Iphone 13 ಬೆಲೆಯಲ್ಲಿ ಬರೋಬ್ಬರಿ 11 ಸಾವಿರ ರೂಪಾಯಿ ಕಡಿತ;

ಐಫೋನ್ ಹೊಂದಿರುವುದೇ ಬಹು ಜನರಿಗೆ ಪ್ರತಿಷ್ಠೆಯ ವಿಷಯ ಎಂಬಂತಾಗಿದೆ. ಬ್ರ್ಯಾಂಡ್‌ಗೆ ತಕ್ಕ ಹಾಗೆ ಐಫೋನ್ ಬೆಲೆಯೂ (Price) ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಆದರೆ, ಈಗ ಐಫೋನ್ 13 ಬೆಲೆಯಲ್ಲಿ ಅತಿ ಹೆಚ್ಚಿನ ಮೊತ್ತದ ಕಡಿತವಾಗಿದೆ. ನೀವೇನಾದರೂ ಐಫೋನ್ ಕೊಳ್ಳಬೇಕು ಎಂದು ಮಾರುಕಟ್ಟೆಗೆ ಹೋಗಿದ್ದರೆ ನೀವೇ ಅದೃಷ್ಟವಂತರು. ಇತರೆ ಮಾರಾಟಗಾರರು ನಿಮ್ಮ ಇತರೆ ಸ್ಮಾರ್ಟ್‌ಫೋನ್ ವಿನಿಮಯದೊಂದಿಗೆ ಐಫೋನ್ 13ರ ಮೇಲೆ ವಿನಾಯಿತಿ ನೀಡಬಹುದು. ಆದರೆ ಅಮೆಜಾನ್ ಸ್ಟೋರ್ ನೇರವಾಗಿ ಐಫೋನ್ 13 ಖರೀದಿಯ ಮೇಲೆ ರೂ 11,000 ಕಡಿತವನ್ನು ಘೋಷಿಸಿದೆ. ಅಂದರೆ, ನೀವೀಗ ಹೆಚ್ಚು ಕಡಿಮೆ ಐಫೋನ್ 13 ಮಿನಿಯ ಬೆಲೆಯಲ್ಲೇ ಐಫೋನ್ 13 ಫೋನ್ ಖರೀದಿಸಬಹುದಾಗಿದೆ.

ಇದರಲ್ಲಿ ವಿಶೇಷವೆಂದರೆ, ಈ ಖರೀದಿಗಾಗಿ ನೀವು ನಿಮ್ಮ ಯಾವುದೇ ಫೋನ್ ವಿನಿಮಯ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ಏಕೆಂದರೆ ಅಮೆಜಾನ್ ಸ್ಟೋರ್ ಸ್ವತಃ ಕಡಿತವನ್ನು ಐಫೋನ್ 13 ಮೇಲೆ ಒದಗಿಸುತ್ತಿದೆ. ಇದಲ್ಲದೆ ಗ್ರಾಹಕರು ಕೆಲವು ನಿರ್ದಿಷ್ಟ ಬ್ಯಾಂಕುಗಳ ಕಾರ್ಡುಗಳನ್ನು ಬಳಸಿಯೂ ಹೆಚ್ಚುವರಿಯಾಗಿ 6 ಸಾವಿರ ರೂಪಾಯಿಗಳಷ್ಟು ಕಡಿತದ ಸೌಲಭ್ಯವನ್ನೂ ಪಡೆಯಬಹುದಾಗಿದೆ. ಅಂದರೆ ಈಗ ನಿಮ್ಮ ಕೈಗೆಟುಕುವ ಬೆಲೆಯಲ್ಲಿ ಐಫೋನ್ ಲಭ್ಯವಾದಂತಾಗುತ್ತದೆ.

128 ಜಿಬಿ ಸಂಗ್ರಹ ಸಾಮರ್ಥ್ಯವುಳ್ಳ ಐಫೋನ್ 13 ಬೇಸಿಕ್ ವೇರಿಯಂಟ್‌ನ ಬೆಲೆ ಸದ್ಯ ಮಾರುಕಟ್ಟೆಯಲ್ಲಿ 79,900 ರೂ. ಆಗಿದೆ. ಈ ಬೆಲೆಯ ಮೇಲೆ ಅಮೆಜಾನ್ ನೇರವಾಗಿ ಐದು ಸಾವಿರ ವಿನಾಯಿತಿ ನೀಡಿ ಇದರ ಬೆಲೆಯನ್ನು 74,900 ರೂ. ಮಾಡಿದೆ. ಸದ್ಯ ಅಮೆಜಾನ್ ತಾಣದಲ್ಲಿ ಈ ಬೆಲೆಯನ್ನೇ ನೀವು ನೋಡಬಹುದು.

ಇನ್ನೂ, ಹೆಚ್ಚುವರಿಯಾಗಿ 6 ಸಾವಿರ ವಿನಾಯಿತಿಯನ್ನು ನೀವು ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಅಮೆಜಾನ್ ಪೇ, ಕೋಟಕ್ ಬ್ಯಾಂಕ್ ಕಾರ್ಡ್ ಹಾಗೂ ಐಸಿಐಸಿಐ ಡೆಬಿಟ್ ಕಾರ್ಡ್ ಬಳಸುವ ಮೂಲಕ ಪಡೆಯಬಹುದಾಗಿದೆ. ಅಂದರೆ ಒಟ್ಟಾರೆಯಾಗಿ 11,000 ರೂ. ಕಡಿತವನ್ನು ನೀವು ಪಡೆಯಬಹುದು. ಈ ಮೂಲಕ ನೀವು 128 ಜಿಬಿ ಸಂಗ್ರಹ ಸಾಮರ್ಥ್ಯವುಳ್ಳ ಐಫೋನ್ 13 ಅನ್ನು 68,990 ರೂ. ಗೆ ಪಡೆಯಬಹುದು. ಈ ಬೆಲೆ ಪ್ರಸ್ತುತ ಪ್ರಚಲಿತದಲ್ಲಿರುವ ಐಫೋನ್ 13 ಮಿನಿಗಿಂತ ಸುಮಾರು ಒಂದು ಸಾವಿರಗಳಷ್ಟು ಕಡಿಮೆಯಾಗಿದೆ.

ಇದೇ ರೀತಿ, 256 ಜಿಬಿ ಸಾಮರ್ಥ್ಯದ ಐಫೋನ್ 13 ಬೆಲೆ 84,900 ರೂ. ಆಗಿದ್ದು ಕಾರ್ಡುಗಳನ್ನು ಬಳಸುವ ಮೂಲಕ ಆರು ಸಾವಿರ ಕಡಿತದೊಂದಿಗೆ ₹ 78,900ಕ್ಕೆ ಪಡೆಯಬಹುದಾಗಿದೆ. ಇನ್ನು 512 ಜಿಬಿ ಸಾಮರ್ಥ್ಯದ ಐಫೋನ್ 13 ಬೆಲೆ ₹ 1,04,900 ಆಗಿದ್ದು ಕಾರ್ಡುಗಳನ್ನು ಬಳಸುವ ಮೂಲಕ ಆರು ಸಾವಿರ ಕಡಿತದೊಂದಿಗೆ ₹ 98,900ಕ್ಕೆ ಪಡೆಯಬಹುದಾಗಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ನಿಗದಿತ ಕಾರ್ಡುಗಳನ್ನು ಬಳಸಿ ಆರು ಸಾವಿರದಷ್ಟು ಕಡಿತ ಪಡೆಯುವ ಸೌಲಭ್ಯವು ಕೇವಲ ಮಾರ್ಚ್ 26, 2022ರವರೆಗೆ ಚಾಲ್ತಿಯಲ್ಲಿರುತ್ತದೆ. ಹಾಗಾಗಿ, ಈ ಬಗ್ಗೆ ಸಮಾಧಾನವಾಗಿ ಯೋಚಿಸಿ ನಿಮ್ಮ ನೆಚ್ಚಿನ ಫೋನ್ ಪಡೆಯಲು ಸಮಯಾವಕಾಶವಿದೆ. ಆದರೆ,ಈ ಸಮಯ ಮೀರದಂತೆ ನೋಡಿಕೊಳ್ಳಿ. ಒಟ್ಟಾರೆ ಐಫೋನ್‌ ಪ್ರಿಯರಿಗೆ ಇದು ಕಡಿಮೆ ಬೆಲೆಯಲ್ಲಿ ಐಫೋನ್ 13 ಖರೀದಿಸಲು ಸದಾವಕಾಶವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

UNION BUDGET:ಈಗಾಗ್ಲೇ ಇರೋ ಪಾಸ್​ಪೋರ್ಟ್ ಬದಲಿಸಿಕೊಳ್ಬೇಕಾ?

Tue Feb 1 , 2022
ಇ-ಪಾಸ್‌ಪೋರ್ಟ್‌ಗಳು ಸಾಂಪ್ರದಾಯಿಕ ಪಾಸ್‌ಪೋರ್ಟ್‌ಗಳಂತೆಯೇ (Traditional Passport) ಅದೇ ಉದ್ದೇಶವನ್ನು ಪೂರೈಸುತ್ತವೆ ಆದರೆ ಎಂಬೆಡೆಡ್ ಚಿಪ್‌ಗಳು (Embeded Chip) ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನದೊಂದಿಗೆ ಬರುತ್ತವೆ ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು. ಇ-ಪಾಸ್‌ಪೋರ್ಟ್‌ಗಳು ಮೈಕ್ರೋಚಿಪ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳಲ್ಲಿ ಪ್ರಮುಖವಾದ ಭದ್ರತಾ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಭಾರತವು ಪ್ರಸ್ತುತ ಬಳಕೆದಾರರಿಗೆ ಮುದ್ರಿತ ಪಾಸ್‌ಪೋರ್ಟ್‌ಗಳನ್ನು ಮಾತ್ರ ನೀಡುತ್ತದೆ. ಆದರೆ ಇ-ಪಾಸ್‌ಪೋರ್ಟ್‌ಗಳು ಯುಎಸ್, ಯುಕೆ ಮತ್ತು ಜರ್ಮನಿ ಸೇರಿದಂತೆ ಉಳಿದ ದೇಶಗಳಲ್ಲಿ ಲಭ್ಯವಿದೆ. ಇ- […]

Advertisement

Wordpress Social Share Plugin powered by Ultimatelysocial