ಬಾಲಿವುಡ್ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚುತ್ತಿವೆ.

ಇತ್ತೀಚಿನ ಬಹುತೇಕ ಬಾಲಿವುಡ್ ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ನೆಲಕಚ್ಚುತ್ತಿವೆ. ಅದರಲ್ಲೂ ಇತ್ತೀಚೆಗೆ ಬಿಡುಗಡೆ ಆಗಿದ್ದ ಕಂಗನಾ ರನೌತ್‌ ನಟನೆಯ ‘ಧಾಕಡ್’ ಧಾರುಣ ಸೋಲು ಕಂಡಿತ್ತು.

ಸುಮಾರು 85 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ‘ಧಾಕಡ್’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದು ಕೇವಲ 3.75 ಕೋಟಿಯಷ್ಟೆ.

ಇತ್ತೀಚಿನ ದಿನಗಳಲ್ಲಿ ಇಷ್ಟು ಹೀನಾಯವಾಗಿ ಸೋತ ಇನ್ನಾವುದೇ ಸಿನಿಮಾ ಇಲ್ಲ.

ಕಂಗನಾ ರನೌತ್ ಗೂಢಚಾರಿಣಿ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾದ ಟ್ರೈಲರ್ ಬಹುವಾಗಿ ಗಮನ ಸೆಳೆದಿತ್ತು, ಹಾಲಿವುಡ್‌ನ ಕೆಲವು ಗೇಮ್‌ಗಳಿಂದ ಸ್ಪೂರ್ತಿ ಪಡೆದು ದೃಶ್ಯಗಳನ್ನು ಸಂಯೋಜಿಸಲಾಗಿತ್ತು. ದೀಪಕ್ ಮುಕುಟ್ ಹಾಗೂ ಸೋಹೆಲ್ ಮಕ್ಲಾಯಿ ಸಿನಿಮಾಕ್ಕಾಗಿ ಚೆನ್ನಾಗಿಯೇ ಹಣ ಖರ್ಚು ಮಾಡಿದ್ದರು. ಆದರೂ ಸಿನಿಮಾ ಅತಿ ಧಾರುಣವಾಗಿ ನೆಲಕಚ್ಚಿತು. ಸಿನಿಮಾದಿಂದ ಆದ ನಷ್ಟವನ್ನು ಹೇಗೆ ತುಂಬಲಾಯಿತು ಎಂದು ನಿರ್ಮಾಪಕ ದೀಪಕ್ ಮುಕುಟ್ ಮಾತನಾಡಿದ್ದಾರೆ.

ಕಚೇರಿ ಮಾರಿ ಸಾಲ ತೀರಿಸಿದ ನಿರ್ಮಾಪಕ!ಕೆಲವು ಮೂಲಗಳ ಪ್ರಕಾರ ‘ಧಾಕಡ್’ ಸಿನಿಮಾದಿಂದ ಆದ ನಷ್ಟ ಹಾಗೂ ಸಾಲವನ್ನು ತೀರಿಸಲು ತನ್ನ ಕಚೇರಿ ಬಿಡಬೇಕಾದ ಪರಿಸ್ಥಿತಿ ನಿರ್ಮಾಪಕರಿಗೆ ಒದಗಿ ಬಂತು. ಕಚೇರಿ ಮಾರಾಟ ಮಾಡಿ ಇತರೆ ಖರ್ಚುಗಳ ಮೇಲೆ ನಿಯಂತ್ರಣ ಹೇರಿ ನಿರ್ಮಾಪಕರು ಸಾಲಗಳನ್ನು ತೀರಿಸಿದ್ದಾರೆ ಎನ್ನಲಾಗಿದೆ. ‘ಧಾಕಡ್’ ಸಿನಿಮಾವನ್ನು ದೀಪಕ್ ಹಾಗೂ ಸೋಹೆಲ್ ಮಕ್ಲಾಯಿ ಹೆಸರಿನ ಇಬ್ಬರು ನಿರ್ಮಾಪಕರು ನಿರ್ಮಾಣ ಮಾಡಿದ್ದಾರೆ.

ಬಹುಪಾಲು ಹಣ ವಾಪಸ್ಸಾಗಿದೆ: ನಿರ್ಮಾಪಕ ದೀಪಕ್

ಮತ್ತೊಂದು ಸಂದರ್ಶನದಲ್ಲಿ, ”ನಾವು ಕಷ್ಟಪಟ್ಟು ಸಿನಿಮಾ ಮಾಡಿದ್ದೆವು, ಸಿನಿಮಾವು ಬಾಕ್ಸ್‌ಆಫೀಸ್‌ನಲ್ಲಿ ತೀರ ಕಳಪೆ ಪ್ರದರ್ಶನ ನೀಡಿತು ಎಂಬುದರಲ್ಲಿ ಹುರುಳಿಲ್ಲ, ಬಹುಪಾಲು ಬಂಡವಾಳವನ್ನು ನಾನು ವಾಪಸ್ ಪಡೆದಿದ್ದೇನೆ. ಬಾಕಿ ಬಂಡವಾಳವನ್ನು ಮುಂದಿನ ದಿನಗಳಲ್ಲಿ ವಾಪಸ್ ಪಡೆಯಲಿದ್ದೇನೆ” ಎಂದಿದ್ದಾರೆ. ಬಾಕ್ಸ್ ಆಫೀಸ್‌ನಲ್ಲಿ ಕೆಟ್ಟ ಪ್ರದರ್ಶನ ನೀಡಿದ ಕಾರಣ ಒಟಿಟಿಯಲ್ಲಿ ಬಿಡುಗಡೆ ಆಗಲು ಕಷ್ಟಪಡಬೇಕು ಎಂಬ ಸುದ್ದಿಯನ್ನು ಸಹ ನಿರ್ಮಾಪಕರು ಅಲ್ಲಗಳೆದಿದ್ದಾರೆ.

ಜನರ ನಿರ್ಧಾರದ ಬಗ್ಗೆ ಗೌರವ ಇದೆ: ದೀಪಕ್ ಮುಕುಟ್

”ನಾವು ಬಹಳ ಆಸ್ಥೆಯಿಂದ ‘ಧಾಕಡ್’ ಸಿನಿಮಾ ನಿರ್ಮಾಣ ಮಾಡಿದ್ದೆವು. ನಮ್ಮ ನಿರ್ಮಾಣದ ಗುಣಮಟ್ಟ ಚೆನ್ನಾಗಿತ್ತು, ಹೊಸ ರೀತಿಯ ಜಾನರ್ ಅನ್ನು ನಾವು ಆಯ್ಕೆ ಮಾಡಿಕೊಂಡಿದ್ದೆವು, ಆದರೆ ತಪ್ಪು ಎಲ್ಲಿ ಆಯಿತು ಎಂಬುದು ಗೊತ್ತಿಲ್ಲ. ಸಿನಿಮಾ ಸೋತಿತು. ಏನೇ ಆಗಲಿ ಯಾವ ಸಿನಿಮಾ ವೀಕ್ಷಿಸಬೇಕು, ಯಾವ ಸಿನಿಮಾ ವೀಕ್ಷಿಸಬಾರದು ಎಂಬುದನ್ನು ನಿರ್ಣಯಿಸುವವರು ಜನರು, ಅವರ ನಿರ್ಧಾರಕ್ಕೆ ನಾವು ಗೌರವಕೊಡಬೇಕಷ್ಟೆ” ಎಂದಿದ್ದಾರೆ ನಿರ್ಮಾಪಕ ದೀಪಕ್ ಮುಕುಟ್.

ಕಂಗನಾ ಪ್ರತಿಕ್ರಿಯೆ ಏನು?

‘ಧಾಕಡ್’ ಸಿನಿಮಾವು ಮೇ 20 ರಂದು ಬಿಡುಗಡೆ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ತೀರ ಕಳಪೆ ಪ್ರದರ್ಶನ ನೀಡಿದ ‘ಧಾಕಡ್’ ಬಾಕ್ಸ್‌ ಆಫೀಸ್‌ನಲ್ಲಿ 5 ಕೋಟಿಗಿಂತಲೂ ಕಡಿಮೆ ಗಳಿಕೆ ಮಾಡಿತು. ಹಲವು ಕಡೆ ‘ಧಾಕಡ್’ ಸಿನಿಮಾದ ಶೋಗಳು ರದ್ದಾದವು. ಆ ಬಳಿಕ ‘ಧಾಕಡ್’ ಅನ್ನು ಜೀ 5 ಗೆ ಮಾರಾಟ ಮಾಡಲಾಯ್ತು. ಅಲ್ಲೂ ಸಹ ಹೆಚ್ಚಿನ ಜನ ಸಿನಿಮಾವನ್ನು ವೀಕ್ಷಿಸಲು ಉತ್ಸಾಹ ತೋರಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದ ಕಂಗನಾ, 2019 ರಲ್ಲಿ 160 ಕೋಟಿ ಗಳಿಸಿದ ‘ಮಣಿಕರ್ಣಿಕಾ’ ಸಿನಿಮಾ ನೀಡಿದ್ದೇನೆ, 2020 ಕೋವಿಡ್ ವರ್ಷ. 2021 ರಲ್ಲಿ ‘ತಲೈವಿ’ ಸಿನಿಮಾ ಒಟಿಟಿಯಲ್ಲಿ ಬ್ಲಾಕ್ ಬಸ್ಟರ್ ಆಗಿದೆ. 2022 ರಲ್ಲಿ ‘ಲಾಕ್ ಅಪ್’ ಶೋ ನಿರೂಪಣೆ ಮಾಡುತ್ತಿದ್ದೇನೆ. ಈ ವರ್ಷ ಇನ್ನೂ ಮುಗಿದಿಲ್ಲ, ಆಟ ಇನ್ನೂ ಬಾಕಿ ಇದೆ” ಎಂದಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಾಪ ಸ್ವತಃ ಈಶ್ವರಪ್ಪನವರೇ ರಿಜೆಕ್ಟ್ ಆಗಿದ್ದಾರೆ :ಪ್ರಿಯಾಂಕ್ ಖರ್ಗೆ

Wed Jul 6 , 2022
  ಕಲಬುರಗಿ: ಕಾಂಗ್ರೆಸ್ ಪಕ್ಷ ರಿಜೆಕ್ಟೆಡ್ ಪಕ್ಷ ಎಂದು ಮಾಜಿ‌ ಸಚಿವ ಈಶ್ವರಪ್ಪ ಹೇಳಿದ್ದಾರೆ. ಪಾಪ ಸ್ವತಃ ಈಶ್ವರಪ್ಪನವರೇ ರಿಜೆಕ್ಟ್ ಆಗಿದ್ದಾರೆ. ಗುತ್ತಿಗೆದಾರರ ಕಮೀಷನ್ ಕೇಸಲ್ಲಿ ಏನೂ ನಡೆದೇ ಇಲ್ಲ ಅಂದಿದ್ದ ಅವರೇ ರಾಜೀನಾಮೆ ‌ನೀಡಿದರಲ್ಲ. ಅಷ್ಟು ಸಾಕಲ್ಲವಾ? ರಿಜೆಕ್ಟೆಡ್ ಅನ್ನಲಿಕ್ಕೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಕುಟುಕಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಿಮ್ಮ ಬಾಯಿ ಬಡಕುತನಕ್ಕೆ ನಿಮ್ಮ ಸಚಿವ ಸ್ಥಾನವನ್ನು ಕಿತ್ತುಕೊಳ್ಳಲಾಗಿದೆ. ಹಾಗಿದ್ದಾಗ ಯಾರೂ ರಿಜೆಕ್ಟೆಡ್ ಅನ್ನುವುದು […]

Advertisement

Wordpress Social Share Plugin powered by Ultimatelysocial