ಸೈಫ್‌ ಮತ್ತು ಕರೀನಾ ಮಧ್ಯೆ ಬಿಸಿಬಿಸಿ ಚರ್ಚೆ:

Saif Ali Khan: ಬಾಲಿವುಡ್ ನಟಿ ಕರೀನಾ ಕಪೂರ್ ಚಿತ್ರರಂಗದಿಂದ ದೀರ್ಘ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ನಟಿ ಮತ್ತೆ ತೆರೆಯ ಮೇಲೆ ಬಂದಿದ್ದಾರೆ. ಅದೂ ಪತಿ ಸೈಫ್ ಜತೆಗೂಡಿ. ಆದರೆ ಬೆಳ್ಳಿತೆರೆಯ ಮೇಲಲ್ಲ! ಮತ್ತೆಲ್ಲಿ?ಬಾಲಿವುಡ್ ನಟಿ ಕರೀನಾ ಕಪೂರ್  ಕಳೆದ ಕೆಲವು ಸಮಯದಿಂದ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದಿದ್ದರು

ಇದೀಗ ಮತ್ತೆ ಮೊದಲಿನಂತೆ ಸಕ್ರಿಯರಾಗುತ್ತಿದ್ದಾರೆ. ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ದ   ಕೆಲಸಗಳನ್ನು ಅವರು ಪೂರ್ತಿ ಮಾಡಿದ್ದಾರೆ. ಆದರೆ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಂಡು, ಅಧಿಕೃತವಾಗಿ ಘೋಷಿಸಿಲ್ಲ. ಇದರಿಂದಾಗಿ ಅಭಿಮಾನಿಗಳು ಕರೀನಾರನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಬೇಕೆಂದರೆ ‘ಲಾಲ್ ಸಿಂಗ್ ಛಡ್ಡಾ’ ತೆರೆಕಾಣುವವರೆಗೆ ಕಾಯಬೇಕು. ಆದರೆ ಇದೀಗ ಬೆಬೊ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಅದೂ ಪತಿ ಸೈಫ್ ಅಲಿ ಖಾನ್  ಜತೆ ತೆರೆ ಹಂಚಿಕೊಳ್ಳುವ ಮೂಲಕ. ಹೌದು. ಈ ತಾರಾ ಜೋಡಿ ಒಟ್ಟಾಗಿ ಕಾಣಿಸಿಕೊಂಡಿದ್ದಲ್ಲದೇ, ತೆರೆಯ ಮೇಲೆ ತೀವ್ರ ಚರ್ಚೆಯನ್ನೂ ನಡೆಸಿದ್ದಾರೆ. ಆಮೇಲೇನಾಯ್ತು? ಏನಿದು ಸಮಾಚಾರ ಅಂತೀರಾ?

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್​ಗೆ ಜಾಹಿರಾತು ಕ್ಷೇತ್ರದಲ್ಲಿ ದೊಡ್ಡ ಬೇಡಿಕೆ ಇದೆ. ಕರೀನಾ ಚಿತ್ರಗಳಿಂದ ಬ್ರೇಕ್ ಪಡೆದಿದ್ದರೂ, ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪ್ರಸ್ತುತ ಅವರು ಜಾಹಿರಾತೊಂದರಲ್ಲಿ ಬಣ್ಣಹಚ್ಚಿದ್ದಾರೆ. ವಿಶೇಷವೆಂದರೆ ಕರೀನಾಗೆ ಅವರ ಪತಿ ಸೈಫ್ ಅಲಿ ಖಾನ್ ಸಾಥ್ ನೀಡಿದ್ದಾರೆ. ಈರ್ವರು ಜತೆಯಾಗಿ ತೆರೆಹಂಚಿಕೊಂಡಿದ್ದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಖಾಸಗಿ ಕಂಪನಿಯೊಂದು ಇತ್ತೀಚೆಗೆ ತನ್ನ ಬ್ರಾಂಡ್ ಹೆಸರನ್ನು ಬದಲಿಸಿತ್ತು. ಈ ಕುರಿತ ಜಾಹಿರಾತಿನಲ್ಲಿ ಕರೀನಾ ಹಾಗೂ ಸೈಫ್ ಕಾಣಿಸಿಕೊಂಡಿದ್ದಾರೆ. ಸೈಫ್ ವಸ್ತುಗಳನ್ನು ಗ್ರಾಹಕರಿಗೆ ನೀಡುವ ಮಳಿಗೆಯವನಾಗಿ ಕಾಣಿಸಿಕೊಂಡಿದ್ದು, ಕರೀನಾ ಗ್ರಾಹಕರಾಗಿ ಕಾಣಿಸಿಕೊಂಡಿದ್ದಾರೆ. ಮಜವಾಗಿ ಮೂಡಿಬಂದಿರುವ ಜಾಹಿರಾತಿನಲ್ಲಿ ಕರೀನಾ ಹಾಗೂ ಸೈಫ್ ನಡುವೆ ಬಿಸಿಬಿಸಿ ಚರ್ಚೆಯೂ ನಡೆದಿದೆ. ಕೊನೆಗೆ ಕರೀನಾರನ್ನು ಸೈಫ್ ಮನವೊಲಿಸಿ, ಕಂಪನಿಯ ಬ್ರಾಂಡ್ ಬದಲಾಗಿದ್ದನ್ನು ತಿಳಿಸಿಕೊಡುತ್ತಾರೆ. ಅಲ್ಲದೇ ಸೈಫ್, ನೀವು ಕೋಪಗೊಂಡಾಗ ಕರೀನಾ ಕಪೂರ್ ರೀತಿ ಕಾಣುತ್ತೀರಿ ಎಂದು ನುಡಿದಿದ್ದಾರೆ. ಅಲ್ಲಿಗೆ ಜಾಹಿರಾತು ಮುಕ್ತಾಯವಾಗಿದೆ. ಕೊನೆಯಲ್ಲಿರುವ ಈರ್ವರ ಸಂಭಾಷಣೆಯನ್ನು ಉಲ್ಲೇಖಿಸಿರುವ ಫ್ಯಾನ್ಸ್ ಕಾಮೆಂಟ್​ಗಳ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮುಂಡರಗಿ ತಾಲೂಕು : ಅರೆಅಲೆಮಾರಿ ಜನಾಂಗದವರಿಗೆ ಅರಿವು ಕಾರ್ಯಕ್ರಮ.

Sun Jan 30 , 2022
ಮುಂಡರಗಿ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾದ ಬಸವರಾಜ್ ಬಳ್ಳಾರಿ ಅವರು ಮಾತನಾಡಿ ಒಗ್ಗಟ್ಟು ಬರಬೇಕು ಅಂದರೆ ಶಿಕ್ಷಣ ಮುಖ್ಯ ಪಾತ್ರವಾಗಿದೆ ಪ್ರತಿಯೊಬ್ಬರೂ ಶಿಕ್ಷಣ ಪಡೆಯಲು ಮುಂದಾಗಬೇಕು ಶಿಕ್ಷಣ ಪಡೆಯದಿದ್ದರೆ ಆರ್ಥಿಕವಾಗಿ ಸಬಲರಾಗಲು ಹೇಗೆ ಸಾಧ್ಯ ಶಿಕ್ಷಣ ಪಡೆಯಲು ಮುಂದಾಗಬೇಕು ಸಮಾಜದಲ್ಲಿ ಒಳ್ಳೆಯ ಹೆಸರು ಒಳ್ಳೆಯ ಬೆಳವಣಿಗೆ ಒಳ್ಳೆಯ ಉದ್ಯೋಗ ಒಳ್ಳೆಯ ರಾಜಕೀಯ ಮಾಡಬೇಕೆಂದರೆ ಶಿಕ್ಷಣ ಬಹುಮುಖ್ಯವಾದ ಪಾತ್ರ ಎಂದರು. ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯದರ್ಶಿ ಗಣಚಾರಿ […]

Advertisement

Wordpress Social Share Plugin powered by Ultimatelysocial