ಅಧಿಕಾರಿ ಆಗಲು ಒಟ್ಟು11 ಪ್ರಶ್ನೆಪತ್ರಿಕೆಗಳನ್ನುಎದುರಿಸಬೇಕು…

ತ್ತೀಚೆಗೆ ಯುವ ಜನರಲ್ಲಿ ಸರ್ಕಾರಿ ಹುದ್ದೆಗಳ (Govt Jobs) ಮೇಲಿನ ಕ್ರೇಜ್​​ ಹೆಚ್ಚಾಗಿದೆ. ಚಿಕ್ಕ ವಯಸ್ಸಿನಲ್ಲೇ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಅಧಿಕಾರಿಗಳು ನಮ್ಮ ಮಧ್ಯೆ ಇದ್ದಾರೆ. ದಕ್ಷ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗ (KPSC) ಪರೀಕ್ಷೆಗಳನ್ನು ನಡೆಸುತ್ತೆ.

ಇದರಲ್ಲಿ ಕೆಎಎಸ್​ ಅಧಿಕಾರಿ (KAS Officer) ಹುದ್ದೆಯನ್ನು ಪಡೆಯುವುದು ಅನೇಕ ಅಭ್ಯರ್ಥಿಗಳ ಕನಸಾಗಿದೆ. ಇದಕ್ಕಾಗಿ ಸಾಕಷ್ಟು ತಯಾರಿಯನ್ನು ನಡೆಸುತ್ತಾರೆ. ಕನ್ನಡಿಗರೇ, ರಾಜ್ಯದ ಉನ್ನತ ಹುದ್ದೆಗಳನ್ನು ಅಲಂಕರಿಸುವುದು ಹೆಮ್ಮೆ ವಿಚಾರ.
ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ರುವ ಲಕ್ಷಾಂತರ ಮಂದಿ ಸರ್ಕಾರಿ ಕೆಲಸಗಳಿಗೆ ಪ್ರಯತ್ನಿಸುವುದು ಸೂಕ್ತ. ಏಕೆಂದರೆ ಕನ್ನಡದಲ್ಲೇ ಪರೀಕ್ಷೆ ಬರೆದು ನೀವು ದೊಡ್ಡ ಅಧಿಕಾರಿ ಆಗಬಹುದು. ಹಾಗಾದರೆ ಒಬ್ಬ ವ್ಯಕ್ತಿ ಕೆಎಎಸ್​ ಅಧಿಕಾರಿಯಾಗಬೇಕು ಎಂದರೆ ಎಷ್ಟು ಪರೀಕ್ಷೆಗಳನ್ನು ಎದುರಿಸಬೇಕು? ಎಷ್ಟು ಪ್ರಶ್ನೆಪತ್ರಿಗಳಿಗೆ ತಯಾರಿ ನಡೆಸಬೇಕು. ಈ ಪರೀಕ್ಷೆಗಳು ಯಾವ ವಿಷಯದ ಕುರಿತು ಇರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
3 ಹಂತಗಳ ಪ್ರಕ್ರಿಯೆ
ಕೆಎಎಸ್​ ಅಧಿಕಾರಿಯನ್ನು ಆಯ್ಕೆ ಮಾಡಲು 3 ಹಂತಗಳ ಪ್ರಕ್ರಿಯೆ ಇರುತ್ತದೆ. ಮೊದಲಿಗೆ ಪ್ರಿಲಿಮ್ಸ್​ ಪರೀಕ್ಷೆ. ಇದರಲ್ಲಿ ಯಶಸ್ವಿಯಾದವರು ಮುಂದಿನ ಹಂತಕ್ಕೆ ಹೋಗಬಹುದು. ಅಂದರೆ ಮುಖ್ಯ ಪರೀಕ್ಷೆಗೆ ಹಾಜರಾಗಬಹುದು. ಇದರಲ್ಲಿ ಯಶಸ್ವಿಯಾದವರು 3ನೇ ಹಾಗೂ ಕೊನೆಯ ಹಂತವಾದ ಸಂದರ್ಶನ ಹಂತಕ್ಕೆ ತೆರಳುತ್ತಾರೆ. ಎಲ್ಲಾ 3 ಸುತ್ತಿನಲ್ಲಿ ಉತ್ತೀರ್ಣರಾದ ಅಭ್ಯರ್ಥಿಯನ್ನು ಕರ್ನಾಟಕ ಆಡಳಿತ ಸೇವೆಗಳಿಗೆ ಆಯ್ಕೆ ಮಾಡಲಾಗುತ್ತದೆ.
KAS Interview Tips: ಕೆಎಎಸ್ ಸಂದರ್ಶನಕ್ಕೆ ತಯಾರಿ ಹೀಗಿರಲಿ: ಸರ್ಕಾರಿ ಕೆಲಸಗಳ ಇಂಟರ್​ವ್ಯೂ ಮಾಹಿತಿ ಇಲ್ಲಿದೆ
ಸುತ್ತು 1 – ಪೂರ್ವಭಾವಿ ಪರೀಕ್ಷೆ: ಪೂರ್ವಭಾವಿ ಪರೀಕ್ಷೆಯು 2 ಪರೀಕ್ಷೆಗಳನ್ನು ಒಳಗೊಂಡಿರುತ್ತದೆ. ಎರಡೂ ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲಾಗುತ್ತದೆ. ಎರಡೂ ಪರೀಕ್ಷೆಗಳಲ್ಲಿ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ಪತ್ರಿಕೆಯನ್ನು ಪೂರ್ಣಗೊಳಿಸಲು ಎರಡು ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಒಂದೇ ದಿನ ಬೆಳಗ್ಗೆ ಹಾಗೂ ಮಧ್ಯಾಹ್ನ ಪರೀಕ್ಷೆಗಳು ನಡೆಯುತ್ತವೆ.
ಪ್ರಶ್ನೆಪತ್ರಿಕೆ- 1

ವಿಷಯ ಒಟ್ಟು 100 ಪ್ರಶ್ನೆಗಳು ಒಟ್ಟು 200 ಅಂಕಗಳು
ಸಾಮಾನ್ಯ ಅಧ್ಯಯನ 20 ಪ್ರಶ್ನೆಗಳು 80 ಅಂಕಗಳು
ಮಾನವಿಕ 60 ಪ್ರಶ್ನೆಗಳು 120 ಅಂಕಗಳು

ಪ್ರಶ್ನೆಪತ್ರಿಕೆ- 2

ವಿಷಯ ಒಟ್ಟು ಪ್ರಶ್ನೆಗಳು 100 ಒಟ್ಟು 200 ಅಂಕಗಳು
ಸಾಮಾನ್ಯ ಅಧ್ಯಯನಗಳು 40 ಪ್ರಶ್ನೆಗಳು 80 ಮಾರ್ಕ್ಸ್​
ವಿಜ್ಞಾನ, ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ 30 ಪ್ರಶ್ನೆಗಳು 60 ಮಾರ್ಕ್ಸ್
ಮಾನಸಿಕ ಸಾಮರ್ಥ್ಯ 30 ಪ್ರಶ್ನೆಗಳು 60 ಮಾರ್ಕ್ಸ್

2ನೇ ಸುತ್ತು ಮುಖ್ಯ ಪರೀಕ್ಷೆ

ಮುಖ್ಯ ಪರೀಕ್ಷೆಯು ವಿವರಣಾತ್ಮಕ ರೀತಿಯ ಪ್ರಶ್ನೆಗಳನ್ನು ಹೊಂದಿರುವ 9 ಪೇಪರ್‌ಗಳನ್ನು ಒಳಗೊಂಡಿದೆ. KPSC ಪರೀಕ್ಷೆಯನ್ನು ತೆರವುಗೊಳಿಸಲು ಅಭ್ಯರ್ಥಿಯು ಪ್ರತಿ ಪತ್ರಿಕೆಗೆ ಹಾಜರಾಗಬೇಕು.

ಪರೀಕ್ಷೆಯ ವಿಷಯ ನಿಗದಿತ ಅಂಕಗಳು ಕಾಲಾವಕಾಶ
ಇಂಗ್ಲೀಷ್ 150 2 ಗಂಟೆಗಳು
ಕನ್ನಡ 150 2 ಗಂಟೆ
ಸಾಮಾನ್ಯ ಅಧ್ಯಯನಗಳು – 1 250 3 ಗಂಟೆಗಳು
ಸಾಮಾನ್ಯ ಅಧ್ಯಯನಗಳು-2 250 3 ಗಂಟೆಗಳು
ಸಾಮಾನ್ಯ ಅಧ್ಯಯನಗಳು-3 250 3 ಗಂಟೆಗಳು
ಸಾಮಾನ್ಯ ಅಧ್ಯಯನಗಳು-4 250 3 ಗಂಟೆಗಳು
ಐಚ್ಛಿಕ ವಿಷಯ -1 250 3 ಗಂಟೆಗಳು
ಐಚ್ಛಿಕ ವಿಷಯ-2 250 3 ಗಂಟೆಗಳು

3ನೇ ಸುತ್ತಿನಲ್ಲಿ ಅಭ್ಯರ್ಥಿಗಳ ಸಂದರ್ಶನ ನಡೆಯುತ್ತೆ. ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು, ಸಂದರ್ಶನದಲ್ಲಿ ಗಳಿಸಿದ ಮಾರ್ಕ್ಸ್​​ ಜೊತೆ ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತೆ. ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾದವರು ಕೆಎಎಸ್​​ ಅಧಿಕಾರಿ ಆಗುತ್ತಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RRR: ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ:

Wed Jan 11 , 2023
ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಹಾಡು ಇಂದು ಪ್ರಶಸ್ತಿಗೆ ಭಾಜನವಾಗಿದೆ. ಜೂ.ಎನ್‌.ಟಿ.ಆರ್ ಹಾಗೂ ರಾಮ್ ಚರಣ್ ಹೆಜ್ಜೆ ಹಾಕಿರುವ ‘ನಾಟು ನಾಟು’ ಹಾಡಿಗೆ ಪ್ರತಿಷ್ಟಿತ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಲಭಿಸಿದೆ. ಹಾಗ್ನೋಡಿದ್ರೆ, ಗೋಲ್ಡನ್ ಗ್ಲೋಬ್ಸ್ 2023 ಅವಾರ್ಡ್ಸ್‌ನ ಎರಡು ವಿಭಾಗಗಳಲ್ಲಿ ‘ಆರ್‌ಆರ್‌ಆರ್‌’ ಸಿನಿಮಾ ನಾಮಿನೇಟ್ ಆಗಿತ್ತು. ಬೆಸ್ಟ್ ಒರಿಜಿನಲ್‌ ಸಾಂಗ್ ಹಾಗೂ ಬೆಸ್ಟ್ ನಾನ್-ಇಂಗ್ಲೀಷ್ ಭಾಷೆಯ ಚಿತ್ರ ಎಂಬ ಎರಡು ಕ್ಯಾಟಗರಿಗಳಲ್ಲಿ ‘ಆರ್‌ಆರ್‌ಆರ್‌’ ಚಿತ್ರ ಪ್ರಶಸ್ತಿ ಗೆಲ್ಲುವ […]

Advertisement

Wordpress Social Share Plugin powered by Ultimatelysocial