ರಾಜ್ಯ ಸರ್ಕಾರ ಜನವರಿ 12 ರವರೆಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡಲೇಬೇಕು.

ಒಂದು ವೇಳೆ ಮೀಸಲಾತಿ ಘೋಷಣೆ ಆಗದೆ ಹೋದ್ರೆ, ಜನವರಿ 13 ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿ ಮನೆಯ ಎದುರು ಮತ್ತೊಮ್ಮೆ ಉಗ್ರವಾದ ಹೋರಾಟ ಮಾಡುತ್ತೆವದು ಪಂಚಮಸಾಲಿ ಕೂಡಲಸಂಗಮದ‌ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಮೀಸಲಾತಿಗಾಗಿ ನಾವು ಎರಡೂ ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಡಿಸೆಂಬರ್ 22 ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಮಾಡಲಾಗಿತ್ತು. ಡಿಸೆಂಬರ್ 29 ರವರೆಗೆ ಪರಿಪರಿಯಾಗಿ ಬೇಡಿ ಕೊಂಡು ಆಣೆ ಪ್ರಮಾಣ ಸಮಯವನ್ನ ಬೊಮ್ಮಾಯಿ ತೆಗೆದುಕೊಂಡಿದ್ದರು. ಅಂದು ನಮ ಸಮುದಾಯಕ್ಕೆ ಮೀಸಲಾತಿ ಸಿಗುತ್ತದೆ ಎಂದು ಕನಸು ಇಟ್ಟುಕೊಂಡಿದ್ವಿ. ಆದ್ರೆ ಸಚಿವ ಸಂಪುಟವನ್ನ ನಡೆಸಿ ಹೊಸದಾಗಿ 2ಡಿ ರಚನೆ ಮಾಡುವುದಾಗಿ ಸಿಎಮ್ಲಂ ಕಾನೂನು ಸಚಿವರಿಂದ ಹೇಳಿಸಿದ್ದರು. ಡಿಸೆಂಬರ್ 29 ರ ನಿರ್ಣಯ ಅಸ್ಪಷ್ಟತೆ ಇದೆ ಎಂದರು.

ಡಿ ಗ್ರೂಪ್ನನ್ನ ಹೊಸದಾಗಿ ರಚನೆ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಕಾನೂನು ತಜ್ಞರನ್ನ ಸಲಹೆ ಪಡೆದುಕೊಳ್ಳಲಾಗಿದೆ. ಯವಾಗ ನೀತಿ ಸಂಹಿತೆ ಬರುತ್ತದೆ ಗೊತ್ತಿಲ್ಲ, ಆದ್ದರಿಂದ ಜನವರಿ 12 ರವರೆಗೆ ನಮ್ಮ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಲೇಬೇಕು. 2ಡಿ ನಲ್ಲಿ ಏನೂ ಇದೆ ಎಂಬುದು ನಮಗೆ ತಿಳಿಸುವ ಕೆಲಸವನ್ನ ಸರ್ಕಾರ ಮಾಡಲಿ, ತಮ್ಮ ಸಚಿವರಿಂದ ಸ್ಪಷ್ಟತೆ ನೀಡಲಿ.
ಸಂಕ್ರಮಣ ಒಂದು ದಿನ ಮುಂಚೆ ನಾವು ಹೋರಾಟ ಆರಂಭ ಮಾಡುತ್ತೆವೆ. ನಾವೆಲ್ಲರೂ ಸಂಕ್ರಮಣವನ್ನ ಸಿಎಮ್ ಮನೆ ಎದುರು ಮಾಡೋಣ. ಇದು ಬೇವು ಬೆಲ್ಲದ ಸಂಕ್ರಾಂತಿ ಆಗುವುದಿಲ್ಲ, ಹೋರಾಟದ ಸಂಕ್ರಾಂತಿ ಆಗಲಿದೆ. ಜಾತ್ರೆ ಸಮಾರಂಭ ನಮಗೆ‌ ಮುಖ್ಯ ಅಲ್ಲ, ನಮ್ಮ ಸಮುದಾಯಕ್ಕೆ ಮೀಸಲಾತಿ ಘೋಷಣೆ ಮುಖ್ಯ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಷ್ಟ್ರೀಯ ಯುವಜನೋತ್ಸವಕ್ಕೆ ಆಗಮಿಸಿದ ವಿವಿಧ ರಾಜ್ಯದ ವಿದ್ಯಾರ್ಥಿಗಳನ್ನು ಸ್ವಾಗತಿಸಿದ- ಅಮೃತ್ ದೇಸಾಯಿ

Mon Jan 9 , 2023
ಧಾರವಾಡ: ಸ್ವಾಮಿ ವಿವೇಕಾನಂದರ ಜನ್ಮಜಯಂತಿಯ ಪ್ರಯುಕ್ತ ಜನವರಿ 12 ರಿಂದ 16ರವರೆಗೆ ನಡೆಯುವ “ರಾಷ್ಟ್ರೀಯ ಯುವಜನೋತ್ಸವ” ಕಾರ್ಯಕ್ರಮದ ಉದ್ಘಾಟನೆಗೆ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರು ಆಗಮಿಸುತ್ತಿದ್ದು. ಈ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲದಲ್ಲಿ ಜರಗುವ ಕಾರ್ಯಕ್ರಮಗಳಿಗೆ ಶಾಸಕ ಶ್ರೀ ಅಮೃತ್ ದೇಸಾಯಿ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಇಂದು ಶಾಸಕರು ಕೃಷಿ ವಿಶ್ವ ವಿದ್ಯಾಲಯಕ್ಕೆ ಭೇಟಿನೀಡಿ ಬೇರೆ ಬೇರೆ ರಾಜ್ಯಗಳಿಂದ ಆಗಮಿಸುತ್ತಿರುವ ಯುವ ಜನತೆಗೆ […]

Advertisement

Wordpress Social Share Plugin powered by Ultimatelysocial