2024 ರ ವೇಳೆಗೆ ಭಾರತದ ಆಟೊಮೊಬೈಲ್‌ ಇಂಡಸ್ಟ್ರಿ ಗಾತ್ರ ಇಮ್ಮಡಿ

 

ಭಾರತ ತನ್ನ ಆಟೊಮೊಬೈಲ್‌ ಉದ್ದಿಮೆಯ ಗಾತ್ರವನ್ನು 2024ರ ಅಂತ್ಯದ ವೇಳೆಗೆ ಎರಡು ಪಟ್ಟು ವೃದ್ಧಿಸಲು ಉದ್ದೇಶಿಸಿದೆ. 15 ಲಕ್ಷ ಕೋಟಿ ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ  ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.ಕೇಂದ್ರ ಸರ್ಕಾರ ಮುಂದಿನ ವರ್ಷ 5 ಲಕ್ಷ ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಲಿದೆ. ಇದರಲ್ಲಿ ಎರಡು ಲಕ್ಷ ಕೋಟಿ ಸರ್ಕಾರದ ಕಡೆಯಿಂದ ಬರಲಿದ್ದರೆ, ಉಳಿದ ಹಣ ಬಂಡವಾಳ ಮಾರುಕಟ್ಟೆಯಿಂದ ಬರಲಿದೆ ಎಂದರು.ಪ್ರಸ್ತುತ ಆಟೊಮೊಬೈಲ್‌ ಇಂಡಸ್ಟ್ರಿ 7.5 ಲಕ್ಷ ಕೋಟಿ ರೂ. ಗಾತ್ರವಿದ್ದು, ಇದನ್ನು 2024ರ ಅಂತ್ಯ ವೇಳೆಗೆ 15 ಲಕ್ಷ ಕೋಟಿ ರೂ.ಗೆ ಏರಿಸಲು ಬಯಸುತ್ತಿದ್ದೇವೆ. ಇದರೊಂದಿಗೆ ಭಾರತ ಜಗತ್ತಿನ ಅತಿ ದೊಡ್ಡ ಆಟೊಮೊಬೈಲ್‌ ತಯಾರಕಗಳಲ್ಲಿ ಒಂದು ಎನ್ನಿಸಲಿದೆ. ಇದು ಭಾರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ವಿವರಿಸಿದರು. 50 ವರ್ಷದ ಹಿಂದೆ ಭಾರತದಲ್ಲಿ ಜನ ಮೆಚ್ಚುಗೆ ಗಳಿಸಿದ್ದ ಹಾಗೂ ಜನರ ಜೀವನಾಡಿಯಾಗಿದ್ದ ಕೈನೆಟಿಕ್​ ಮೊಪೆಡ್ ಎಲೆಕ್ಟ್ರಿಕ್ ಅವತಾರದಲ್ಲಿ ರಸ್ತೆಗಿಳಿಯಲಿದೆ. ಬೇಡಿಕೆ ಕಡಿಮೆಯಾದ ಕಾರಣ 2000ರಲ್ಲಿ ಈ ಸ್ಕೂಟರ್​ನ ಉತ್ಪಾದನೆಯನ್ನು ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಬ್ಯಾಟರಿ ಚಾಲಿತ ವಾಹನವಾಗಿ ಜನರ ಮನಸ್ಸು ಗೆಲ್ಲಲು ಮುಂದಾಗಿದೆ.ಕೈನೆಟಿಕ್​ ಎಂಜಿನಿಯರಿಂಗ್​ ಲಿಮಿಟೆಡ್​ ಎಲೆಕ್ಟ್ರಿಕ್​ ಸ್ಕೂಟರ್​ ಅನ್ನು ಮಾರುಕಟ್ಟೆಗೆ ಇಳಿಸುವುದಾಗಿ ಪ್ರಕಟಿಸಿದ್ದು, ಚಾಸಿಸ್​ ಹಾಗೂ ಇನ್ನಿತರ ಬಿಡಿಭಾಗಗಳ ಉತ್ಪಾದನೆ ಆರಂಭಿಸಿದೆ. ಕೈನೆಟಿಕ್​ ಗ್ರೀನ್​ ಎನರ್ಜಿ ಆಯಂಡ್ ಪವರ್​ ಸೊಲ್ಯೂಶನ್​ ಮೂಲಕ ಇದರ ಮಾರಾಟ ನಡೆಯಲಿದೆ.ಮಹಾರಾಷ್ಟ್ರದ ಅಹಮದ್​ನಗರದಲ್ಲಿರುವ ಉತ್ಪಾದನಾ ಘಟಕದಲ್ಲಿ ಚಾಸಿಸ್​, ಮೇನ್​ ಸ್ಟಾಂಡ್​, ಸೈಡ್ ಸ್ಟಾಂಡ್ ಮತ್ತು ಸ್ವಿಂಗ್​ ಆರ್ಮ್​ಗಳ ಉತ್ಪಾದನೆ ಆರಂಭಗೊಂಡಿದೆ ಎಂಬುದಾಗಿ ಕಂಪನಿಯು ಹೇಳಿದೆ ಅದೇ ರೀತಿ ತಿಂಗಳಿಗೆ 5 ಸಾವಿರ ದ್ವಿ ಚಕ್ರ ವಾಹನಗಳ ಉತ್ಪಾದನೆ ಮಾಡುವುದಾಗಿ ಹೇಳಿಕೊಂಡಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

 

Please follow and like us:

Leave a Reply

Your email address will not be published. Required fields are marked *

Next Post

ವಿಶ್ವದಾದ್ಯಂತ ಟ್ವಿಟ್ಟರ್ ಡೌನ್: ಬಳಕೆದಾರರ ಪರದಾಟ | Twitter down

Thu Dec 29 , 2022
ನವದೆಹಲಿ: ವಿಶ್ವದಾದ್ಯಂತ ಸಾವಿರಾರು ಟ್ವಿಟರ್ ಬಳಕೆದಾರರು ( Twitter users ) ಎಲೋನ್ ಮಸ್ಕ್ ಅವರ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ( Elon musk’s social media platform ) ಡೌನ್ ಆಗಿರೋದಾಗಿ ಎಂದು ವರದಿ ಮಾಡಿದ್ದಾರೆ.ಇಂಟರ್ನೆಟ್ ಮಾನಿಟರಿಂಗ್ ವೆಬ್ಸೈಟ್ ಡೌನ್ ಡಿಟೆಕ್ಟರ್ ಬುಧವಾರ ಸಂಜೆ ಟ್ವಿಟರ್ ಡೌನ್ ಆಗಿದೆ ಎಂಬುದಾಗಿ ವರದಿ ಮಾಡಿದೆ.ಕೆಲವು ಬಳಕೆದಾರರು ಪ್ಲಾಟ್ಫಾರ್ಮ್ನ ಡೆಸ್ಕ್ಟಾಪ್ ಆವೃತ್ತಿಯಲ್ಲಿ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ವರದಿ ಮಾಡಿದರೆ, ಇತರರು ಟ್ವೀಟ್ಡೆಕ್ನೊಂದಿಗೆ […]

Advertisement

Wordpress Social Share Plugin powered by Ultimatelysocial