ಜಮ್ಮು-ಕಾಶ್ಮೀರ ಉಗ್ರರ ದಾಳಿ ಇಳಿಕೆ.

ಜಮ್ಮು ಕಾಶ್ಮೀರದಲ್ಲಿ ಶಾಂತಿ, ಸ್ಥಿರತೆ ತರುವ ಹಾದಿಯ ಜೊತೆಗೆ ದೇಶದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ’ಭದ್ರತಾ ಪಡೆಗಳ ಕಾರ್ಯ ಶ್ಲಾಘನೀಯ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಭದ್ರತಾ ಪಡೆಗಳ ಬಿಗಿಯಾದ ಕ್ರಮಗಳಿಂದಾಗಿ ಕಣಿವೆ ಪ್ರದೇಶ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ಪ್ರಕರಣಗಳು ಇಳಿಕೆಯಾಗಿವೆ. ಜೊತೆಗೆ ದೇಶದ ವಿವಿಧ ಭಾಗಗಳನ್ನು ಕಟ್ಟೆಚ್ಚರವಹಿಸಲಾಗಿದೆ ಎಂದು ಹೇಳಿದ್ದಾರೆ

ಮೂರು ದಿನಗಳ ಅಖಿಲ ಭಾರತ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಹಾವಳಿ ಕಡಿಮೆಯಾಗಿದೆ ಇದರಿಂದಾಗಿ ಸಾವು ನೋವು ಸಂಖ್ಯೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.

ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷರ ಸಭೆಯಲ್ಲಿ ಸೈಬರ್ ಭದ್ರತೆ, ಡ್ರಗ್ಸ್ ವಿರುದ್ಧದ ಅಭಿಯಾನ, ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ಸಮ್ಮೇಳನದಲ್ಲಿ ಪ್ರಮುಖವಾಗಿ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.

ಇದರ ಜೊತೆ ಗಡಿ ನಿರ್ವಹಣೆ, ಗಡಿಯಾಚೆಗಿನ ಸವಾಲುಗಳು, ಕಡಲ ಭದ್ರತೆ, ಖಲಿಸ್ತಾನಿ ಉಗ್ರರಿಂದ ಬೆದರಿಕೆ, ಆರ್ಥಿಕತೆ, ಕ್ರಿಪ್ಟೋಕರೆನ್ಸಿ, ಮಾವೋವಾದಿ ಹಿಂಸಾಚಾರ ಮತ್ತು ಈಶಾನ್ಯ ಅಶಾಂತಿಯ ಬಗ್ಗೆಯೂ ಇಂದು ಮತ್ತೆ ನಾಳೆಯೂ ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಆಂತರಿಕ ಭದ್ರತೆಯ ಭವಿಷ್ಯದ ಮಾರ್ಗಸೂಚಿಯನ್ನು ಮುಖ್ಯವಾಗಿ ಚರ್ಚಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ.

Sun Jan 22 , 2023
ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ರಾಹುಲ ಗಾಂಧೀ ನಿವೃತ್ತಿ ಪಡೆದಿದ್ದಾರೆ ಏನು ಕಾಂಗ್ರೆಸ್ ನ ಡಿಎನ್ಎ ನಿವೃತ್ತಿ, ಪ್ರಾಮಾಣಿಕತೆ ಇಲ್ಲ ನಾನ ಕೇಳೊದು ಮಧ್ಯಪ್ರದೇಶದಲ್ಲಿ ಯಾಕೆ ಮಾಡಿಲ್ಲ ನೀವು ಸಿದ್ದರಾಮಯ್ಯ ಹತ್ತು ಕೆಜಿ ಅಕ್ಕಿ ಕೊಡುವ ವಿಚಾರಕ್ಕೆ ಬೊಮ್ಮಾಯಿ ಅತ್ಯಂತ ಟ್ರಾನ್ಸ್ಪರೇಂಟ್ ವ್ಯವಸ್ಥೆ ಮಾಡಿದ್ದಾರೆ ಹೀಗಾಗಿ ಅವರಿಗೆ ದುಡ್ಡು ಹೊಡೆಯಲಿ‌ ಸಿಗೋದಿಲ್ಲ ಅದಕ್ಕೆ ಆ ಟ್ರಾನ್ಸ್ಪರೇಂಟ್ ವ್ಯವಸ್ಥೆ ಹದೆಗೆಡಿಸುತ್ತಿದ್ದಾರೆ ಮುಂದೆ ತಮಗೆ ದುಡ್ಡೆ ಹೊಡೆಯಲಿಕ್ಕೆ ಹೇಗೆ ಲೋಕಾಯುಕ್ತನ್ನ […]

Advertisement

Wordpress Social Share Plugin powered by Ultimatelysocial