IPL 2022 ಹರಾಜಿಗೆ ಬಂದ ಶ್ರೀಶಾಂತ್.. ಬೆಲೆ ಎಷ್ಟು ಗೊತ್ತಾ..?

IPL 2022 Mega Auction | ಹರಾಜಿಗೆ ಬಂದ ಶ್ರೀಶಾಂತ್.. ಬೆಲೆ ಎಷ್ಟು ಗೊತ್ತಾ..?

IPL-2022 ಮೆಗಾ ಹರಾಜಿನ ಸಮಯ ಸನ್ನಿಹಿತವಾಗಿದೆ. ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ipl-2022-mega-auction

ಈಗಾಗಲೇ 1214 ಆಟಗಾರರು ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.

ಅದೇ ರೀತಿ ಭಾರತದ ಮಾಜಿ ವೇಗಿ ಶ್ರೀಶಾಂತ್ ಮತ್ತೊಮ್ಮೆ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗಿಳಿಯಲಿದ್ದಾರೆ. ಅವರ ಮೂಲ ಬೆಲೆ 50 ಲಕ್ಷ.

ಕಳೆದ ವರ್ಷದ 75 ಲಕ್ಷ ಮುಖ ಬೆಲೆ ಹೊಂದಿದ್ದರೂ, ಯಾವುದೇ ಫ್ರಾಂಚೈಸಿ ಅವರನ್ನು ಖರೀದಿಸಲು ಆಸಕ್ತಿ ತೋರಲಿಲ್ಲ. ಶ್ರೀಶಾಂತ್ 2013ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕೊನೆಯ ಬಾರಿ ಆಡಿದ್ದರು.

ಬಳಿಕ ಸ್ಪಾಟ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಬಿಸಿಸಿಐ ಅವರ ಮೇಲೆ ಆಜೀವ ನಿಷೇಧ ಹೇರಿತ್ತು. ಆದರೆ, ಶ್ರೀಶಾಂತ್ ನಿಷೇಧವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಯಾಗಿ ಸುಪ್ರೀಂ ಕೋರ್ಟ್ ಬಿಸಿಸಿಐಗೆ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸುವಂತೆ ಆದೇಶಿಸಿತ್ತು.

ಬಿಸಿಸಿಐ ಅವರ ಮೇಲಿನ ನಿಷೇಧವನ್ನು ಏಳು ವರ್ಷಕ್ಕೆ ಇಳಿಸಿತ್ತು. ಸೆಪ್ಟೆಂಬರ್ 13, 2020 ರಂದು ನಿಷೇಧವನ್ನು ತೆಗೆದುಹಾಕಲಾಗಿದೆ. ಕಳೆದ ವರ್ಷ ಸೈಯದ್ ಮುಸ್ತಾಕ್ ಅಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಕೇರಳ ಪರ ಶ್ರೀಶಾಂತ್ ಆಡಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಹಲ್ವಾ ಬದಲಿಗೆ ಸಿಹಿತಿಂಡಿ" ಕೇಂದ್ರ ಬಜೆಟ್‌ 2022ರಲ್ಲಿ ಏನು ಬದಲಾವಣೆ?

Fri Jan 28 , 2022
  ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರ ಬಜೆಟ್ (Union Budget 2022-23)ಗೆ ದಿನಗಣನೆ ಆರಂಭವಾಗಿದೆ. ಮುಂದಿನ ವಾರ ಫೆಬ್ರವರಿ 1ರಂದು ಅವರು ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಭಾರತದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೋವಿಡ್ -19 ಸಾಂಕ್ರಾಮಿಕದ ನಂತರ ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳುವತ್ತ ಕೇಂದ್ರೀಕರಿಸಿದೆ. ಕೊರೊನಾ ಮಹಾಮಾರಿಯ ಹೊಸ ಅಲೆಯ ಮಧ್ಯೆ ಬರುತ್ತಿರುವ ಈ ಬಜೆಟ್‌ನಿಂದ ಜನರು ಹೆಚ್ಚಿನ ನಿರೀಕ್ಷೆ ಹೊಂದಿದ್ದಾರೆ. […]

Advertisement

Wordpress Social Share Plugin powered by Ultimatelysocial