IPL 2022:ಈ 10 ಆಟಗಾರರ ಮೇಲೆ ಹಣದ ಸುರಿಮಳೆ;

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2022ರ ಆಟಗಾರರ ಹರಾಜಿ(IPL 2022 Mega Auction)ಗೆ ದಿನಗಣನೆ ಆರಂಭವಾಗಿದೆ. ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯುವ ಈ 2 ದಿನಗಳ ಹರಾಜಿನಲ್ಲಿ ಪ್ರತಿ ಆಟಗಾರನ ಭವಿಷ್ಯವನ್ನು ಫ್ರಾಂಚೈಸಿ ನಿರ್ಧರಿಸುತ್ತದೆ.

ಇದು ಐಪಿಎಲ್‌ನ 15ನೇ ಸೀಸನ್ ಆಗಿದ್ದು, ವಿಶ್ವ ಕ್ರಿಕೆಟ್‌ನ ಅನೇಕ ದೊಡ್ಡ ತಾರೆಗಳು ಈ ಪಂದ್ಯಾವಳಿಯ ಭಾಗವಾಗಲಿದ್ದಾರೆ. ಐಪಿಎಲ್ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಿಸಲ್ಪಡುವ ಲೀಗ್ ಆಗಿದೆ. ಚುಟುಕು ಕ್ರಿಕೆಟ್‌ನ ಕದನದಲ್ಲಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗಲಿದೆ.

ಹರಾಜಿನಲ್ಲಿ ಎಷ್ಟು ಆಟಗಾರರನ್ನು ಸೇರಿಸಲಾಗುತ್ತದೆ?

ಫೆಬ್ರವರಿ 12 ಮತ್ತು 13ರಂದು ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ(IPL Auction) 590 ಆಟಗಾರರು ಭಾಗವಹಿಸುತ್ತಿದ್ದಾರೆ. ಇವರಲ್ಲಿ 228 ಮಂದಿ ಕ್ಯಾಪ್ಡ್ ಆಟಗಾರರಾಗಿದ್ದರೆ, 355 ಆಟಗಾರರು ಅನ್‌ಕ್ಯಾಪ್ ಆಗಿದ್ದಾರೆ. ಇದಲ್ಲದೆ ಅಸೋಸಿಯೇಟ್ ನೇಷನ್ಸ್ ತಂಡದಿಂದ 7 ಆಟಗಾರರು ಇಲ್ಲಿರುತ್ತಾರೆ. ಈ ಹರಾಜಿನಲ್ಲಿ ಸ್ಟಾರ್ ಆಟಗಾರರ ಮೇಲೆ ಹಣದ ಮಳೆಯಾಗಬಹುದು. ಅನೇಕ ಹೊಸ ಆಟಗಾರರ ಅದೃಷ್ಟ ಪರೀಕ್ಷೆ ನಡೆಯಲಿದೆ. ಅದೇ ರೀತಿ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 10 ಮಂದಿ ಗೇಮ್ ಚೇಂಜರ್ ಆಟಗಾರರ ಮೇಲೆ ಹಣದ ಮಳೆಯೇ ಸುರಿಯಲಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಈ ಆಟಗಾರರನ್ನು ಖರೀದಿಸಲು ಫ್ರಾಂಚೈಸಿಗಳು ತಾ ಮುಂದು ನಾಮುಂದು ಎಂದು ಎನ್ನುತ್ತಿವೆ.

ಈ 10 ಆಟಗಾರರ ಮೇಲೆ ಹಣದ ಮಳೆ ಸುರಿಯಬಹುದು!

ಈ ಬಾರಿಯ ಐಪಿಎಲ್ ಟೂರ್ನಿ(IPL 2022)ಗೆ ಕೆಲ ತಂಡಗಳು ಹಲವು ಬಲಿಷ್ಠ ಆಟಗಾರರನ್ನು ಉಳಿಸಿಕೊಂಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈ ಆಟಗಾರರು ಐಪಿಎಲ್ ಮೆಗಾ ಹರಾಜಿಗೆ ಪ್ರವೇಶಿಸುವುದು ಖಚಿತವಾಗಿದೆ. ಮೆಗಾ ಹರಾಜಿನಲ್ಲಿ ಅಂತಹ ಅನೇಕ ಪ್ರತಿಭಾವಂತ ಕ್ರಿಕೆಟಿಗರು ಇದ್ದಾರೆ. ಇವರು ಈ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಬಹುದು. ಇವರಲ್ಲಿ ಶ್ರೇಯಸ್ ಅಯ್ಯರ್, ಶಿಖರ್ ಧವನ್ ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಕ್ವಿಂಟನ್ ಡಿ ಕಾಕ್, ಪ್ಯಾಟ್ ಕಮಿನ್ಸ್, ಕಗಿಸೊ ರಬಾಡ, ಟ್ರೆಂಟ್ ಬೌಲ್ಟ್, ಡೇವಿಡ್ ವಾರ್ನರ್, ಫಾಫ್ ಡು ಪ್ಲೆಸಿಸ್ ಸೇರಿದ್ದಾರೆ. ಈ ಆಟಗಾರರು ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹರಾಜಿನಲ್ಲಿ ಈ ಆಟಗಾರರನ್ನು ಖರೀದಿಸಲು ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಲಿದೆ. ಈ ಎಲ್ಲಾ ಆಟಗಾರರು ತಮ್ಮ ಮೂಲ ಬೆಲೆಯನ್ನು 2 ಕೋಟಿ ರೂ.ಗೆ ನಿಗದಿಪಡಿಸಿದ್ದಾರೆ.

ಪಂದ್ಯದ ಗತಿಯನ್ನೇ ಬದಲಿಸುವ ನಿಪುಣರು !

ವಿಶ್ವದ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ರವಿಚಂದ್ರನ್ ಅಶ್ವಿನ್ ತಮ್ಮ ಮಾರಕ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ವಿಕೆಟ್ ಪಡೆಯುವ ಇವರ ಕಲೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ. ಟಿ-20 ಕ್ರಿಕೆಟ್‌ನಲ್ಲಿ ಅಶ್ವಿನ್ ಅತ್ಯಂತ ಮಿತವ್ಯಯದಿಂದ ಬೌಲಿಂಗ್ ಮಾಡುತ್ತಾರೆ. ಇನ್ನು ಭಾರತದ ಸ್ಟಾರ್ ಆರಂಭಿಕ ಬ್ಯಾಟ್ಸ್‌ ಮನ್ ಶಿಖರ್ ಧವನ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡಿಲ್ಲ. ಧವನ್ ಉತ್ತಮ ಬ್ಯಾಟಿಂಗ್‌ಗೆ ಹೆಸರುವಾಸಿ. ಇವರು ಮೈದಾನದ ಎಲ್ಲಾ ಮೂಲೆ ಮೂಲೆಗೂ ಬೌಂಡರಿ-ಸಿಕ್ಸರ್ ಅಟ್ಟುತ್ತಾರೆ. ಇವರು 192 ಪಂದ್ಯಗಳಲ್ಲಿ 5,728 ರನ್ ಗಳಿಸಿದ್ದಾರೆ. ಹೈದರಾಬಾದ್ (SRH) ತಂಡದ ನಾಯಕತ್ವವನ್ನೂ ವಹಿಸಿಕೊಂಡಿದ್ದ ಧವನ್ ಬ್ಯಾಟಿಂಗ್ ಜೊತೆಗೆ ನಾಯಕತ್ವದ ಕ್ಯಾಪ್ ತೊಡಲು ಸಿದ್ಧರಾಗಿದ್ದಾರೆ.

ಈ ವಿಕೆಟ್ ಕೀಪರ್ ದುಬಾರಿ ಬೆಲೆಗೆ ಬಿಕರಿಯಾಗಬಹುದು

ಕ್ವಿಂಟನ್ ಡಿ ಕಾಕ್ ಅವರನ್ನು ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿಲ್ಲ. ದಕ್ಷಿಣ ಆಫ್ರಿಕಾದ ಈ ವಿಕೆಟ್ ಕೀಪರ್ ಬ್ಯಾಟ್ಸ್‌ ಮನ್ ತಮ್ಮ ಅಪಾಯಕಾರಿ ಬ್ಯಾಟಿಂಗ್‌ನಿಂದ ವಿಶ್ವದಾದ್ಯಂತ ಪ್ರಸಿದ್ಧರಾಗಿದ್ದಾರೆ. ಐಪಿಎಲ್ ಮೆಗಾ ಹರಾಜಿನಲ್ಲಿ ಕ್ವಿಂಟನ್ ಡಿ ಕಾಕ್‌ಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಡಿ ಕಾಕ್ ಇದುವರೆಗೆ 77 ಐಪಿಎಲ್ ಪಂದ್ಯಗಳನ್ನು ಆಡಿದ್ದು, 2,256 ರನ್ ಗಳಿಸಿದ್ದಾರೆ. ಒಂದು ಶತಕವನ್ನೂ ಭಾರಿಸಿರುವ ಈ ಸ್ಫೋಟಕ ಬ್ಯಾಟ್ಸ್‌ ಮನ್‌ನನ್ನು ಖರೀದಿಸಲು ತಂಡಗಳು ನೀರಿನಂತೆ ಹಣವನ್ನು ಖರ್ಚು ಮಾಡುತ್ತವೆ. ಡಿ ಕಾಕ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವೈಟ್ ಬಾಲ್ ಕ್ರಿಕೆಟ್ ನತ್ತ ಮಾತ್ರ ಗಮನ ಹರಿಸಿ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ.

ಎಲ್ಲಾ ತಂಡಗಳ ಕಣ್ಣು ಈ ವಿದೇಶಿ ಆಟಗಾರರ ಮೇಲಿರುತ್ತದೆ

ಸದ್ಯ 6 ವಿದೇಶಿ ಆಟಗಾರರ ಮೇಲೆ ಎಲ್ಲಾ ತಂಡಗಳು ಕಣ್ಣಿಟ್ಟಿವೆ. ಡೇವಿಡ್ ವಾರ್ನರ್, ಫಾಫ್ ಡು ಪ್ಲೆಸಿಸ್, ಕ್ವಿಂಟನ್ ಡಿ ಕಾಕ್, ಪ್ಯಾಟ್ ಕಮ್ಮಿನ್ಸ್, ಕಗಿಸೊ ರಬಾಡ, ಟ್ರೆಂಟ್ ಬೌಲ್ಟ್, ಫಾಫ್ ಡು ಪ್ಲೆಸಿಸ್ ರನ್ನು ಖರೀದಿಸಲು ಫ್ರಾಂಚೈಸಿಗಳು ಉತ್ಸುಕವಾಗಿವೆ. ಡೇವಿಡ್ ವಾರ್ನರ್(David Warner) ಯಾವುದೇ ತಂಡಕ್ಕೆ ಲಾಭದಾಯಕ ಎಂದು ಸಾಬೀತುಪಡಿಸಿದ್ದಾರೆ. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿರುವ ವಾರ್ನರ್ ತಮ್ಮ ನಾಯಕತ್ವದಲ್ಲಿ ಹೈದರಾಬಾದ್ ಗೆ ಏಕೈಕ ಪ್ರಶಸ್ತಿಯನ್ನು ಗೆದ್ದುಕೊಟ್ಟಿದ್ದರು. ಬೋಲ್ಟ್ ಮತ್ತು ರಬಾಡ ತಮ್ಮ ಕಿಲ್ಲರ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಮಾರಕ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಾಯಿಸುತ್ತಾರೆ. ಹೀಗಾಗಿ ಇವರನ್ನು ಖರೀದಲು ತಂಡಗಳು ಉತ್ಸುಕವಾಗಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದೆ ಆದರೆ ಎಸಿ ಇರಲಿಲ್ :ಸಿರಾಜ್

Tue Feb 1 , 2022
ಬೆಂಗಳೂರು: ಹಲವು ಯುವ ಕ್ರಿಕೆಟಿಗರಂತೆ ಹೈದರಾಬಾದಿನ ವೇಗಿ ಮೊಹಮ್ಮದ್ ಸಿರಾಜ್ ಕೂಡ ಐಪಿಎಲ್‌ನಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದವರು. ಅವರು ಪ್ರಸ್ತುತ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹಲವು ಆಟಗಾರರಂತೆ ಸಿರಾಜ್ ಅವರ ಬದುಕು ಹೂವಿನ ಹಾಸಿಗೆಯಂತಿರಲಿಲ್ಲ. ಅವರ ತಂದೆ ಆಟೋ ಚಾಲಕರಾಗಿದ್ದರು. ಆದರೂ. ಮಗನನ್ನು ಕಷ್ಟಪಟ್ಟು ಪ್ರಯೋಜಕನನ್ನಾಗಿ ಮಾಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ 2017 ರಲ್ಲಿ ಸಿರಾಜ್ ಅವರನ್ನು ಖರೀದಿಸಿದ್ದರೂ ಸಹ. 2018 ರ ಹರಾಜಿನಲ್ಲಿ ರಾಯಲ್ […]

Advertisement

Wordpress Social Share Plugin powered by Ultimatelysocial