ಮೊದಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬ್ರೇಕ್ ಹಾಕುತ್ತಾ ಕೋಲ್ಕತ್ತ ನೈಟ್ ರೈಡರ್ಸ್..?

ಇಂದು  ನಡೆಯಲಿರುವ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬ್ರೇಕ್‌ ಹಾಕಲು ಕೋಲ್ಕತ್ತ ನೈಟ್ ರೈಡರ್ಸ್ ಬಳಗವಿದೆ.

ಸೋಮವಾರ ನಡೆದ ಎಲಿಮಿನೇಟರ್‌ನಲ್ಲಿ ಸುನೀಲ್ ನಾರಾಯಣ್ ಆಲ್‌ರೌಂಡ್ ಆಟದ ಪ್ರದರ್ಶನದಿಂದ ಕೋಲ್ಕತ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯಗಳಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ತಂಡವು ಅಪಾರ ಆತ್ಮವಿಶ್ವಾಸದಲ್ಲಿದೆ. ಆಟಗಾರರಾದ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ ಉತ್ತಮ ಪಾರ್ಮ್‌ನಲ್ಲಿದ್ದಾರೆ.

ಸ್ಪಿನ್ನರ್ ಸುನೀಲ್‌ ನರೈನ್‌, ವರುಣ್ ಚಕ್ರವರ್ತಿ, ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮತ್ತು ಮಧ್ಯಮವೇಗಿ ಲಾಕಿ ಫರ್ಗ್ಯುಸನ್ ತಂಡಕ್ಕೆ ಜಯ ತಂದುಕೊಡುವ ಸಾಮಾರ್ಥ್ಯವನ್ನು ಹೊಂದಿದ್ದಾರೆ.ಆದರೆ ಲೀಗ್‌ ಹಂತದಲ್ಲಿ ಅಗ್ರಸ್ಥಾನ ಗಳಿಸಿ ಪ್ಲೇ ಆಪ್‌ಗೆ ಎಂಟ್ರಿ ಕೊಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಚೆನ್ನೈ ವಿರುದ್ದ ಕ್ವಾಲಿಪೈಯರ್‌ನಲ್ಲಿ ಸೋಲನ್ನು ಅನುಭವಿಸಿತು.ಧೋನಿಯ ರಣತಂತ್ರದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಚೆನ್ನೈಗೆ ಶರಣಾಗಿತ್ತು.ಅಲ್ಲದೇ ಕೊನೆಯ ಓವರ್‌ನಲ್ಲಿ ಮಾಹಿಯನ್ನ ಕಟ್ಟುಹಾಕುವಲ್ಲಿ ಬೌಲರಯಾದ ಟಾಮ್‌ ಕರನ್‌ ವಿಫಲರಾಗಿದ್ದರು.ಅಲ್ಲದೆ ತಂಡದಲ್ಲಿದ್ದ ಅನುಭವಿ ಕಗಿಸೊ ರಬಾಡ ಅವರನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳುವಲ್ಲಿ ರಿಷಭ್ ಪಂತ್ ಎಡವಿದ್ದರು.ಈ ಎಲ್ಲ ಲೋಪದೊಷಗಳನ್ನೂ ತಿದ್ದುಕೊಂಡರೆ, ಡೆಲ್ಲಿ ತಂಡವು ಎದುರಾಳಿ ಕೋಲ್ಕತ್ತಾಗೆ ಕಠಿಣ ಸವಾಲೊಡ್ಡಬಹುದು. ಜೊತೆಗೆ ಪಂದ್ಯದಲ್ಲಿ ಗೆದ್ದು ಫೈನಲ್‌ನಲ್ಲಿ ಮತ್ತೆ ಧೋನಿ ಬಳಗವನ್ನು ಎದುರಿಸಿ ಸೇಡನ್ನು ತಿರಿಸಿಕೊಳ್ಳವ ಅವಕಾಶ ಇದೆ.

ತಂಡಗಳು:

ಡೆಲ್ಲಿ ಕ್ಯಾಪಿಟಲ್ಸ್-  ರಿಷಭ್ ಪಂತ್ (ನಾಯಕ), ಪೃಥ್ವಿ ಶಾ, ಶಿಖರ್ ಧವನ್, ಶಿಮ್ರೊನ್ ಹೆಟ್ಮೆಯರ್, ಶ್ರೇಯಸ್ ಅಯ್ಯರ್,  ಎನ್ರಿಚ್ ನಾರ್ಕಿಯಾ, ಆವೇಶ್ ಖಾನ್, ಕಗಿಸೊ ರಬಾಡ, ಟಾಮ್ ಕರನ್/ಮಾರ್ಕಸ್‌ ಸ್ಟೋನಿಸ್, ‌ಆರ್. ಅಶ್ವಿನ್,  ಅಕ್ಷರ್‌ ಪಟೇಲ್.

ಕೋಲ್ಕತ್ತ ನೈಟ್ ರೈಡರ್ಸ್- ಇಯಾನ್ ಮಾರ್ಗನ್ (ನಾಯಕ), ವೆಂಕಟೇಶ್ ಅಯ್ಯರ್, ದಿನೇಶ್ ಕಾರ್ತಿಕ್, ನಿತೀಶ್ ರಾಣಾ, ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಲಾಕಿ ಫರ್ಗ್ಯುಸನ್, ವರುಣ್ ಚಕ್ರವರ್ತಿ, ಸುನೀಲ್ ನಾರಾಯಣ್, ಆಯಂಡ್ರೆ ರಸೆಲ್/ಶಕೀಬ್ ಅಲ್ ಹಸನ್, ಶಿವಮ್‌ ಮಾವಿ.

ಪಂದ್ಯ ಆರಂಭ – ರಾತ್ರಿ 7.30

ನೇರಪ್ರಸಾರ – ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

 

 

Please follow and like us:

Leave a Reply

Your email address will not be published. Required fields are marked *

Next Post

ಪೋರ್ಬ್ಸ್ ಮ್ಯಾಗಜೀನ್‌ನಲ್ಲಿ ರಾಕಿಂಗ್ ಸ್ಟಾರ್  ಹವಾ

Wed Oct 13 , 2021
ನಾನ್‌ ಬರೋವರೆಗೂ ಮಾತ್ರ ಬೇರೆವ್ರ ಹವಾ  ನಾನ್‌ ಬಂದ್‌ ಮೇಲೆ ನಂದೆ ಹವಾ ಈ ಮಾತು ಈಗ ಸತ್ಯವಾಗಿದೆ ಎಸ್‌ ಈ ಡೈಲಾಗ್‌ ರಾಕಿಂಗ್‌ ಸ್ಟಾರ್‌ ಯಶ್‌ ಅವರದ್ದು  ‘ಕೆಜಿಎಫ್’ ನಂತರ ಯಶ್‌ ನಸೀಬೆ ಬದಲಾಗದೆ. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರೋದು ಎಲ್ಲಾರಿಗೂ ಗೊತ್ತಿರೊಹಂತದ್ದು  ‘ಕೆಜಿಎಫ್’ ಮೂಲಕ ಹಲವು ದಾಖಲೆಗಳನ್ನು ಬರೆದಿರುವ ಯಶ್ ಇದೀಗ ವಿಶೇಷ ಗೌರವೊಂದಕ್ಕೆ ಪಾತ್ರರಾಗಿದ್ದಾರೆ. ನಟ ಯಶ್‌ ಪೋರ್ಬ್ಸ್ ಮ್ಯಾಗಜೀನ್‌ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು,  […]

Advertisement

Wordpress Social Share Plugin powered by Ultimatelysocial