ಇನ್ಫೋಸಿಸ್ ನಲ್ಲಿ ೬೦೦ ಉದ್ಯೋಗಿಗಳ ವಜಾ.

ಐಟಿ ಸಂಸ್ಥೆಗಳು ಉದ್ಯೋಗಿಗಳನ್ನು ವಜಾಗೊಳಿಸುವ ಸರಣಿ ಮುಂದುವರೆದಿದ್ದು, ಇದೀಗ ದೇಶ ಪ್ರಸಿದ್ಧ ಇನ್ಫೋಸಿಸ್ ಸಂಸ್ಥೆ ಕೂಡ ಸುಮಾರು ೬೦೦ ಹೊಸ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ.ಕಳೆದ ಕೆಲವು ತಿಂಗಳುಗಳಲ್ಲಿ ಎಫ್ ಎ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಸುಮಾರು ೬೦೦ ಫ್ರೆಶರ್‌ಗಳನ್ನು ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಹೊಸ ಉದ್ಯೋಗಿಗಳನ್ನು ಆಂತರಿಕ ಫ್ರೆಶರ್ ಮೌಲ್ಯಮಾಪನ (ಎಫ್‌ಎ) ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದ ಕಾರಣ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಲಾಗಿದೆ.ಆಗಸ್ಟ್ ೨೦೨೨ ರಲ್ಲಿ ಕಂಪನಿಗೆ ಕೆಲಸಕ್ಕೆ ಸೇರಿದ ಉದ್ಯೋಗಿ ಈ ಬಗ್ಗೆ ಮಾತನಾಡಿದ್ದು, “ನಾನು ಕಳೆದ ವರ್ಷ ಆಗಸ್ಟ್‌ನಲ್ಲಿ ಇನ್ಫೋಸಿಸ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ ಮತ್ತು ನನಗೆ ಎಸ್ ಎಪಿ ಎಬಿಎಪಿ ಸ್ಟ್ರೀಮ್‌ಗಾಗಿ ತರಬೇತಿ ನೀಡಲಾಯಿತು. ನನ್ನ ತಂಡದಲ್ಲಿದ್ದ ೧೫೦ ಮಂದಿಯಲ್ಲಿ ೬೦ ಮಂದಿ ಮಾತ್ರ ಎಫ್‌ಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಉಳಿದಂತೆ ನಮ್ಮೆಲ್ಲರನ್ನೂ ಎರಡು ವಾರಗಳ ಹಿಂದೆ ವಜಾಗೊಗೊಳಿಸಿದ್ದಾರೆ. ಹಿಂದಿನ ಬ್ಯಾಚ್‌ನಿಂದ ಪರೀಕ್ಷೆಯಲ್ಲಿ ವಿಫಲರಾದ ನಂತರ ೧೫೦ ರಲ್ಲಿ ಸುಮಾರು ೮೫ ಫ್ರೆಶರ್‌ಗಳನ್ನು ವಜಾಗೊಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ. ಆಂತರಿಕ ಪರೀಕ್ಷೆಯಲ್ಲಿ ವಿಫಲರಾದ ನಂತರ ೬೦೦ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ. “ಎರಡು ವಾರಗಳ ಹಿಂದೆ, ಎಫ್‌ಎ ಪರೀಕ್ಷೆಯಲ್ಲಿ ವಿಫಲರಾದ ನಂತರ ೨೦೮ ಫ್ರೆಶರ್‌ಗಳನ್ನು ವಜಾಗೊಳಿಸಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

7 ಸಾವಿರ ಕೋಟಿ ವೆಚ್ಚ ನಿರಾಧಾರ.

Mon Feb 6 , 2023
    ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ೭ ಸಾವಿರ ಕೋಟಿ ವೆಚ್ಚ ಮಾಡಿರುವ ವರದಿಗಳು ಸತ್ಯಕ್ಕೆ ದೂರವಾಗಿದ್ದು, ಇದೊಂದು ಹಾಸ್ಯಸ್ಪದ ಮಾತುಗಳೆಂದು ಭಾವಿಸಿದ್ದೇನೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ. ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡಿ ಮುಚ್ಚಲು ೭,೧೨೧ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಕೆಲ ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇಂತಹ ಅಂಕಿ-ಅಂಶ ಸತ್ಯಕ್ಕೆ ದೂರವಾಗಿವೆ. […]

Advertisement

Wordpress Social Share Plugin powered by Ultimatelysocial