SMART PHONE:ಭಾರತದಲ್ಲಿ Oppo Reno 7 series ಬಿಡುಗಡೆ;

ಒಪ್ಪೋ ರೆನೋ 7 ಪ್ರೋ (Oppo Reno 7 Pro) ಮತ್ತು ರೆನೋ 7 (Reno 7) ಇಂದು ಭಾರತದಲ್ಲಿ (India) ಬಿಡುಗಡೆಯಾಗಲಿವೆ. ಈ ಫೋನ್‍ಗಳ ಸುತ್ತಲೂ ಹೈಪ್ ಸೃಷ್ಟಿಸುವ ಕಾರಣಕ್ಕಾಗಿ ಒಪ್ಪೋ (Oppo) ಕೆಲವು ಸಮಯದಿಂದ ಚುಟುಕು ಜಾಹಿರಾತುಗಳನ್ನು ನೀಡುತ್ತಿದೆ. ರೆನೋ 7 ಪ್ರೋ, ಬೋಕೆ ಫ್ಲೇರ್ ಮೋಡ್ (Bokeh Flare Mode) ಎಂಬ ಡಿಎಸ್‍ಎಲ್‍ಆರ್ ತರಹದ ವೈಶಿಷ್ಟ್ಯದೊಂದಿಗೆ ಬರಲಿದೆ ಎಂದು ಅದು ಈಗಾಗಲೇ ಬಹಿರಂಗಪಡಿಸಿದೆ.
ಬೋಕೆ ಫ್ಲೇರ್ ಮೋಡ್‍ನಲ್ಲಿ, ವ್ಯಕ್ತಿಯು ಫೋಕಸ್‍ನಲ್ಲಿ ಇರುವಾಗ, ಕ್ಯಾಮರಾವು ಹಿನ್ನೆಲೆಯಲ್ಲಿರುವ ಲೈಟ್ಸ್‌ಗಳಿಗೆ (Lights) ವಿಶಿಷ್ಟವಾದ ಮುಸುಕನ್ನು ನೀಡುತ್ತದೆ.

ಕಂಪೆನಿಯು, ರೆನೋ 7 ಪ್ರೋನಲ್ಲಿ, ಸೋನಿ ಐಎಂಎಕ್ಸ್766 ಫ್ಲ್ಯಾಗ್‍ಶಿಪ್ ಸೆನ್ಸಾರನ್ನು ಬಳಸುತ್ತಿದೆ. ರೆನೋ 7 ಸರಣಿಯ ಫೋನ್‍ಗಳ ವಿನ್ಯಾಸವು, ರೆನೋ 6 ಸರಣಿಯ ಫೋನ್‍ಗಳ ವಿನ್ಯಾಸಕ್ಕಿಂತ ಕೊಂಚ ಭಿನ್ನವಾಗಿರುತ್ತದೆ ಎಂಬುದನ್ನು ಕೂಡ ಒಪ್ಪೋ ಕಂಪೆನಿ ಬಹಿರಂಗಪಡಿಸಿದೆ. ಮತ್ತು ಈ ಸಂಗತಿಗಳು ರೆನೋ 7 ಸರಣಿಯ ಫೋನ್‍ಗಳನ್ನು ಖರೀದಿಸಲು ಸಾಕಷ್ಟು ಆಸಕ್ತಿ ಹುಟ್ಟಿಸಬಲ್ಲವು.

ಒಪ್ಪೋ, ಇಂದಿನ ಸಮಾರಂಭದಲ್ಲಿ ವಾಚ್ ಫ್ರೀ ಸ್ಮಾರ್ಟ್‍ವಾಚನ್ನು ಕೂಡ ಬಿಡುಗಡೆ ಮಾಡಲಿದೆ. ವಾಚ್ ಫ್ರೀ ಕೂಡ, ಚೀನಾದಲ್ಲಿ ಕಳೆದ ವರ್ಷ ಒಪ್ಪೋ ಬ್ರ್ಯಾಂಡ್‌ ವಾಚ್‍ನ ಒಂದು ವಾಚ್ ಟ್ರಿಮ್ಡ್‌ ಡೌನ್ ಆವೃತ್ತಿಯಾಗಿ ಬಿಡುಗಡೆಯಾಯಿತು. ಮೂಲಭೂತವಾಗಿ ಇದು ಒಂದು ಫಿಟ್‍ನೆಸ್ ಬ್ಯಾಂಡ್ ಆಗಿದ್ದು, ಆಯಂಡ್ರಾಯ್ಡ್‌ ಬೆಂಬಲವನ್ನು ಹೊಂದಿರುವುದಿಲ್ಲ. ಅದೇನೇ ಇದ್ದರೂ, ಅದರ ಸ್ಮಾರ್ಟ್‍ವಾಚ್ ಮಾದರಿಯು ಗ್ರಾಹಕರನ್ನು ಆಕರ್ಷಿಸುತ್ತದೆ.

ಭಾರತದಲ್ಲಿ ಒಪ್ಪೋ ರೆನೋ 7 ಸರಣಿ ಫೋನ್‍ಗಳ ಬೆಲೆ

ಒಪ್ಪೋ ರೆನೋ 7 , ಸಿಎನ್‍ವೈ 2,699 ನಿಂದ ಪ್ರಾರಂಭವಾಗುತ್ತದೆ, ಅಂದರೆ ಅದು ಸರಿಸುಮಾರು 31,600 ರೂ.ಗಳಿಗೆ ಸಮ. ಆದರೆ ಅದರ ಹಿಂದಿನ ಆವೃತ್ತಿಗಳ ಬೆಲೆಯನ್ನು ಪರಿಗಣಿಸಿ, ಅದಕ್ಕಿಂತ ಹೆಚ್ಚಿನ ಬೆಲೆಯನ್ನು ನಾವು ನಿರೀಕ್ಷಿಸಬಹುದು. ಇನ್ನೊಂದೆಡೆ, ಒಪ್ಪೋ ರೆನೋ 7 ಪ್ರೋನ ಆರಂಭಿಕ ಬೆಲೆ ಸಿಎನ್‍ವೈ 3,699 ಆಗಿದೆ. ಅಂದರೆ, ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ ಸರಿ ಸುಮಾರು 44,000 ರೂ. ಎಂದು ಪರಿಗಣಿಸಬಹುದು. ಇತ್ತೀಚೆಗೆ ಮಾಹಿತಿಗಾರರೊಬ್ಬರು ಹೇಳಿರುವ ಪ್ರಕಾರ, ರೆನೋ 7 ಸರಣಿಯ ಫೋನ್‍ಗಳ ಬೆಲೆ ಬಹುಶ: 28,000 ರೂ.ಗಳು ಮತ್ತು 43,000 ರೂ.ಗಳ ನಡುವೆ ಇರಬಹುದು. ಅದರರ್ಥ ಉನ್ನತ ಮಟ್ಟದ ರೆನೋ 7 ಪ್ರೋನ ಬೆಲೆ ಸುಮಾರು 43,000 ರೂ. ಗಳು ಇರಬಹುದು.

ಒಪ್ಪೋ ರೆನೋ 7 ಸರಣಿ ಫೋನ್‍ಗಳ ವಿಶೇಷ ಲಕ್ಷಣಗಳು

ಒಪ್ಪೋ ರೆನೋ 7 ಪ್ರೋ ಒಂದು ಪ್ರೀಮಿಯಂ ಪೋನ್ ಆಗಿದ್ದು, ಅದಕ್ಕೆ ಅನುಗುಣವಾದ ವಿಶೇಷಣಗಳನ್ನು ಹೊಂದಿದೆ. ಅದು 6.55 -ಇಂಚಿನ ಪೂರ್ಣ – ಹೆಚ್‍ಡಿ ಪ್ಲಸ್ + ಸೂಪರ್AMOLED ಡಿಸ್‌ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಜೊತೆ ಮೇಲ್ಭಾಗದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಈ ಫೋನ್ ಆಕ್ಟಾ – ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1200 ಮ್ಯಾಕ್ಸ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು ಆಯಂಡಾಯ್ಡ್‌ 11 -ಆಧಾರಿತ ColorOS 12 ಅನ್ನು ರನ್ ಮಾಡುತ್ತದೆ. ಅದರ ಹಿಂಭಾಗದ ಕ್ಯಾಮರಾಗಳು 50- ಮೆಗಾಪಿಕ್ಸೆಲ್ ಸೋನಿ ಐಎಂಎಕ್ಸ್766 ಸೆನ್ಸಾರ್, ವೈಡ್ ಆಯಂಗಲ್ ಕ್ಯಾಮರಾ ಮತ್ತು 2 – ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮರಾವನ್ನು ಒಳಗೊಂಡಿವೆ. ಸಿಲ್ಫಿಗಳಿಗಾಗಿ , 32 ಮೆಗಾಪಿಕ್ಸೆಲ್ ಕ್ಯಾಮರಾ ಇದೆ. ಒಪ್ಪೋ ರೆನೋ 7 ಪ್ರೋ 65 ವ್ಯಾಟ್ ವೇಗದ ಚಾರ್ಜಿಂಗ್‍ನೊಂದಿಗೆ 4500mAh ಬ್ಯಾಟರಿಯನ್ನು ಬಳಸುತ್ತದೆ.

ರೆನೋ 7 ಗೆ , ರೆನೋ 7 ಎಸ್‍ಇ ಎಂದು ಮರುಬ್ರ್ಯಾಂಡ್ ಮಾಡಲಾಗಿದ್ದು, ಒಪ್ಪೋ ಅದನ್ನು ಕಳೆದ ವರ್ಷ ಚೀನಾದಲ್ಲಿ ಬಿಡುಗಡೆ ಮಾಡಿತು. ಈ ಫೋನ್ 8GB of LPDDR4x RAM ನೊಂದಿಗೆ ಜೋಡಿಸಲಾದ ಡೈಮೆನ್ಸಿಟಿ 900 ಪ್ರೊಸೆಸರನ್ನು ಬಳಸುತ್ತದೆ, 256 ಜಿಬಿಯ ಯುಎಫ್‍ಎಸ್ 2.2 ಸ್ಟೋರೇಜ್ , 33 ವ್ಯಾಟ್ ವೇಗದ ಚಾರ್ಜಿಂಗ್‍ನೊಂದಿಗೆ 4500mAh ಬ್ಯಾಟರಿ ಮತ್ತು ಆಯಂಡ್ರಾಯ್ಡ್‌ 11 ಆಧಾರಿತ ColorOS 12 ಇದೆ. ಇದರ ಹಿಂಭಾಗದ ಟ್ರಿಪಲ್ ಕ್ಯಾಮರಾ ಸಿಸ್ಟಮ್ ಒಂದು 48-megapixel Sony IMX581 ಪ್ರೈಮರಿ ಸೆನ್ಸಾರ್, ಒಂದು 2 ಮೆಗಾಪಿಕ್ಸಲ್ ಮ್ಯಾಕ್ರೋ ಸೆನ್ಸಾರ್ ಮತ್ತು ಒಂದು ಎರಡು ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಸೆಲ್ಫಿಗಳಿಗಾಗಿ, ಒಪ್ಪೋ ರೆನೋ 7 ಎಸ್‍ಇ 5 ಜಿ ಯು, ಒಂದು 16 ಮೆಗಾಪಿಕ್ಸೆಲ್ ಸೋನಿ IMX471 ಕ್ಯಾಮರಾವನ್ನು ಹೊಂದಿದೆ. ಭಾರತೀಯ ರೆನೋ 7 ಅಲಿಯಾಸ್ ರೆನೋ 7 ಎಸ್‍ಇ 6.43 ಇಂಚಿನ ಪೂರ್ಣ ಹೆಚ್‍ಡಿ +AMOLED ಡಿಸ್ಪ್ಲೆಯನ್ನು 20:9 ಅನುಪಾತದ ಆಕಾರದಲ್ಲಿ ಹೊಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದಂತ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ದ್ವಿತೀಯ ಬಹುಮಾನ ̤

Fri Feb 4 , 2022
ಬೆಂಗಳೂರು: ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದಂತ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ  ಈ ಬಾರಿ ದ್ವಿತೀಯ ಬಹುಮಾನ ದೊರೆತಿದೆ. ಇದು ಮತ್ತೆ ಆತ್ಮ ನಿರ್ಭಾರ್ ಭಾರತವನ್ನು ನಿರ್ಮಿಸಲು ಸಹಕಾರಿ ಆಗಲಿದೆ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ  ಹರ್ಷ ವ್ಯಕ್ತ ಪಡಿಸಿದ್ದಾರೆ.ಈ ಕುರಿತಂತೆ ಟ್ವಿಟ್ಟರ್ ನಲ್ಲಿ   ಮಾಹಿತಿ ಹಂಚಿಕೊಂಡಿರುವಂತ ಅವರು, ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದ, ಕರ್ನಾಟಕದ ಸ್ತಭ್ದ ಚಿತ್ರ ‘ಸಾಂಪ್ರದಾಯಕ ಕರಕುಶಲ ವಸ್ತುಗಳ ತೊಟ್ಟಿಲು’  ಎರಡನೇ ಸ್ಥಾನಗಳಿಸಿರುವುದು ಹೆಮ್ಮೆಯ ವಿಷಯವಾಗಿದೆ. ಈ […]

Advertisement

Wordpress Social Share Plugin powered by Ultimatelysocial