ಇಂದು ʼʼವಿಶ್ವ ಮಹಿಳಾ ದಿನಾಚರಣೆʼʼ: ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ

ಪ್ರತಿ ವರ್ಷ ಮಾರ್ಚ್​ 8ರಂದು ವಿಶ್ವಾದ್ಯಂತ ಮಹಿಳಾ ದಿನವನ್ನ ಆಚರಣೆ ಮಾಡಲಾಗುತ್ತೆ. ಈ ದಿನದಂದು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಮಾಡಿದ ಸಾಧನೆಗಳನ್ನ ಸ್ಮರಿಸಲಾಗುತ್ತೆ. ಮಹಿಳೆಯ ಅಭಿವೃದ್ಧಿ ಹಾಗೂ ಸಮಾನತೆಗಾಗಿ ವಿಶ್ವದಾದ್ಯಂತ ಈ ದಿನವನ್ನ ಆಚರಣೆ ಮಾಡಲಾಗುತ್ತೆ.ಪ್ರತಿ ವರ್ಷ ಮಹಿಳಾ ದಿನವನ್ನ ಒಂದೊಂದು ವಿಶೇಷ ಅರ್ಥವನ್ನ ಇಟ್ಟುಕೊಂಡು ಆಚರಣೆ ಮಾಡಲಾಗುತ್ತೆ. ಈ ವರ್ಷ ‘ಸವಾಲುಗಳಿಗೆ ನಾವು ಸಿದ್ಧ’ ಎಂಬ ಥೀಮ್​ನ ಅಡಿಯಲ್ಲಿ ಮಹಿಳಾ ದಿನವನ್ನ ಆಚರಿಸಲಾಗ್ತಾ ಇದೆ. ಕೊರೊನಾದಿಂದಾಗಿ ಎದುರಾದ ಸವಾಲುಗಳನ್ನ ಎದುರಿಸುವ ವಿಚಾರವಾಗಿ ಈ ಘೋಷ ವಾಕ್ಯವನ್ನ ಆಯ್ಕೆ ಮಾಡಲಾಗಿದೆ.ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ಶತಮಾನಗಳ ಇತಿಹಾಸವೇ ಇದೆ. 1857ರ ಮಾರ್ಚ್​ 8ರಂದು ನ್ಯೂಯಾರ್ಕ್​ನಲ್ಲಿ ನಡೆದಿದ್ದ ಗಾರ್ಮೆಂಟ್​​ನ ಮಹಿಳಾ ಕಾರ್ಮಿಕರು ನಡೆಸಿದ್ದ ಪ್ರತಿಭಟನೆ ಸ್ಮರಣಾರ್ಥ 1909 ಫೆಬ್ರವರಿ 28ರಂದು ನ್ಯೂಯಾರ್ಕ್ ಮೊಟ್ಟ ಮೊದಲ ಮಹಿಳಾ ದಿನವನ್ನ ಆಚರಣೆ ಮಾಡಿದೆ. ಇದಾದ ಬಳಿಕ 1910ರಲ್ಲಿ ಡೆನ್ಮಾರ್ಕ್​ನಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ವಕೀಲೆ ಕ್ಲಾರಾ ಜಟ್ಕಿನ್​ ಎಂಬಾಕೆ ಮಾರ್ಚ್​ 8ರಂದು ಮಹಿಳಾ ದಿನ ಆಚರಿಸುವಂತೆ ಬೇಡಿಕೆ ಇಟ್ಟರು. ಇದಕ್ಕೆ ವಿಶ್ವದ ಎಲ್ಲಾ ರಾಷ್ಟ್ರಗಳ ಒಪ್ಪಿಗೆ ಕೂಡ ದಕ್ಕಿತು.ಅಂದಿನಿಂದ ಮಹಿಳೆಯ ಅಭಿವೃದ್ಧಿ, ಶೋಷಣೆಯ ವಿರುದ್ಧ ಹೋರಾಟ, ಲಿಂಗ ಸಮಾನತೆಯ ಉದ್ದೇಶದಿಂದ ಮಹಿಳಾ ದಿನವನ್ನ ಆಚರಣೆ ಮಾಡಲಾಗ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಂಡಸರಿಗೆ ಅರ್ಥವಾಗದ್ದು

Tue Mar 8 , 2022
ಗಂಡಸರಿಗೆ ಅರ್ಥವಾಗದ್ದು ಇತ್ತೀಚಿಗೆ ಒಂದು ಮದುವೆ ಮನೆಯಲ್ಲಿ ಒಂದಷ್ಟು ಜನ ಸೇರಿದ್ದೆವು. ಈ ಸಂದರ್ಭಗಳಲ್ಲಿ ಇರುವ ಹಾಗೆ ದಿಕ್ಕು ದೆಸೆ ಇಲ್ಲದ ಹರಟೆ ತಲೆಎತ್ತಿತು. ಆ ಗುಂಪಿನಲ್ಲಿ ಗಂಡಸರೇ ಇದ್ದರು. ಹೆಂಗಸರೆಲ್ಲ ಝಗಮಗಿಸುವ ಸೀರೆಗಳನ್ನಿಟ್ಟುಕೊಂಡು ಜೋರಾಗಿ ಮಾತನಾಡುತ್ತ ಮದುವೆಗೆ ಸಂಭ್ರಮ ತರುತ್ತಿದ್ದರು. ಯಾರೋ ಇನ್ನೊಬ್ಬರಿಗೆ ಕೇಳಿದರು ‘ನಿಮ್ಮ ಹೆಂಡತಿ ಏನು ಮಾಡುತ್ತಾರೆ’. ಅವರು ತುಸು ಹೆಮ್ಮೆಯಿಂದಲೇ, ‘ಆಕೆ ಕೆ.ಎ.ಎಸ್ ಆಗಿದ್ದಾಳಲ್ಲ. ಈಗ ಅಸಿಸ್ಟಂಟ್ ಕಮಿಷನರ್ ಆಗಿದ್ದಾಳೆ. ಇನ್ನೇನು ಐ.ಎ.ಎಸ್. ಬಂದುಬಿಡುತ್ತದೆ` […]

Advertisement

Wordpress Social Share Plugin powered by Ultimatelysocial