ಸ್ಪೂರ್ತಿದಾಯಕ ಸನ್ನಿವೇಶಗಳ ಮನಮಿಡಿಯುವ ಕಥಾನಕ “ಮೇಡ್ ಇನ್ ಬೆಂಗಳೂರು

ಕೋಟ್ಯಾಂತರ ಜನರಿಗೆ ಆಶ್ರಯ ನೀಡಿರುವ ಬೆಂಗಳೂರಿನೊಂದಿಗೆ ಎಲ್ಲರಿಗೂ ಒಂದು ತರಹದ ಭಾವನಾತ್ಮಕ ಸಂಬಂಧವಿದೆ‌. ಇದನ್ನು ಮನಮುಟ್ಟುವಂತೆ ನಿರ್ದೇಶಕ ಪ್ರದೀಪ್ ಕೆ ಶಾಸ್ತ್ರಿ “ಮೇಡ್ ಇನ್ ಬೆಂಗಳೂರು” ಚಿತ್ರದಲ್ಲಿ ತೋರಿಸಿದ್ದಾರೆ.
ಬಾಲಕೃಷ್ಣ ಅವರು ನಿರ್ಮಿಸಿರುವ ಈ ಚಿತ್ರ ಕಳೆದ ಡಿಸೆಂಬರ್ 30ರಂದು ಬಿಡುಗಡೆಯಾಗಿದೆ. ಚಿತ್ರವನ್ನು ವೀಕ್ಷಿಸಿರುವ ಸಾಮಾನ್ಯ ಜನರು, ಗಣ್ಯರು ಹೀಗೆ ಎಲ್ಲಾ ವರ್ಗದ ಜನರು ಪ್ರಶಂಸೆ ನೀಡುತ್ತಿರುವ ಸಿನಿಮಾವಿದು. ಇನ್ನೂ ಈ ಚಿತ್ರದಲ್ಲಿ ಸ್ಟಾರ್ಟ್ ಅಪ್ ವಿಷಯ ಕೂಡ ಇರುವುದರಿಂದ ಯುವಜನತೆಯನ್ನು ಆಕರ್ಷಿಸುತ್ತಿದೆ. ಕನ್ನಡದಲ್ಲಿ “ಕಾಂತಾರ” ದಂತಹ ಕಂಟೆಂಟ್ ಓರಿಯಂಟೆಡ್ ಚಿತ್ರಗಳು ದಾಖಲೆ ನಿರ್ಮಿಸಿದೆ. “ಮೇಡ್ ಇನ್ ಬೆಂಗಳೂರು” ಉತ್ತಮ ಕಂಟೆಂಟ್ ಹೊಂದಿದ್ದು, ಜನರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ ಚಿತ್ರತಂಡ ಸಂತೋಷ ವ್ಯಕ್ತಪಡಿಸಿದೆ.
ಇನ್ನೂ ಖುಷಿಯ ವಿಚಾರವೆಂದರೆ ತೆಲುಗು ಹಾಗೂ ಮಲೆಯಾಳಂ ನಿಂದ ಈ ಚಿತ್ರದ ರಿಮೇಕ್ ರೈಟ್ಸ್ ಗೆ ಬೇಡಿಕೆ ಬಂದಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಕುಟುಂಬ ಸಮೇತ ನೋಡಬಹುದಾದ “ಮೇಡ್ ಇನ್ ಬೆಂಗಳೂರು” ಚಿತ್ರದ ಯಶಸ್ಸಿನ ಪಯಣ ಮುಂದುವರೆದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜನತಾ ಬಜಾರ ಸುಪರ್ ಮಾರುಕಟ್ಟೆ ಓಪನ್ ಯಾವಾಗ..? ಕಾಯ್ದು ಕುಳಿತ ವ್ಯಾಪಾರಸ್ಥರು.

Wed Jan 4 , 2023
ಹುಬ್ಬಳ್ಳಿ: ಅದು ವಾಣಿಜ್ಯ ನಗರಿ ಪ್ರಮುಖ ವ್ಯಾಪಾರ ಸ್ಥಳ ಜನತಾ ಬಜಾರ್ ಈ ಮಾರುಕಟ್ಟೆಯನ್ನು ನಂಬಿಕೊಂಡು ಅದೆಷ್ಟೋ ವ್ಯಾಪಾರಸ್ಥರು ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಆದ್ರೆ ಸ್ಮಾರ್ಟ್ ಸಿಟಿ ಅಡಿಯಲ್ಲಿ ಸುಪರ್ ಮಾರುಕಟ್ಟೆ ಕಟ್ಟಿದ್ದಾರೆ. ಕಾಮಗಾರಿ ಮುಗಿದ್ರೂ ಕೂಡ ಇನ್ನೂವರೆಗೂ ಮಳಿಗೆಗಳು ಹಂಚಿಕೆಯಾಗಿಲ್ಲ…. ಹೌದು,,,, ಜನರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಸಿಟಿ ಅಡಿಯಲ್ಲಿ, ಹುಬ್ಬಳ್ಳಿ ಜನತಾ ಬಜರಾದಲ್ಲಿ 18.35 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿದ್ದಾರೆ. […]

Advertisement

Wordpress Social Share Plugin powered by Ultimatelysocial