ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದೆ ಆದರೆ ಎಸಿ ಇರಲಿಲ್ :ಸಿರಾಜ್

ಬೆಂಗಳೂರು: ಹಲವು ಯುವ ಕ್ರಿಕೆಟಿಗರಂತೆ ಹೈದರಾಬಾದಿನ ವೇಗಿ ಮೊಹಮ್ಮದ್ ಸಿರಾಜ್ ಕೂಡ ಐಪಿಎಲ್‌ನಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದವರು. ಅವರು ಪ್ರಸ್ತುತ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಹಲವು ಆಟಗಾರರಂತೆ ಸಿರಾಜ್ ಅವರ ಬದುಕು ಹೂವಿನ ಹಾಸಿಗೆಯಂತಿರಲಿಲ್ಲ. ಅವರ ತಂದೆ ಆಟೋ ಚಾಲಕರಾಗಿದ್ದರು. ಆದರೂ. ಮಗನನ್ನು ಕಷ್ಟಪಟ್ಟು ಪ್ರಯೋಜಕನನ್ನಾಗಿ ಮಾಡಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್ 2017 ರಲ್ಲಿ ಸಿರಾಜ್ ಅವರನ್ನು ಖರೀದಿಸಿದ್ದರೂ ಸಹ. 2018 ರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು ಖರೀದಿಸಿದ ನಂತರ ಅವರ ಜೀವನ ಸಂಪೂರ್ಣ ಬದಲಾಯಿತು. ಆ ನಂತರ ಸಿರಾಜ್ ಹಿಂತಿರುಗಿ ನೋಡಲಿಲ್ಲ. ಐಪಿಎಲ್ 2022 ರ ಮೆಗಾ ಹರಾಜಿನ ಹಿನ್ನೆಲೆಯಲ್ಲಿ ಆರ್‌ಸಿಬಿ ಕೊಹ್ಲಿ(15 ಕೋಟಿ ರೂ.) ಗ್ಲೆನ್ ಮ್ಯಾಕ್ಸ್‌ವೆಲ್(ರೂ. 11 ಕೋಟಿ) ಮತ್ತು ಸಿರಾಜ್(ರೂ. 7 ಕೋಟಿ) ಅವರನ್ನು ಉಳಿಸಿಕೊಂಡಿತ್ತು.

ಫೆಬ್ರವರಿ 12 ಮತ್ತು 13 ರಂದು ಐಪಿಎಲ್ 2022 ಹರಾಜು ನಡೆಸಲು ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ ಪ್ರಚಾರ ಕಾರ್ಯಗಳನ್ನು ಕೈಗೆತ್ತಿಕೊಂಡಿರುವ RCB ಆಟಗಾರರೊಂದಿಗೆ ನಡೆಸಿರುವ ಪಾಡ್ ಕಾಸ್ಟ್ ಟ್ರೈಲರ್ ಬಿಡುಗಡೆ ಮಾಡಿದೆ. ಇದರಲ್ಲಿ ಸಿರಾಜ್ ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್‌ಗೆ ಆಯ್ಕೆಯಾದ ನಂತರ, ನಾನು ಖರೀದಿಸಿದ ಮೊದಲ ಐಟಂ ಯಾವುದೆಂದು ಸಿರಾಜ್ ಹೀಗೆ ಹೇಳುತ್ತಾರೆ. ‘ಮೊದಲು ನಾನು ಐಫೋನ್ 7+ ಖರೀದಿಸಿದೆ. ನಂತರ ಸೆಕೆಂಡ್ ಹ್ಯಾಂಡ್ ಕಾರು. ಕೊರೊಲ್ಲಾ (ಟೊಯೋಟಾ) ಖರೀದಿಸಿದೆ. ಏಕೆಂದರೆ ಐಪಿಎಲ್ ಆಟಗಾರರಿಗೆ ಕಾರು ಇರಬೇಕು! ನಾನು ಪ್ಲಾಟಿನಂ (ಬೈಕು) ಮೇಲೆ ಎಷ್ಟು ದಿನ ಅಂಥ ಸವಾರಿ ಮಾಡೋದು ಹೇಳಿ? ಹಾಗಾಗಿ ನಾನು ಕಾರು ಖರೀದಿಸಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

UNION BUDGET:ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದು ಹೀಗೆ;

Tue Feb 1 , 2022
ಮೈಸೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಬಜೆಟ್ ಕುರಿತಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಜನರ ನಿರೀಕ್ಷೆ ಈಡೇರಿಲ್ಲ ಎಂದಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೊನ್ನೆ ನಾನು ಇಲ್ಲಿ ವಿಶ್ರಾಂತಿಗಾಗಿ ಬಂದಿದ್ದ ಕಾರಣ ಇಲ್ಲಿಯೇ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ ಎಂದರು. ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೊನ್ನೆ ನಾನು ಇಲ್ಲಿ ವಿಶ್ರಾಂತಿಗಾಗಿ ಬಂದಿದ್ದ […]

Advertisement

Wordpress Social Share Plugin powered by Ultimatelysocial