ಚಾಮರಾಜನಗರದ ನಾಗವಳ್ಳಿ ಗ್ರಾಮದಲ್ಲಿ ಬಹಿಷ್ಕಾರದ ಕರಿನೆರಳು : ಶವ ಸಂಸ್ಕಾರಕ್ಕೆ ಬಾರದ ಜನ.

ಚಾಮರಾಜನಗರದ ನಾಗವಳ್ಳಿ ಗ್ರಾಮದಲ್ಲಿ ಬಹಿಷ್ಕಾರದ ಕರಿನೆರಳು : ಶವ ಸಂಸ್ಕಾರಕ್ಕೆ ಬಾರದ ಜನ…

ಚಾಮರಾಜನಗರ ತಾಲ್ಲೂಕಿನ ನಾಗವಳ್ಳಿ ಗ್ರಾಮದಲ್ಲಿ ಸುಮಾರು 5 ವರ್ಷಗಳಿಂದ ಕುಟುಂಬವೊಂದನ್ನು ಬಹಿಷ್ಕರಿಸಿದ್ದು, ಕುಟುಂಬದಲ್ಲಿ ಹಿರಿಯರೊಬ್ಬರು ಮೃತಪಟ್ಟು ಶವ ಸಂಸ್ಕಾರಕ್ಕೆ ಗ್ರಾಮಸ್ಥರು ಬರದೇ ಇರುವ ಅಮಾನವೀಯ ಘಟನೆ ನಡೆದಿದೆ…

ತಾಲ್ಲೂಕಿನ ನಾಗವಳ್ಳಿ ಗ್ರಾಮದ ರಂಗಶೆಟ್ಟಿ (65ವರ್ಷ ) ಅವರು ಭಾನುವಾರ ಬೆಳಗ್ಗೆ ಮೃತ ಪಟ್ಟಿದ್ದು, ಗ್ರಾಮದಿಂದ ರಂಗಶೆಟ್ಟಿ ಅವರ ಕುಟುಂಬವನ್ನು ಬಹಿಷ್ಕರಿಸಿರುವ ಕಾರಣಕ್ಕಾಗಿ ಶವಸಂಸ್ಕಾರಕ್ಕೆ ಉಪ್ಪಾರ ಸಮುದಾಯದ ಜನರು ಬಾರದೇ ಇರುವ ಘಟನೆ ನಡೆದಿದೆ…..

ಮೃತರಿಗೆ ರಂಗಸ್ವಾಮಿ, ಸಿದ್ದರಾಜು, ಗಂಗಮ್ಮ, ಮಹಾಲಕ್ಷ್ಮೀ ಎಂಬ 4ಜನ ಮಕ್ಕಳಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಮೃತರ ಪತ್ನಿ ಮಹದೇವಮ್ಮ ಅವರು ನಮ್ಮನ್ನು 5ವರ್ಷಗಳಿಂದ ಗ್ರಾಮದಲ್ಲಿ ಬಹಿಷ್ಕರಿಸಿರುವ ಕಾರಣ ನಾವು ತೋಟದ ಮನೆಯಲ್ಲಿ ಇದ್ದೆವು ಈಗ ನನ್ನ ಪತಿ ಸಾವನ್ನಪ್ಪಿದ್ದು ಊರಿನಿಂದ ಯವೊಬ್ಬ ಜನರು ಶವ ಸಂಸ್ಕಾರಕ್ಕೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ….

ನಾಗವಳ್ಳಿ ಗ್ರಾಮದಲ್ಲಿ ಶಾಮಿಯಾನ ಬಾಡಿಗೆಗೆ ಪಡೆಯಲು ಅವಕಾಶ ಮಾಡಿ ಕೊಟ್ಟಿಲ್ಲ, 15ರಿಂದ 20ಜನ ಸಂಬಂಧಿಕರನ್ನು ಬಿಟ್ಟರೆ ಯಾರು ಕೂಡ ಗ್ರಾಮಸ್ಥರು ಬಂದಿಲ್ಲ. ಆಗಾಗಿ ಈ ಕುರಿತು ರಾಮಸಮುದ್ರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ….

ನಾಗವಳ್ಳಿ ಗ್ರಾಮದ ಉಪ್ಪಾರ ಸಮುದಾಯದ ಯಜಮಾನರು 5ವರ್ಷಗಳ ಹಿಂದೆ ರಂಗಶೆಟ್ಟಿ ಹಾಗೂ ಅವರ ತಮ್ಮ ಗುಂಡಶೆಟ್ಟಿ ಕುಟುಂಬದವರನ್ನು ಜಮೀನಿನ ವಿಚಾರವಾಗಿ ಬಹಿಷ್ಕಾರ ಮಾಡಲಾಗಿದ್ದು, ಇಂದಿಗೂ ಸಹ ಕುಟುಂಬದವರನ್ನು ಯಾರು ಮಾತನಾಡಿಸುವಂತಿಲ್ಲ ಎಂದು ಸಂಬಂಧಿಕರು ತಿಳಿಸಿದರು….

ಗುಂಡಶೆಟ್ಟಿ ರವರು ಮಾತನಾಡಿ ನಮ್ಮ ಸಮುದಾಯದ ಯಜಮಾನರು ಹೇಳಿದಂತೆ ಕೇಳಬೇಕು. ಜಮೀನಿನ ವಿಚಾರವಾಗಿ ನಾವು ಕೇಳಿಲ್ಲ ಎಂದು 5ವರ್ಷಗಳ ಹಿಂದೆ ಬಹಿಷ್ಕಾರ ಹಾಕಿದರು. ನಂತರ ನಾವು ನಮ್ಮ ಜಮೀನಿನಲ್ಲೇ ವಾಸ ಮಾಡುತಿದ್ದೇವೆ. ನಮ್ಮ ಅಣ್ಣ ರಂಗಶೆಟ್ಟಿ ಭಾನುವಾರ ಬೆಳಗ್ಗೆ ಮರಣ ಹೊಂದಿದ್ದಾರೆ. ಅಂತ್ಯಕ್ರಿಯೆ ನೆರವೇರಿಸಲು ಗ್ರಾಮದ ಯಾರೊಬ್ಬರೂ ಬಾರದೇ ನಮಗೆ ದಿಕ್ಕು ತೋಚದಂತೆ ಆಗಿದೆ. ಆಗಾಗಿ ಜಿಲ್ಲಾಡಳಿತ ನಮಗೆ ಆಗಿರುವ ಅನ್ಯಾಯ ಸರಿಪಡಿಸಿ ನಮಗೆ ನ್ಯಾಯ ಸಿಗುವವರೆಗೂ ಹೆಣವನ್ನು ತೋಟದ ಮನೆಯಲ್ಲಿ ಇಟ್ಟು ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ಶಾಸಕರು ನಮ್ಮ ಸಮುದಾಯದವರೇ ಆಗಿದ್ದು,ಅವರ ಗಮನಕ್ಕೆ ತಂದರು ಪ್ರಯೋಜನೆ ಆಗಿಲ್ಲ ಎಂದರು.ನಮಗೆ ಸರ್ಕಾರದಿಂದ ನ್ಯಾಯ ದೊರಕಿಸಿಕೊಡಿ ಎಂದು ಮನವಿ ಮಾಡಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಣೆ

Mon Feb 13 , 2023
ನವದೆಹಲಿ: ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಣೆ ಮಾಡುವ ಉದ್ದೇಶದಿಂದ ವಿಶೇಷ ಲಸಿಕೆ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ ಜೂನ್ ನಿಂದ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಯೋಜನೆ ಜಾರಿಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯ ತೀರ್ಮಾನಿಸಿದೆ. ಹ್ಯೂಮನ್ ಪ್ಯಾಪಿಲೋಮಾ ವೈರಸ್ ಎಂದು ಕರೆಯಲಾಗುವ ಲಸಿಕೆಯನ್ನು ಕರ್ನಾಟಕ, ತಮಿಳುನಾಡು, ಮಿಜೋರಾಂ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ 2.55 ಕೋಟಿ ಹೆಣ್ಣು ಮಕ್ಕಳಿಗೆ ನೀಡುವ ಗುರಿ ಹೊಂದಲಾಗಿದೆ. ಕೇಂದ್ರ […]

Advertisement

Wordpress Social Share Plugin powered by Ultimatelysocial