ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಣೆ

ವದೆಹಲಿ: ಹೆಣ್ಣು ಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್ ನಿಂದ ರಕ್ಷಣೆ ಮಾಡುವ ಉದ್ದೇಶದಿಂದ ವಿಶೇಷ ಲಸಿಕೆ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಮೊದಲ ಹಂತದಲ್ಲಿ ಜೂನ್ ನಿಂದ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ಯೋಜನೆ ಜಾರಿಗೊಳಿಸಲು ಕೇಂದ್ರ ಆರೋಗ್ಯ ಸಚಿವಾಲಯ ತೀರ್ಮಾನಿಸಿದೆ.

ಹ್ಯೂಮನ್ ಪ್ಯಾಪಿಲೋಮಾ ವೈರಸ್ ಎಂದು ಕರೆಯಲಾಗುವ ಲಸಿಕೆಯನ್ನು ಕರ್ನಾಟಕ, ತಮಿಳುನಾಡು, ಮಿಜೋರಾಂ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ 2.55 ಕೋಟಿ ಹೆಣ್ಣು ಮಕ್ಕಳಿಗೆ ನೀಡುವ ಗುರಿ ಹೊಂದಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿ ರೂಪಿಸಿದ್ದು, 2026ರ ವೇಳೆಗೆ 16.02 ಕೋಟಿ ಲಸಿಕೆ ಡೋಸ್ ಗಳನ್ನು ಖರೀದಿಸಲು ಟೆಂಡರ್ ಆಹ್ವಾನಿಸಲಾಗುವುದು. ಗರ್ಭಕಂಠದ ಕ್ಯಾನ್ಸರ್ ಕಡೆಗೆ ಸೀರಂ ಇನ್ಸ್ಟಿಟ್ಯೂಟ್ ದೇಶಿಯವಾಗಿ ಸರ್ವ ವಾಕ್ ಲಸಿಕೆ ಅಭಿವೃದ್ಧಿಪಡಿಸಿದೆ.

ಪ್ರಸಕ್ತ ಮಾರುಕಟ್ಟೆಯಲ್ಲಿ ಅಮೆರಿಕ ಕಂಪನಿಯ ಗಾರ್ಡಸಿಲ್ ಲಸಿಕೆ ಲಭ್ಯವಿದ್ದು, ಸಿಂಗಲ್ ಡೋಸ್ ನ ಈ ಲಸಿಕೆಗೆ 10,850 ರೂ. ದರ ಇದೆ. ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ಲಸಿಕೆ ಎರಡು ಡೋಸ್ ನದ್ದಾಗಿದ್ದು, ಪ್ರತಿ ಡೋಸ್ ಗೆ 2 ಸಾವಿರ ರೂ. ದರ ಇದೆ. ಖಾಗಿಯಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃಷಭ ರಾಶಿ ಭವಿಷ್ಯ

Mon Feb 13 , 2023
    ಉತ್ತಮ ಜೀವನಕ್ಕಾಗಿ ನಿಮ್ಮ ಆರೋಗ್ಯ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಸುಧಾರಿಸಲು ಪ್ರಯತ್ನಿಸಿ. ದಿನದಆರಂಭವು ಚೆನ್ನಾಗಿ ಅಗಿದರು, ಸಂಜೆಯ ಸಮಯದಲ್ಲಿ ಯಾವುದೇ ಕಾರಣದಿಂದ ನಿಮ್ಮ ಹಣ ಖರ್ಚಾಗಬಹುದು. ಇದರಿಂದ ನೀವು ತೊಂದರೆಗೊಳಗಾಗಬಹುದು. ಮಕ್ಕಳು ಅವರ ವೃತ್ತಿಯನ್ನು ಯೋಜಿಸುವುದಕ್ಕಿಂತ ಹೆಚ್ಚಾಗಿ ಹೊರಾಂಗಣ ಚಟುವಟಿಕೆಗಳಲ್ಲೇ ಸಮಯ ಕಳೆಯುವುದರಿಂದ ಅವರು ನಿರಾಸೆ ಉಂಟುಮಾಡಬಹುದು. ವೈಯಕ್ತಿಕ ಸಂಬಂಧಗಳು ಸೂಕ್ಷ್ಮ ಹಾಗೂ ಸಂವೇದನಾಶೀಲವಾಗಿವೆ. ಹೊಸ ಪ್ರಸ್ತಾಪಗಳ ಅಕರ್ಷಕವಾಗಿದ್ದರೂ ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಲ್ಲ. […]

Advertisement

Wordpress Social Share Plugin powered by Ultimatelysocial