ಚಳಿಗಾಲದಲ್ಲಿ ಅನಾರೋಗ್ಯದಿಂದ ದೂರ ಇರಲು ತಪ್ಪದೆ ಇವುಗಳನ್ನು ಸೇವಿಸಿ

ಚಳಿಗಾಲದಲ್ಲಿ ಅನಾರೋಗ್ಯದಿಂದ ದೂರ ಇರಲು ತಪ್ಪದೆ ಇವುಗಳನ್ನು ಸೇವಿಸಿ

ಚಳಿಗಾಲದಲ್ಲಿ ನಾವು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಚಳಿಗಾಲದಲ್ಲಿ ಕಡಿಮೆ ನೀರು ಕುಡಿಯುವುದರಿಂದ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇದರಿಂದ ಕಾಯಿಲೆ ಬೀಳಬೇಕಾಗುತ್ತದೆ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ, ನಂತರ ಇವುಗಳನ್ನು ಸೇವಿಸಿದರೆ ಆರೋಗ್ಯವಾಗಿರಬಹುದು.ಚಳಿಗಾಲದಲ್ಲಿ ಖಾಲಿಹೊಟ್ಟೆಯಲ್ಲಿ ಪಪ್ಪಾಯವನ್ನು ತಿನ್ನಿ. ಇದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು. ಹೊಟ್ಟೆಯ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ತಡೆಯುತ್ತದೆ.

ಚಳಿಗಾಲದಲ್ಲಿ ನೆನೆಸಿದ ಬಾದಾಮಿಯನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ. ಇದರಲ್ಲಿ ವಿಟಮಿನ್ ಇ, ಪ್ರೋಟೀನ್, ಫೈಬರ್, ಒಮೆಗಾ 3 ಮತ್ತು 6 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಇದು ಮೆದುಳನ್ನು ಆರೋಗ್ಯವಾಗಿಡುತ್ತದೆ. ಹಾಗೇ ಇದು ದೇಹವನ್ನು ಬೆಚ್ಚಗಿರಿಸುತ್ತದೆ.ಚಳಿಗಾಲದಲ್ಲಿ ರಾತ್ರಿ ನೆನೆಸಿಟ್ಟ ವಾಲ್ ನಟ್ಸ್ ಅನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ರೋಗಗಳ ಅಪಾಯ ಕಡಿಮೆಯಾಗುತ್ತದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಡ್ರೈಫ್ರೂಟ್ಸ್ ಗಳನ್ನು ಸೇವಿಸಿ. ಇದು ಹೊಟ್ಟೆಯ ಆರೋಗ್ಯವನ್ನು ಚೆನ್ನಾಗಿ ಇಡುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗಿ ನಡೆಯುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಾಲಿಬಾನ್ ಆಡಳಿತದ ಮಹಾ ಎಡವಟ್ಟು: ಶತ್ರು ರಾಷ್ಟ್ರಕ್ಕೆ 6 ಕೋಟಿ ಹಣ ವರ್ಗಾಯಿಸಿ, ಈಗ ವಾಪಸ್ ನೀಡುವಂತೆ ಮನವಿ!

Wed Dec 22 , 2021
ಕಾಬೂಲ್: ಪ್ರಜಾಸತ್ತಾತ್ಮಕ ಸರ್ಕಾರವನ್ನು ಉರುಳಿಸಿ ಅಫ್ಘಾನಿಸ್ತಾನದಲ್ಲಿ ಆಡಳಿತಕ್ಕೆ ಬಂದಿದ್ದ ತಾಲಿಬಾನ್ ಸರ್ಕಾರ ಮಹಾ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ಆಕಸ್ಮಿಕವಾಗಿ ತನ್ನ ಶತ್ರುರಾಷ್ಟ್ರ ಕೋಟ್ಯಂತರ ಹಣವನ್ನು ರವಾನೆ ಮಾಡಿ ಈಗ ಅದನ್ನು ವಾಪಸ್ ನೀಡುವಂತೆ ಗೋಗರೆಯುತ್ತಿದೆ. ಹೌದು.. ಅಧಿಕಾರದ ಗಂಧವೇ ಗೊತ್ತಿಲ್ಲದ ತಾಲಿಬಾನ್ ಗೆ ಅಫ್ಘಾನಿಸ್ತಾನದಲ್ಲಿ ಅಂಧಾ ದರ್ಬಾರ್ ನಡೆಸುತ್ತಿದೆ. ತಾವು ಮಾಡಿದ ತಪ್ಪಿನಿಂದಾಗಿ ಕೋಟ್ಯಂತರ ರೂಪಾಯಿಯನ್ನು ಕಳೆದುಕೊಂಡಿರುವ ಪ್ರಸಂಗವೊಂದು ಇದೀಗ ಬೆಳಕಿಗೆ ಬಂದಿದೆ. ಸೆಪ್ಟೆಂಬರ್‌ನಲ್ಲಿ ತಾಲಿಬಾನ್ ಆಡಳಿತವು ತಜಕಿಸ್ತಾನ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ […]

Advertisement

Wordpress Social Share Plugin powered by Ultimatelysocial