ದೇಶದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆ!

ದೇಶದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾದ ಇನ್ಫೋಸಿಸ್‌ನಿಂದ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ತ್ರೈಮಾಸಿಕದ ಅಂಕಿ-ಅಂಶಗಳನ್ನು ಗಮನಿಸಿದ್ರೆ ನೌಕರಿ ಬಿಟ್ಟು ಹೋದವರ ಸಂಖ್ಯೆಯಲ್ಲಿ ಭಾರೀ ಏರಿಕೆ ಆಗಿದೆ.

2022ರ ಜನವರಿಯಿಂದ ಮಾರ್ಚ್‌ವರೆಗೆ ಶೇ.27.7 ರಷ್ಟು ಉದ್ಯೋಗಿಗಳು ಕೆಲಸ ತೊರೆದಿದ್ದಾರೆ. ಅಂದರೆ 3 ತಿಂಗಳ ಅವಧಿಯಲ್ಲಿ 80 ಸಾವಿರ ನೌಕರರು ಇನ್ಫೋಸಿಸ್‌ಗೆ ಗುಡ್‌ ಬೈ ಹೇಳಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಇನ್ಫೋಸಿಸ್‌, ಜಾಗತಿಕವಾಗಿ ಒಟ್ಟು 85,000 ಫ್ರೆಶರ್‌ಗಳನ್ನು ನೇಮಕ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 50,000 ಮಂದಿ ಹೊಸಬರಿಗೆ ಉದ್ಯೋಗ ನೀಡಲು ನಿರ್ಧರಿಸಿದೆ.

ಆದ್ರೆ ಇಷ್ಟೊಂದು ಸಂಖ್ಯೆಯಲ್ಲಿ ಉದ್ಯೋಗಿಗಳು ಕೆಲಸ ಬಿಟ್ಟು ಹೋಗ್ತಿರೋದು ಕಂಪನಿಗೆ ಹೊಡೆತ ಕೊಟ್ಟಿದೆ. ಉದ್ಯಮದಲ್ಲಿ ಪ್ರತಿಭಾವಂತರಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಬದಲಾಗುತ್ತಿರುವ ಬೇಡಿಕೆಯ ವಾತಾವರಣವೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಕಳೆದ 12 ತಿಂಗಳುಗಳಲ್ಲಿ ಉದ್ಯೋಗ ತೊರೆದವರಲ್ಲಿ ಅತ್ಯಧಿಕ ಶೇಕಡಾವಾರು ಪ್ರಮಾಣ ಇದಾಗಿದೆ. ಸತತ ಮೂರನೇ ತ್ರೈಮಾಸಿಕದಲ್ಲಿ ಉದ್ಯೋಗ ನಷ್ಟದ ಸಂಖ್ಯೆ ಶೇ.20ನ್ನು ಮೀರಿದೆ.

ಆದರೂ ಇನ್ಫೋಸಿಸ್‌ನ ಲಾಭಾಂಶದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕದಲ್ಲಿ ಇನ್ಫೋಸಿಸ್‌ನ ಏಕೀಕೃತ ನಿವ್ವಳ ಲಾಭವು ಶೇ.12 ರಷ್ಟು ಏರಿಕೆಯಾಗಿ 5,686 ಕೋಟಿ ರೂಪಾಯಿಗಳಿಗೆ ತಲುಪಿದೆ. ಇನ್ಫೋಸಿಸ್‌ ತನ್ನ ವ್ಯವಹಾರವನ್ನು ಸಮನ್ವಯಗೊಳಿಸುವ ಮೂಲಕ ರಷ್ಯಾದಿಂದ ಹೊರಬರುವುದಾಗಿ ಹೇಳಿಕೊಂಡಿದೆ.

ಇದರೊಂದಿಗೆ ಉಕ್ರೇನ್ ಮೇಲಿನ ದಾಳಿಯ ನಂತರ ರಷ್ಯಾದಿಂದ ನಿರ್ಗಮಿಸುತ್ತಿರುವ ಕಂಪನಿಗಳ ಪಟ್ಟಿಗೆ ಇನ್ಫೋಸಿಸ್ ಕೂಡ ಸೇರಿಕೊಂಡಿದೆ. ಇನ್ಫೋಸಿಸ್ ಪ್ರಸ್ತುತ ರಷ್ಯಾದಲ್ಲಿ ತನ್ನ ಗ್ರಾಹಕರೊಂದಿಗೆ ಯಾವುದೇ ವ್ಯವಹಾರವನ್ನು ಮಾಡುತ್ತಿಲ್ಲ ಮತ್ತು ಭವಿಷ್ಯದಲ್ಲಿ ಅವರೊಂದಿಗೆ ಕೆಲಸ ಮಾಡಲು ಯೋಜಿಸುವುದಿಲ್ಲ ಎಂದು ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

500 ಮಂದಿಗೆ ಪ್ರತಿ ಲೀಟರ್​ಗೆ ಕೇವಲ 1 ರೂಪಾಯಿಯಂತೆ ಪೆಟ್ರೋಲ್​ ಮಾರಾಟ !

Fri Apr 15 , 2022
  ಪುಪುಣೆ: ಇಂಧನ ದರ ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್​ 14ರ ಡಾ. ಬಿ.ಆರ್​. ಅಂಬೇಡ್ಕರ್​ ಜಯಂತಿಯ ಅಂಗವಾಗಿ ಮಹಾರಾಷ್ಟ್ರದ ಸ್ಥಳೀಯ ಸಂಘಟನೆಯೊಂದು 500 ಮಂದಿಗೆ ಪ್ರತಿ ಲೀಟರ್​ಗೆ ಕೇವಲ 1 ರೂಪಾಯಿಯಂತೆ ಪೆಟ್ರೋಲ್​ ಮಾರಾಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ವಿನೂತನ ಪ್ರಸಂಗ ಮಹಾರಾಷ್ಟ್ರ ಸೊಲ್ಲಾಪುರ ನಗರದಲ್ಲಿ ನಡೆದಿದೆ. ಪ್ರತಿ ಖರೀದಿದಾರರನಿಗೆ ಕೇವಲ ಒಂದು ಲೀಟರ್​ ಪೆಟ್ರೋಲ್​ ಅನ್ನು 1 ರೂಪಾಯಿಗೆ […]

Related posts

Advertisement

Wordpress Social Share Plugin powered by Ultimatelysocial