IPL: ಲಕ್ನೋ ತಂಡಕ್ಕೆ ರಾಹುಲ್;

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಐಪಿಎಲ್‌ನಲ್ಲಿ ಹೊಸದಾಗಿ ರೂಪುಗೊಂಡಿರುವ ಲಕ್ನೋ ಫ್ರಾಂಚೈಸಿ ಕೆ.ಎಲ್. ರಾಹುಲ್, ಮಾರ್ಕಸ್ ಸ್ಟೋನಿಸ್ ಮತ್ತು ರವಿ ಬಿಶ್ನೋಯಿ ಅವರನ್ನು ಸೇರಿಸಿಕೊಂಡಿದೆ.
ಲಕ್ನೋ ತಂಡಕ್ಕೆ ರಾಹುಲ್ ನಾಯಕರಾಗುವರೆಂದೂ ತಿಳಿದುಬಂದಿದೆ.

ಪ್ರಸ್ತುತ ಭಾರತೀಯ ಏಕದಿನ ತಂಡದ ಹಂಗಾಮಿ ನಾಯಕನಾಗಿರುವ ರಾಹುಲ್‌ಗೆ ಐಪಿಎಲ್ ಫ್ರಾಂಚೈಸಿಯ ನಾಯಕತ್ವವೂ ಒಲಿದು ಬರಲಿದೆ.
ಲಕ್ನೋ ಫ್ರಾಂಚೈಸಿಯು ರಾಹುಲ್‌ರನ್ನು ೧೫ ಕೋಟಿ ರೂ. ಕೊಟ್ಟು ಖರೀದಿಸಿದೆ. ಸ್ಟೋನಿಸ್‌ಗೆ 11 ಕೋಟಿ ಮತ್ತು ಬಿಶ್ನೋಯಿಗೆ 4 ಕೋಟಿ ನೀಡಲಾಗಿದೆ.
ಲಕ್ನೋ ಫ್ರಾಂಚೈಸಿಯನ್ನು ಸಂಜೀವ್ ಗೋಯೆಂಕಾ ಗ್ರೂಪ್ ೭೦೯೦ ಕೋಟಿ ರೂ.ಗಳಿಗೆ ಖರೀದಿಸಿತ್ತು.
ಇದೇವೇಳೆ, ಮತ್ತೊಂದು ಹೊಸ ತಂಡವಾದ ಅಹಮದಾಬಾದ್ ಫ್ರಾಂಚೈಸಿಯು ಹಾರ್ದಿಕ್ ಪಾಂಡ್ಯಾ, ರಶೀದ್ ಖಾನ್ ಮತ್ತು ಶುಭಮನ್ ಗಿಲ್ ಅವರನ್ನು ಖರೀದಿಸಿದೆ.
ಇವೆರಡೂ ತಂಡಗಳು ತಾವು ಯಾರನ್ನೆಲ್ಲ ಖರೀದಿಸಿವೆ ಎಂಬುದಾಗಿ ಪೂರ್ಣ ಮಾಹಿತಿ ನೀಡಿಲ್ಲ. ಆದರೆ ಜನವರಿ ೨೨ರೊಳಗೆ ತಂಡಗಳು ಇದನ್ನು ಬಹಿರಂಗಪಡಿಸಬೇಕಾಗಿದೆ.
ಐಪಿಎಲ್‌ನ ನೂತನ ಋತುವಿನ ಆಟಗಾರರ ಮಹಾ ಹರಾಜು ಪ್ರಕ್ರಿಯೆಯು ಫೆಬ್ರವರಿಯಲ್ಲಿ ನಡೆಯಲಿದೆ. ಪ್ರಸ್ತುತ ಈಗಿರುವ ೮ ಫ್ರಾಂಚೈಸಿಗಳು ತಲಾ ನಾಲ್ವರು ಆಟಗಾರರನ್ನು ಉಳಿಸಿಕೊಂಡು ಉಳಿದವರನ್ನು ಬಿಟ್ಟುಕೊಟ್ಟಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

TEST MATCH:ಭಾರತ‌ ಟೆಸ್ಟ್‌ ತಂಡ ಮುನ್ನಡೆಸುವುದು ದೊಡ್ಡ ಜವಾಬ್ದಾರಿ: ಕೆ.ಎಲ್‌. ರಾಹುಲ್

Tue Jan 18 , 2022
ಜೋಹಾನ್ಸ್‌ಬರ್ಗ್: ಭಾರತದ ಟೆಸ್ಟ್‌ ಕ್ರಿಕೆಟ್‌ ತಂಡವನ್ನು ಮುನ್ನಡೆಸುವುದು ದೊಡ್ಡ ಜವಾಬ್ದಾರಿ ಎಂದು ಏಕದಿನ ಮತ್ತು ಟಿ20 ಕ್ರಿಕೆಟ್ ತಂಡಗಳ‌ ಉಪನಾಯಕ ಕೆ.ಎಲ್.‌ ರಾಹುಲ್‌ ಹೇಳಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಮುಕ್ತಾಯವಾದ ಬಳಿಕ ವಿರಾಟ್‌ ಕೊಹ್ಲಿ, ಟೆಸ್ಟ್‌ ತಂಡದ ನಾಯಕತ್ವವನ್ನು ತೊರೆದಿದ್ದಾರೆ. ಹೀಗಾಗಿ ಈ ಮಾದರಿಯಲ್ಲಿ ತಂಡದ ಹೊಸ ನಾಯಕನ ಆಯ್ಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಕೆಟ್‌ ಕೀಪರ್‌, ಬ್ಯಾಟರ್‌ಗಳಾದ ಕೆ.ಎಲ್. ರಾಹುಲ್‌ […]

Advertisement

Wordpress Social Share Plugin powered by Ultimatelysocial