ಭಾರತ-ಶ್ರೀಲಂಕಾ ಪಂದ್ಯಕ್ಕೆ ರಜೆ ಘೋಷಣೆ

ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ನಾಳೆ ಗುವಾಹಟಿಯಲ್ಲಿ ಆರಂಭವಾಗಲಿದೆ.ಲಂಕಾ ವಿರುದ್ಧದ ಎಲ್ಲಾ ಮೂರು ODI ಪಂದ್ಯಗಳು ಮಧ್ಯಾಹ್ನ 1:30 ISTಗೆ ಪ್ರಾರಂಭವಾಗುತ್ತವೆ.ಇನ್ನು, ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಇದೀಗ ಏಕದಿನ ಸರಣಿಯಿಂದ ಕಂಬ್ಯಾಕ್​ ಮಾಡುತ್ತಿದ್ದಾರೆ.ಇದರ ನಡುವೆ, ಅಸ್ಸಾಂ ಕ್ರಿಕೆಟ್ ಸಂಸ್ಥೆ ಮತ್ತು ಅಸ್ಸಾಂ ಸರ್ಕಾರ ಈ ಪಂದ್ಯಕ್ಕೆ ಭರ್ಜರಿ ಸಿದ್ಧತೆ ನಡೆಸಿದ್ದು, ಪಂದ್ಯದ ರೋಚಕತೆಯನ್ನು ಹೆಚ್ಚಿಸಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.ಹೌದು, ಗುವಾಹಟಿಯಲ್ಲಿ ನಡೆಯುತ್ತಿರುವ 2ನೇ ಅಂತರಾಷ್ಟ್ರೀಯ ಪಂದ್ಯ ಇದಾಗಿರುವುದರಿಂದ ಅಸ್ಸಾಂ ಸರ್ಕಾರವು ಪಂದ್ಯದ ರೋಚಕತೆ ಹೆಚ್ಚಿಸಲು ಪಂದ್ಯದ ದಿನವಾದ ಅಂದರೆ ಜನವರಿ 10ರಂದು ಕಾಮ್ರೂಪ್ ಜಿಲ್ಲೆಯ ಸರ್ಕಾರಿ ಕಚೇರಿ ಹಾಗೂ ಶಾಲಾ ಕಾಲೇಜುಗಳಿಗೆ ಮತ್ತು ಎಲ್ಲಾ ಖಾಸಗಿ ಸಂಸ್ಥೆಗಳಿಗೂ ಅರ್ಧ ದಿನ ರಜೆಯನ್ನು ಘೋಷಣೆ ಮಾಡಿದೆ.ಈ ವಿಷಯವನ್ನು ಸ್ವತಃ ಸರ್ಕಾರವೇ ಖಚಿತಪಡಿಸಿದೆ. ಅಲ್ಲದೇ ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾ ಶರ್ಮಾ ಕ್ರೀಡಾಂಗಣದ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ. ಜೊತೆಗೆ ಪಂದ್ಯದ ತಯಾರಿಗಳ ಕುರಿತಂತೆ ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಈ ಅರ್ಧ ದಿನದ ರಜೆ ಕೇವಲ ಬರ್ಸಾಪರಾ ಸ್ಟೇಡಿಯಂ ಇರುವ ಕಾಮ್ರೂಪ್ ಜಿಲ್ಲೆಗೆ ಮಾತ್ರ ಅನ್ವಯವಾಗುತ್ತದೆ. ಪಂದ್ಯದ ದಿನ ಮಧ್ಯಾಹ್ನ 1 ಗಂಟೆ ನಂತರ ಈ ರಜೆ ಆರಂಭವಾಗಲಿದೆ.ಭಾರತ ಮತ್ತು ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯವು ನಾಳೆ ಜನವರಿ 10 ರಂದು ಗುವಾಹಟಿಯಲ್ಲಿ (Guwahati) ಸರಣಿ ಆರಂಭವಾಗಲಿದೆ. ಮುಂದಿನ ಎರಡು ಪಂದ್ಯಗಳು ಕೋಲ್ಕತ್ತಾ ಮತ್ತು ತಿರುವನಂತಪುರಂನಲ್ಲಿ ಜನವರಿ 12 ಮತ್ತು 15 ರಂದು ನಡೆಯಲಿದೆ.ಭಾರತ ಏಕದಿನ ತಂಡ: ರೋಹಿತ್ ಶರ್ಮಾ (ಸಿ), ಹಾರ್ದಿಕ್ ಪಾಂಡ್ಯ (ವಿಸಿ), ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಡಬ್ಲ್ಯುಕೆ), ಇಶಾನ್ ಕಿಶನ್ (ಡಬ್ಲ್ಯುಕೆ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ.ಶ್ರೀಲಂಕಾದ ಏಕದಿನ ತಂಡ: ಪಾತುಮ್ ನಿಸ್ಸಾಂಕ, ಅವಿಷ್ಕಾ ಫೆರ್ನಾಂಡೋ, ಅಶೆನ್ ಬಂಡಾರ, ನುವಾನಿಡು ಫೆರ್ನಾಂಡೋ,ದಾಸುನ್ ಶನಕ(ಸಿ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಚಾಮಿಕ ಕರುಣಾರತ್ನ, ವನಿಂದು ಹಸರಂಗ, ಕುಸಲ್ ಮೆಂಡಿಸ್ (ವಾಕ್), ಸದೀರ ಸಮರವಿಕ್ರಮ, ಮಹೇಶ್ ತೀಕ್ಷಣ, ಕಸುನ್ ರಜಿತ, ದಿಲ್ಶನ್ ಮಧುಶಂಕ, ದುನಿತ್ ವೆಲ್ಲಲಾಗೆ, ಲಹಿರು ಕುಮಾರ, ಜೆಫ್ರಿ ವಾಂಡರ್ಸ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾತ್ರೋ ರಾತ್ರಿ ಪ್ರವೇಶ ನಿರ್ಬಂಧಿಸಿದ ಸರ್ಕಾರ!

Tue Jan 10 , 2023
ರಾಜಕಾರಣಿಗಳು ಮತ್ತು ಫಿಕ್ಸರ್ ಗಳು ಮಾಡಿದ ಅನೈತಿಕ ಕೆಲಸದಿಂದಾಗಿ ಸರ್ಕಾರಿ ಸ್ವಾಮ್ಯದಲ್ಲಿರುವ ಕುಮಾರಕೃಪಾ ಮತ್ತು ಬಾಲಬ್ರೂಯಿ ಅತಿಥಿಗೃಹಗಳು ರಾತ್ರೋರಾತ್ರಿ ಕೋಟೆಗಳಾಗಿ ಮಾರ್ಪಟ್ಟಿವೆ. ಬೆಂಗಳೂರು: ರಾಜಕಾರಣಿಗಳು ಮತ್ತು ಫಿಕ್ಸರ್ ಗಳು ಮಾಡಿದ ಅನೈತಿಕ ಕೆಲಸದಿಂದಾಗಿ ಸರ್ಕಾರಿ ಸ್ವಾಮ್ಯದಲ್ಲಿರುವ ಕುಮಾರಕೃಪಾ ಮತ್ತು ಬಾಲಬ್ರೂಯಿ ಅತಿಥಿಗೃಹಗಳು ರಾತ್ರೋರಾತ್ರಿ ಕೋಟೆಗಳಾಗಿ ಮಾರ್ಪಟ್ಟಿವೆ. ಸ್ಯಾಂಟ್ರೋ ರವಿ ವಿಷಯ ವೈರಲ್ ಆದ ನಂತರ ಸರ್ಕಾರ ಈ ಎರಡು ಗೆಸ್ಟ್ ಹೌಸ್ ಗಳಿಗೆ ಪ್ರವೇಶ ನಿರ್ಬಂಧಿಸಿದೆ. ಮಾಜಿ ಸಿಎಂ ಎಚ್. […]

Advertisement

Wordpress Social Share Plugin powered by Ultimatelysocial