ಕೊನೆಗೂ ಜಂಟಿಯಾಗಲು ತೀರ್ಮಾನಿಸಿದ ನಟ ಜೆಕೆ: ಹುಡುಗಿ ಯಾರು ಗೊತ್ತೇ?

 

ಬೆಂಗಳೂರು: ಕಿರುತೆರೆ, ಸ್ಯಾಂಡಲ್ ವುಡ್ ನಲ್ಲಿ ನಟಿಸಿ, ಫ್ಯಾಶನ್ ಲೋಕದಲ್ಲಿ ತನ್ನದೇ ಛಾಪು ಮೂಡಿಸಿರುವ ನಟ ಜಯರಾಮ್ ಕಾರ್ತಿಕ್ ಅಲಿಯಾಸ್ ಜೆಕೆ ಈಗ ಮದುವೆಯಾಗಲು ಹೊರಟಿದ್ದಾರೆ.
ಇಷ್ಟು ದಿನ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಜೆಕೆಗೆ ಪ್ರಶ್ನೆ ಮಾಡುತ್ತಲೇ ಇದ್ದರು. ಇದೀಗ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಜೆಕೆ ಮದುವೆಯಾಗಲು ಹೊರಟಿದ್ದು, ಅವರು ಮದುವೆಯಾಗುತ್ತಿರುವ ಹುಡುಗಿಯೂ ಫ್ಯಾಶನ್ ಲೋಕದ ಪ್ರತಿಭಾವಂತೆಯೇ ಎನ್ನುವುದು ತಿಳಿದುಬಂದಿದೆ.

ಖ್ಯಾತ ಫ್ಯಾಶನ್ ಡಿಸೈನರ್ ಅಪರ್ಣಾ ಸಮಂತ ಜೊತೆ ಜೆಕೆ ಮದುವೆಯಾಗಲಿದ್ದಾರೆ. ಜೆಕೆ ಜೊತೆಗಿರುವ ಫೋಟೋ ಪ್ರಕಟಿಸಿರುವ ಸಮಂತಾ ‘ಲೈಫ್ ಲೈನ್’ ಎಂದು ಬರೆದುಕೊಂಡಿದ್ದಾರೆ. ಕೆಲವು ದಿನಗಳ ಮೊದಲು ಇಬ್ಬರೂ ಮಿತ್ರರ ಜೊತೆ ಗೋವಾಕ್ಕೆ ತೆರಳಿರುವ ಫೋಟೋಗಳು ವೈರಲ್ ಆಗಿತ್ತು. ಆಗಲೇ ಜೆಕೆ ಅಪರ್ಣಾ ಜೊತೆಗಿರುವ ಫೋಟೋ ಪ್ರಕಟಿಸಿ ‘ನಿನ್ನನ್ನು ಪಡೆದಿರುವುದಕ್ಕೆ ಅದೃಷ್ಟ ಮಾಡಿದ್ದೆ’ ಎಂದು ಬರೆದುಕೊಂಡಿದ್ದರು. ಆಗಲೇ ಈಕೆ ಜೆಕೆ ಹುಡುಗಿ ಎಂದು ಎಲ್ಲರಿಗೂ ಅನುಮಾನ ಬಂದಿತ್ತು. ಈಗಂತೂ ಸ್ವತಃ ಅಪರ್ಣಾ ಕೂಡಾ ಇಂತಹದ್ದೊಂದು ಪೋಸ್ಟ್ ಮಾಡಿದ ಮೇಲೆ ಇಬ್ಬರ ಸಂಬಂಧ ಕನ್ ಫರ್ಮ್ ಆಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲಾಲ್ ಸಿಂಗ್ ಚಡ್ಡಾ ಟ್ರೈಲರ್ ನಲ್ಲಿ ಸೈಡ್ ಲೈನ್ ಆದ ನಾಗಚೈತನ್ಯ:

Tue May 31 , 2022
ಮುಂಬೈ: ಅಮೀರ್ ಖಾನ್ ನಾಯಕರಾಗಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಆದರೆ ಟ್ರೈಲರ್ ನೋಡಿದ ಕೆಲವರಿಗೆ ನಿರಾಸೆಯಾಗಿದೆ. ಇದಕ್ಕೆ ಕಾರಣ ಸಿನಿಮಾದಲ್ಲಿ ತೆಲುಗು ಸ್ಟಾರ್ ನಟ ನಾಗಚೈತನ್ಯ ಕೂಡಾ ನಟಿಸಿದ್ದಾರೆ. ಆದರೆ ಟ್ರೈಲರ್ ನಲ್ಲಿ ಅವರ ದೃಶ್ಯಗಳನ್ನು ಹೆಚ್ಚಾಗಿ ತೋರಿಸಿಲ್ಲ. ಇದು ತೆಲುಗು ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ನೆಚ್ಚಿನ ನಟನನ್ನು ಸೈಡ್ ಲೈನ್ ಮಾಡಿರುವುದು ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಈ ಕಾರಣಕ್ಕೆ ಕೆಲವರು ಸಿನಿಮಾ ಬಹಿಷ್ಕರಿಸಿ […]

Advertisement

Wordpress Social Share Plugin powered by Ultimatelysocial