ಬೆಂಗಳೂರು: ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ.

ಬೆಂಗಳೂರು: ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಮತ್ತು ಭಾನುವಾರ ಬೆಂಗಳೂರಿನಲ್ಲಿ 15ನೇ ಆವೃತ್ತಿಯ ಐಪಿಎಲ್ ನ ಮೆಗಾ ಹರಾಜು ನಡೆಯಲಿದೆ. ಇದೀಗ ಐಪಿಎಲ್ ಹರಾಜು ಪಟ್ಟಿಗೆ ಮತ್ತೆ ಹತ್ತು ಮಂದಿ ಆಟಗಾರರ ಹೆಸರನ್ನು ಸೇರ್ಪಡೆ ಮಾಡಿದೆ.ಬೆಂಗಳೂರಿನಲ್ಲಿ ಫೆ.12 ಮತ್ತು 13ರಂದು ಮೆಗಾ ಹರಾಜು ನಡೆಯಲಿದೆ. ಡೇವಿಡ್ ವಾರ್ನರ್, ಶ್ರೇಯಸ್ ಅಯ್ಯರ್, ಶಿಖರ್ ಧವನ್, ಕಗಿಸೊ ರಬಾಡಾ, ಕ್ವಿಂಟನ್ ಡಿಕಾಕ್, ಪ್ಯಾಟ್ ಕಮಿನ್ಸ್, ಮಿಚ್ ಮಾರ್ಶ್, ಇಶಾನ್ ಕಿಶನ್, ಮೊಹಮ್ಮದ್ ಶಮಿ ಮುಂತಾದವರು ಹರಾಜಿನಲ್ಲಿ ಮಿಂಚುವ ಸಾಧ್ಯೆತೆಯಿದೆ.ಇತ್ತೀಚೆಗಷ್ಟೇ ವಿಶ್ವಕಪ್ ಗೆದ್ದ ಭಾರತೀಯ ಅಂಡರ್ 19 ಆಟಗಾರರೂ ಹರಾಜು ಪಟ್ಟಿಯಲ್ಲಿ ಹೆಸರು ನಮೂದಿಸಿದ್ದಾರೆ.ಇರೊಂದಿಗೆ ಈ ಬಾರಿಯ ಹರಾಜಿನ ಭಾಗವಾಗಿರುವ ಆಟಗಾರರ ಸಂಖ್ಯೆ 600ಕ್ಕೆ ಏರಿಕೆಯಾಗಿದೆ. ಹೊಸದಾಗಿ ಸೇರ್ಪಡೆಯಾದ ಆಟಗಾರರ ಪೈಕಿ ಮೂವರು ವಿದೇಶಿಯರಿದ್ದು, ಏಳು ಮಂದಿ ಭಾರತೀಯ ಆಟಗಾರರಿದ್ದಾರೆ.ಅಗ್ನಿವೇಶ್ ಅಯಾಚಿ, ಆರನ್ ಹಾರ್ಡಿ, ಲ್ಯಾನ್ಸ್ ಮೋರಿಸ್, ನಿವೇತನ್ ರಾಧಾಕೃಷ್ಣನ್, ರೋಹನ್ ರಾಣಾ, ಕೆ ನಿತೀಶ್ ರೆಡ್ಡಿ, ಹಾರ್ದಿಕ್ ತಮೋರ್, ಮಿಹಿರ್ ಹಿರ್ವಾನಿ, ಸಾಯಿರಾಜ್ ಪಾಟೀಲ್, ಮೋನು ಸಿಂಗ್ ಹೆಸರನ್ನು ಹರಾಜು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಈ ಎಲ್ಲಾ ಆಟಗಾರರ ಮೂಲಬೆಲೆ 20 ಲಕ್ಷ ರೂ. ಆಗಿರಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಲ್ಮಾನ್ ಖಾನ್ ಅವರ ತರಬೇತುದಾರರು ಸೂಪರ್‌ಸ್ಟಾರ್‌ನ ಫಿಟ್‌ನೆಸ್ ದಿನಚರಿಯನ್ನು ಬಹಿರಂಗಪಡಿಸಿದ್ದಾರೆ

Fri Feb 11 , 2022
  ನಾವು ಬಾಲಿವುಡ್‌ನಲ್ಲಿ ಫಿಟ್‌ನೆಸ್ ಬಗ್ಗೆ ಮಾತನಾಡುವಾಗ, ಸಲ್ಮಾನ್ ಖಾನ್ ಖಂಡಿತವಾಗಿಯೂ ಮುನ್ನೆಲೆಗೆ ಬರುವ ಮೊದಲ ಹೆಸರುಗಳಲ್ಲಿ ಒಬ್ಬರು. ಉಬ್ಬುವ ಸ್ನಾಯುಗಳನ್ನು ಹೊಂದಿರುವ ಪರಿಪೂರ್ಣ ಕೆತ್ತನೆಯ ಮೈಕಟ್ಟು ಬಾಲಿವುಡ್‌ನ ‘ಭಾಯ್’ ಅನ್ನು ವ್ಯಾಖ್ಯಾನಿಸುತ್ತದೆ. ಸುಮಾರು ಮೂರು ದಶಕಗಳಿಂದ ಶೋಬಿಜ್‌ನಲ್ಲಿ ಅತ್ಯುತ್ತಮ ದೇಹವನ್ನು ಹೊಂದಿರುವ ಖ್ಯಾತಿಯನ್ನು ಅವರು ಉಳಿಸಿಕೊಳ್ಳಲು ಸಮರ್ಥರಾಗಿದ್ದಾರೆ. ಬಾಲಿವುಡ್‌ನ 90 ರ ಯುಗದಲ್ಲಿ ಅವರು ದೇಹದಾರ್ಢ್ಯವನ್ನು ಪರಿಚಯಿಸಿದರು ಎಂದು ಹೇಳುವುದು ತಪ್ಪಾಗುವುದಿಲ್ಲ, ಆದರೆ ಹೆಚ್ಚಿನ ನಟರು ತಮ್ಮ ಮೈಕಟ್ಟು […]

Advertisement

Wordpress Social Share Plugin powered by Ultimatelysocial