5 ರೂಪಾಯಿ ತೆಗೆದಕೊಂಡರೇ ಮಧ್ಯಾಹ್ನ ಮತ್ತು ರಾತ್ರಿ 10 ರೂಪಾಯಿಗೆ ಊಟ ದೊರೆಯುತ್ತದೆ. ಪ್ರತಿದಿನ ತಿಂಡಿಗೆ ಇಡ್ಲಿಯ ಜೊತೆಗೆ ಒಂದು ರೈಸ್ ಪದಾರ್ಥ ಇರುತ್ತದೆ. ಮಧ್ಯಾಹ್ನ ಮತ್ತು ರಾತ್ರಿಗೆ ಅನ್ನಸಾಂಬರ್ ಅಥವಾ ರೈಸ್ ಪದಾರ್ಥವನ್ನು ನೀಡಲಾಗುತ್ತದೆ. ಇದೇ ರೀತಿಯ ಮೆನುವನ್ನು ಇಸ್ಕಾನ್ ಸಹ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೂನ್‌ 1ರಿಂದ ಕಾರು, ಬೈಕ್‌ ದುಬಾರಿ!

Fri May 27 , 2022
ಮುಂಬಯಿ: ದ್ವಿಚಕ್ರ ವಾಹನ, ಕಾರು ಖರೀದಿಯ ಇಚ್ಛೆಯಿದ್ದರೆ ಮಾಸಾಂತ್ಯದ ಮೊದಲೇ ಪೂರೈಸಿಕೊಳ್ಳಿ. ಜೂ. 1ರಿಂದ ಥರ್ಡ್‌ ಪಾರ್ಟಿ ವಿಮೆ ಮೊತ್ತ ದಲ್ಲಿ ಏರಿಕೆಯಾಗಲಿದೆ. ಆದರೆ ಎಲೆಕ್ಟ್ರಿಕ್‌ ವಾಹನಗಳಿಗೆ ರಿಯಾಯಿತಿ ನೀಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿದ ಪರಿಷ್ಕೃತ ವಿಮಾ ದರದ ಪ್ರಕಾರ 1,000 ಸಿಸಿ ವರೆಗಿನ ಕಾರುಗಳ ವಾರ್ಷಿಕ ಥರ್ಡ್‌ ಪಾರ್ಟಿ ವಿಮೆ ಪ್ರೀಮಿಯಂ ದರದಲ್ಲಿ 22 ರೂ. ಹೆಚ್ಚಳವಾಗಲಿದ್ದು, 2,094 ರೂ.ಗಳಾಗಲಿವೆ. 1,000ದಿಂದ 1,500 […]

Advertisement

Wordpress Social Share Plugin powered by Ultimatelysocial