RRR: ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ:

ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಹಾಡು ಇಂದು ಪ್ರಶಸ್ತಿಗೆ ಭಾಜನವಾಗಿದೆ. ಜೂ.ಎನ್‌.ಟಿ.ಆರ್ ಹಾಗೂ ರಾಮ್ ಚರಣ್ ಹೆಜ್ಜೆ ಹಾಕಿರುವ ‘ನಾಟು ನಾಟು’ ಹಾಡಿಗೆ ಪ್ರತಿಷ್ಟಿತ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ ಲಭಿಸಿದೆ. ಹಾಗ್ನೋಡಿದ್ರೆ, ಗೋಲ್ಡನ್ ಗ್ಲೋಬ್ಸ್ 2023 ಅವಾರ್ಡ್ಸ್‌ನ ಎರಡು ವಿಭಾಗಗಳಲ್ಲಿ ‘ಆರ್‌ಆರ್‌ಆರ್‌’ ಸಿನಿಮಾ ನಾಮಿನೇಟ್ ಆಗಿತ್ತು. ಬೆಸ್ಟ್ ಒರಿಜಿನಲ್‌ ಸಾಂಗ್ ಹಾಗೂ ಬೆಸ್ಟ್ ನಾನ್-ಇಂಗ್ಲೀಷ್ ಭಾಷೆಯ ಚಿತ್ರ ಎಂಬ ಎರಡು ಕ್ಯಾಟಗರಿಗಳಲ್ಲಿ ‘ಆರ್‌ಆರ್‌ಆರ್‌’ ಚಿತ್ರ ಪ್ರಶಸ್ತಿ ಗೆಲ್ಲುವ ರೇಸ್‌ನಲ್ಲಿತ್ತು.

ಇದೀಗ ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶನದ ಕಾಲ ಭೈರವ ಹಾಗೂ ರಾಹುಲ್ ಸಿಪ್ಲಿಗುಂಜ್ ಹಾಡಿರುವ ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ಸ್ 2023 ಸಾಲಿನ ‘ಬೆಸ್ಟ್ ಒರಿಜಿನಲ್ ಸಾಂಗ್’ ಪ್ರಶಸ್ತಿ ಲಭಿಸಿದೆ. ಆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಆರ್‌ಆರ್‌ಆರ್‌’ ಸಿನಿಮಾ ವಿಶಿಷ್ಟ ಸಾಧನೆ ಮಾಡಿದೆ. ಇಂತಿಪ್ಪ ‘ಆರ್‌ಆರ್‌ಆರ್‌’ ಚಿತ್ರತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.

ಟ್ವೀಟ್ ಮಾಡಿದ ನರೇಂದ್ರ ಮೋದಿ
‘’ಇದು ಬಹಳ ವಿಶೇಷವಾದ ಸಾಧನೆ. ಎಂ.ಎಂ.ಕೀರವಾಣಿ, ಪ್ರೇಮ್ ರಕ್ಷಿತ್, ಕಾಲಭೈರವ, ಚಂದ್ರಬೋಸ್, ರಾಹುಲ್ ಸಿಪ್ಲಿಗುಂಜ್ ಅವರುಗಳಿಗೆ ಅಭಿನಂದನೆಗಳು. ನಿರ್ದೇಶಕ ರಾಜಮೌಳಿ, ಜೂನಿಯರ್ ಎನ್‌.ಟಿ.ಆರ್, ರಾಮ್ ಚರಣ್ ಹಾಗೂ ಇಡೀ ‘ಆರ್‌ಆರ್‌ಆರ್‌’ ತಂಡಕ್ಕೂ ನಾನು ಅಭಿನಂದನೆ ತಿಳಿಸುತ್ತಿದ್ದೇನೆ. ಈ ಪ್ರತಿಷ್ಟಿತ ಗೌರವ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತಂದಿದೆ’’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುತೂಹಲ ಮೂಡಿಸಿದ ಮಧು ಬಂಗಾರಪ್ಪ ಹೇಳಿಕೆ!

Wed Jan 11 , 2023
ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನಾಲಾಯಕ್ ವ್ಯಕ್ತಿ. ಅಭಿವೃದ್ಧಿ ವಿಚಾರ ಬಿಟ್ಟು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ಹೇಳುತ್ತಾರೆ ಎಂದು ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದ್ದಾರೆ.ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕೇವಲ ಹಿಂದುತ್ವದಿಂದ ಜನರ ಹೊಟ್ಟೆ ತುಂಬುವುದಿಲ್ಲ. ಕಾಂಗ್ರೆಸ್ ಪಕ್ಷ ಯಾವತ್ತೂ ಭಾವನಾತ್ಮಕವಾಗಿ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.ನಟ ಶಿವರಾಜ್ ಕುಮಾರ್ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಒಲವಿಲ್ಲ. ಆದರೆ, ಗೀತಕ್ಕ ಚುನಾವಣೆಯಲ್ಲಿ ನನ್ನ ಜೊತೆ […]

Advertisement

Wordpress Social Share Plugin powered by Ultimatelysocial