PAK:ನಿಶ್ಯಸ್ತ್ರೀಕರಣಕ್ಕೆ ಭಾರತ ಬದ್ಧ ಎಂಬ ಹೇಳಿಕೆಗೆ ಪಾಕ್​ ವಾಗ್ದಾಳಿ;

ಭಾರತದಂತೆ, ಪಾಕಿಸ್ತಾನ ಈವರೆಗೆ ಮಿಲಿಟರಿ ಪರಮಾಣು ಒಪ್ಪಂದಗಳಲ್ಲಿ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದಿರುವ ಪಾಕ್ ರಾಯಭಾರಿ, ಕಾಶ್ಮೀರ ಜನರ ವಿಚಾರದಲ್ಲಿ ಅಲ್ಲಿನ ಸರ್ಕಾರ ಕೆಲ ಸ್ವಯಂ ನಿರ್ಬಂಧ ವಿಧಿಸಿದೆ ಎಂದರು. ಕಳೆದ 75 ವರ್ಷಗಳಿಂದ ಕಾಶ್ಮೀರಿ ಜನರ ಸ್ವಯಂ ನಿರ್ಣಯಗಳ ಮೇಲೆ ಭಾರತ ಹಿಡಿತ ಸಾಧಿಸಿದೆ.

ಅನೇಕ ಕಾನೂನು ಮುರಿದಿದೆ ಎಂದು ಆರೋಪ ಮಾಡಿದ್ದಾರೆ..

ಪರಮಾಣು ಶಸ್ತ್ರಾಸ್ತ್ರಗಳನ್ನು ನಿಷೇಧಿಸುವ ಮೊದಲ ಒಪ್ಪಂದವು ಜಾರಿಗೆ ಬಂದಂತೆ ಭಾರತವು ಈ ಒಪ್ಪಂದವನ್ನು ಬೆಂಬಲಿಸುತ್ತದೆ ಮತ್ತು ಅದರ ಎಲ್ಲ ಕಟ್ಟುಪಾಡುಗಳಿಗೆ ನಾವು ಬದ್ಧವಾಗಿದ್ದೇವೆ ಎಂದು ಹೇಳಿಕೆ ನೀಡಿರುವ ಭಾರತದ ವಿರುದ್ಧ ಪಾಕ್​ ವಾಗ್ದಾಳಿ ನಡೆಸಿದೆ.

ಜಿನೀವಾದಲ್ಲಿ ನಡೆಯುತ್ತಿರುವ ನಿಶ್ಯಸ್ತ್ರೀಕರಣ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿರುವ ಪಾಕಿಸ್ತಾನದ ರಾಯಭಾರಿ ಮೊಹಮ್ಮದ್ ಒಮರ್, ಭಾರತದ ಈ ಹೇಳಿಕೆ ಸಂಶಯಾಸ್ಪದವಾಗಿದೆ. ದಕ್ಷಿಣ ಏಷ್ಯಾದಲ್ಲಿ ಪರಮಾಣು ಪ್ರವರ್ತಕ ಆಗಿ ಭಾರತ ಬೆಳೆಯುತ್ತಿದೆ ಎಂದಿದೆ.

1974ರಲ್ಲಿ ಮೊದಲ ಸಲ ಪರಮಾಣು ಪರೀಕ್ಷೆ ನಡೆಸುವ ಮೂಲಕ ಭಾರತ ಈ ಒಪ್ಪಂದದ ಮಾನದಂಡ ಮುರಿದಿದೆ. ಇದರ ಬೆನ್ನಲ್ಲೇ 1998ರಲ್ಲಿ ಮತ್ತೊಮ್ಮೆ ಪರಮಾಣು ಪರೀಕ್ಷೆ ನಡೆಸಿದೆ ಎಂದು ಆರೋಪಿಸಿದೆ. ಪರಮಾಣು ವಸ್ತುಗಳನ್ನ ಬೇರೆಡೆ ರವಾನಿಸುವ ಮೂಲಕ ಭಾರತ ಈ ಪರೀಕ್ಷೆ ನಡೆಸಿದೆ. ಈ ಮೂಲಕ ರಕ್ಷಣಾತ್ಮಕ ಬದ್ಧತೆ ಉಲ್ಲಂಘನೆ ಮಾಡಿದೆ ಎಂದು ವಾಗ್ದಾಳಿ ನಡೆಸಿದೆ.

ಕಳೆದ ಕೆಲ ದಿನಗಳ ಹಿಂದೆ ಈ ವಿಷಯವಾಗಿ ಮಾತನಾಡಿದ್ದ ಭಾರತೀಯ ರಾಯಭಾರಿ ಪಂಕಜ್​ ಶರ್ಮಾ, ಶಸ್ತ್ರಾಸ್ತ್ರಗಳ ಪ್ರಸರಣ ಮತ್ತು ಅವುಗಳ ವಿತರಣಾ ವ್ಯವಸ್ಥೆ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅಪಾಯವನ್ನುಂಟು ಮಾಡುತ್ತದೆ.

ಈ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ತಿಳಿಸಿದ್ದರು. ಜೊತೆಗೆ ಪರಮಾಣು ಶಸ್ತ್ರಾಸ್ತ್ರ ರಹಿತ ಪ್ರಪಂಚದ ಉದ್ದೇಶಕ್ಕಾಗಿ ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಭಾರತ ಸಿದ್ಧವಾಗಿದೆ ಎಂದು ಹೇಳಿತ್ತು.

ಇದರ ಜೊತೆಗೆ ನಿಶ್ಯಸ್ತ್ರೀಕರಣ ಒಪ್ಪಂದದಲ್ಲಿ ನವದೆಹಲಿ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದ್ದರು. ಮುಂದುವರೆದ ಅವರು, ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಭಯೋತ್ಪಾದನೆಯನ್ನ ಉದ್ದೇಶಪೂರ್ವಕವಾಗಿ ಹೆಚ್ಚಿಸಲು ಪಾಕ್​​ ಇಲ್ಲಿ ಕೆಲಸ ಮಾಡ್ತಿದೆ ಎಂದಿದ್ದರು. ದಕ್ಷಿಣ ಏಷ್ಯಾದಲ್ಲಿ ಪರಮಾಣು ಪರೀಕ್ಷೆಗಳ ಮೇಲಿನ ನಿಷೇಧವನ್ನ ಈ ಹಿಂದಿನಿಂದಲೂ ಭಾರತ ವಿರೋಧಿಸುತ್ತ ಬಂದಿದೆ. ನಿಶ್ಯಸ್ತ್ರೀಕರಣಕ್ಕೆ ಅದು ಬೆಂಬಲ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.

ಭಾರತದಂತೆ, ಪಾಕಿಸ್ತಾನ ಈವರೆಗೆ ಮಿಲಿಟರಿ ಪರಮಾಣು ಒಪ್ಪಂದಗಳಲ್ಲಿ ಯಾವುದೇ ಉಲ್ಲಂಘನೆ ಮಾಡಿಲ್ಲ ಎಂದಿರುವ ಪಾಕ್ ರಾಯಭಾರಿ, ಕಾಶ್ಮೀರ ಜನರ ವಿಚಾರದಲ್ಲಿ ಅಲ್ಲಿನ ಸರ್ಕಾರ ಕೆಲ ಸ್ವಯಂ ನಿರ್ಬಂಧ ವಿಧಿಸಿದೆ ಎಂದರು. ಕಳೆದ 75 ವರ್ಷಗಳಿಂದ ಕಾಶ್ಮೀರಿ ಜನರ ಸ್ವಯಂ ನಿರ್ಣಯಗಳ ಮೇಲೆ ಭಾರತ ಹಿಡಿತ ಸಾಧಿಸಿದೆ. ಅನೇಕ ಕಾನೂನು ಮುರಿದಿದೆ ಎಂದು ಆರೋಪ ಮಾಡಿದ್ದಾರೆ.

ತೆಹ್ರೀಕ್​-ಎ-ತಾಲಿಬಾನ್, ಜಮಾತ್​-ಉಲ್​-ಅಹ್ರಾರ್​ ಸೇರಿದಂತೆ ವಿಶ್ವಸಂಸ್ಥೆ ಗುರುತು ಮಾಡಿರುವ ಅನೇಕ ಭಯೋತ್ಪಾದಕ ಸಂಘಟನೆಗಳಿಗೆ ಭಾರತ ಪ್ರೋತ್ಸಾಹ ನೀಡುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕ್ಷೀರಪಥದಲ್ಲಿ ಕಂಡುಬರುವ ವಸ್ತು 'ಖಗೋಳಶಾಸ್ತ್ರಜ್ಞರು ನೋಡಿದ ಯಾವುದಕ್ಕೂ ಭಿನ್ನವಾಗಿ'

Sat Jan 29 , 2022
ಆಸ್ಟ್ರೇಲಿಯಾದ ಸಂಶೋಧಕರು ಕ್ಷೀರಪಥದಲ್ಲಿ ಒಂದು ವಿಚಿತ್ರವಾದ ನೂಲುವ ವಸ್ತುವನ್ನು ಕಂಡುಹಿಡಿದಿದ್ದಾರೆ ಎಂದು ಅವರು ಹೇಳುತ್ತಾರೆ ಖಗೋಳಶಾಸ್ತ್ರಜ್ಞರು ಇದುವರೆಗೆ ನೋಡಿದ ಯಾವುದಕ್ಕೂ ಭಿನ್ನವಾಗಿದೆ. ತನ್ನ ಪದವಿಪೂರ್ವ ಪ್ರಬಂಧದಲ್ಲಿ ಕೆಲಸ ಮಾಡುತ್ತಿರುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯು ಮೊದಲು ಗುರುತಿಸಿದ ವಸ್ತುವು ಪ್ರತಿ ಗಂಟೆಗೆ ಮೂರು ಬಾರಿ ರೇಡಿಯೊ ಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡುತ್ತದೆ. ಮರ್ಚಿಸನ್ ವೈಡ್‌ಫೀಲ್ಡ್ ಅರೇ ಎಂದು ಕರೆಯಲ್ಪಡುವ ಪಶ್ಚಿಮ ಆಸ್ಟ್ರೇಲಿಯಾದ ಹೊರವಲಯದಲ್ಲಿರುವ ದೂರದರ್ಶಕವನ್ನು ಬಳಸಿಕೊಂಡು ವಿದ್ಯಾರ್ಥಿಯ ಆವಿಷ್ಕಾರದ ನಂತರ ತನಿಖೆಯ […]

Advertisement

Wordpress Social Share Plugin powered by Ultimatelysocial