UNION BUDGET:ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದು ಹೀಗೆ;

ಮೈಸೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಬಜೆಟ್ ಕುರಿತಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಜನರ ನಿರೀಕ್ಷೆ ಈಡೇರಿಲ್ಲ ಎಂದಿದ್ದಾರೆ.

ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೊನ್ನೆ ನಾನು ಇಲ್ಲಿ ವಿಶ್ರಾಂತಿಗಾಗಿ ಬಂದಿದ್ದ ಕಾರಣ ಇಲ್ಲಿಯೇ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ ಎಂದರು.

ಹೆಚ್.ಡಿ.ಕೋಟೆ ತಾಲೂಕಿನ ಜಂಗಲ್ ಲಾಡ್ಜ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೊನ್ನೆ ನಾನು ಇಲ್ಲಿ ವಿಶ್ರಾಂತಿಗಾಗಿ ಬಂದಿದ್ದ ಕಾರಣ ಇಲ್ಲಿಯೇ ಸುದ್ದಿಗೋಷ್ಠಿ ಮಾಡುತ್ತಿದ್ದೇನೆ ಎಂದರು.

ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2022-23 ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ನಾನು ಬಹಳ ನಿರೀಕ್ಷೆ ಇಟ್ಟಿರಲಿಲ್ಲ,ಆದರೆ ರೈತರು, ಯುವಕರು, ಮಹಿಳೆಯರು ತುಂಬಾ ನಿರೀಕ್ಷೆ ಇಟ್ಟಿದ್ದರು.ಆ ನಿರೀಕ್ಷೆ ಈಡೇರಿಲ್ಲ ಎಂದರು.

ಆರೋಗ್ಯ, ಶಿಕ್ಷಣ, ಕೃಷಿ ಈ ಕ್ಷೇತ್ರದ ಉತ್ತೇಜನ ನೀಡುವ ಯೋಜನೆ ಘೋಷಣೆಯಾಗುತ್ತವೆ ಎಂಬ ನಿರೀಕ್ಷೆ ಇತ್ತು. ಕಳೆದ ವರ್ಷ 34 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಸೈಜ್ ಮಂಡಿಸಿದ್ದರು.ಈ ವರ್ಷ 39.45 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. 4ಲಕ್ಷದ 61 ಸಾವಿರ ಕೋಟಿ ರೂಪಾಯಿ ಹೆಚ್ಚಳದ ಬಜೆಟ್ ಘೋಷಣೆ ಮಾಡಿದ್ದಾರೆ.ವರ್ಷಕ್ಕೆ 11ಲಕ್ಷದ 87 ಸಾವಿರದ 180 ಕೋಟಿ ರೂಪಾಯಿಗಳನ್ನ ಸಾಲ ಮಾಡುತ್ತಿದ್ದಾರೆ. ಅಸಲು ಮತ್ತು ಬಡ್ಡಿ ಬಜೆಟ್ ಭಾಗ, ಸಾಲಕ್ಕೆ ಬಡ್ಡಿಗೆ ಹೋಗುತ್ತದೆ.ವಾರ್ಷಿಕವಾಗಿ 9 ಲಕ್ಷದ 40 ಸಾವಿರದ 651 ಕೋಟಿ ಬಡ್ಡಿ ಕಟ್ಟಬೇಕಾಗುತ್ತದೆ ಎಂದರು.

ನರೇಗಾ ಇಲ್ಲದೆ ಇದ್ದಿದ್ದರೆ ಹಳ್ಳಿಗಳಿಗೆ ಬಹಳ ಕಷ್ಟ ಆಗುತ್ತಿತ್ತು.ಆ ಯೋಜನೆ ಡಾ. ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜಾರಿ ಮಾಡಿದ್ದರು.
ಈ ಬಜೆಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ 38,169 ಸಾವಿರ ಕೋಟಿ ಕಡಿಮೆ ಮಾಡಿದ್ದಾರೆ ಎಂದರು.

ಗ್ರಾಮೀಣ ಜನರಿಗೆ ಉದ್ಯೋಗ ಕೊಡಬೇಕಾದರೆ ನರೇಗಾ ಅನುದಾನ ಹೆಚ್ಚು ಮಾಡಬೇಕಿತ್ತು.ಕಳೆದ ವರ್ಷಕ್ಕೂ ಈ ವರ್ಷಕ್ಕೂ ಹೋಲಿಕೆ ಮಾಡಿದರೆ ಕೇವಲ 80 ಕೋಟಿ ಅಷ್ಟೇ ಹೆಚ್ಚು ಮಾಡಿದ್ದಾರೆ. ಅಹಾರ ಮತ್ತು ನಾಗರೀಕ ಸರಬರಾಜು ಕ್ಷೇತ್ರ ಸಬ್ಸಿಡಿ 79638 ಕೋಟಿ ಕಡಿಮೆಯಾಗಿದೆ.ಫುಡ್ ಸಬ್ಸಿಡಿ ಕಡಿಮೆ ಮಾಡಿದ್ದಾರೆ.ಇದು ಉಚಿತ ಅಕ್ಕಿ ಮೇಲೆ ಪರಿಣಾಮ ಬೀರಲಿದೆ‌ ಎಂದರು.

ಜಿಡಿಪಿ ಮಹನೋನ್ ಸಿಂಗ್ ಕಾಲದಲ್ಲಿ 46 % ಇದ್ದರೆ ಈವಾಗ 62 % ಆಗಿದೆ.ನರೇಂದ್ರ ಮೋದಿ ಕಾಲ ಸುಭೀಕ್ಷವಾಗಿದೆ ಅನ್ನುವುದು ಸುಳ್ಳು ಎಂದರು.

ಉನ್ನತ ಶಿಕ್ಷಣಕ್ಕೆ ನ್ಯಾಷನಲ್ ಎಜುಕೇಶನಲ್ ಪಾಲಿಸಿ ಬೇರೆ ತಂದಿದ್ದಾರೆ.4779 ಕೋಟಿ ರೂಪಾಯಿ ಗಳನ್ನ ಉನ್ನತ ಶಿಕ್ಷಣಕ್ಕೆ ಹೆಚ್ಚು ಮಾಡಿದ್ದಾರೆ. ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ಕಡಿಮೆ ಮಾಡಿದ್ದಾರೆ ಎಂದರು.

35 ಸಾವಿರ ಕೋಟಿ ರೂಪಾಯಿ ಗೊಬ್ಬರದ ಸಬ್ಸಿಡಿ ಕಡಿಮೆಯಾಗಿದೆ‌. ಮುಂದೆ ಗೊಬ್ಬರದ ಬೆಲೆ ಏರಿಕೆಯಾಗಲಿದೆ ಎಂದು ವಿವರವಾಗಿ ಬಜೆಟ್ ಕುರಿತಾಗಿ ಅಸಮಾಧಾನ ಹೊರ ಹಾಕಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

SANDALWOOD:ಕೇವಲ 5 ತಿಂಗಳ ಅವಧಿಗೆ 30 ಕೋಟಿ ರೂ. ಖರ್ಚು ಮಾಡಿದ್ದೆ;

Tue Feb 1 , 2022
 ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಅಭ್ಯರ್ಥಿಯಾಗಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಮಾಜಿ ಸಂಸದ ಹಾಗೂ ಜೆಡಿಎಸ್‌ ನಾಯಕ ಎಲ್‌.ಆರ್‌.ಶಿವರಾಮೇಗೌಡ ಅಪದ್ಧ ಮಾತನಾಡುವ ಮೂಲಕ ಹಿಟ್‌ ವಿಕೆಟ್‌ ಆಗಿ, 2023ರ ಮ್ಯಾಚ್‌ನಿಂದ ಹೊರ ಬಿದ್ದಿದ್ದಾರೆ. ಜಿ. ಮಾದೇಗೌಡ ಅವರಂತ ದಿಗ್ಗಜರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಸಹಿಸಲಾಗದು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಕಾರ್ಯಕರ್ತೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಶಿವರಾಮೇಗೌಡ, 2023 ರ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ […]

Advertisement

Wordpress Social Share Plugin powered by Ultimatelysocial