ಜಾರಕಿಹೊಳಿ ಸಿ.ಡಿ ಪ್ರಕರಣದಲ್ಲಿ ಎಫ್‌ಐಆರ್ ರದ್ದು ಕೋರಿ ಕೋರ್ಟ್ ಮೊರೆ‌ಹೋದ ನರೇಶ್,

 

ಬೆಂಗಳೂರು:ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಎಫ್‌ಐಆರ್ ರದ್ದುಗೊಳಿಸಲು ಕೋರಿ ಹೈಕೋರ್ಟ್ ಮೊರೆ ಹೋಗಲಾಗಿದೆ. ನರೇಶ್ ಗೌಡ ಮತ್ತು ಶ್ರವಣ್ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸದಾಶಿವನಗರದಲ್ಲಿ ಜಾರಕಿಹೊಳಿ ನೀಡಿದ್ದ ದೂರಿನ ಎಫ್‌ಐಆರ್ ರದ್ದು ಮಾಡುವಂತೆ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಎಫ್‌ಐಆರ್‌ನಲ್ಲಿ ನಮ್ಮ ಹೆಸರಿಲ್ಲ. ಬ್ಲ್ಯಾಕ್ ಮೇಲ್, ಮತ್ತು ವಸೂಲಿಯಲ್ಲಿ ಭಾಗಿಯಾಗಿಲ್ಲ. ಎಫ್‌ಐಆರ್ ದಾಖಲಾಗಿ ವರ್ಷ ಕಳೆದಿದೆ. ಹೀಗಾಗಿ ಎಫ್‌ಐಆರ್ ರದ್ದು ಮಾಡುವಂತೆ ಕೋರಿ ಸಿಆರ್‌ಪಿಸಿ 482 ಅಡಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ಪ್ರಕರಣವಮ್ನ ಸಿಬಿಐಗೆ ಒಪ್ಪಿಸಬಹುದು ಅನ್ನೊ ಮಾಹಿತಿ ಹರಿದಾಡ್ತಿರುವ ಹೊತ್ತಲ್ಲಿ, ಇದೀಗ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿರೋದು ಕುತೂಹಲ ಕೆರಳಿಸಿದೆ.

ಇನ್ನೂ ಸಿಡಿ ವಿಚಾರವಾಗಿ ಸಚಿವ ಜಾರಕಿಹೋಳಿ ಸದಾಶಿವನಗರ ಠಾಣೆಯಲ್ಲಿ ಬ್ಲಾಕ್ ಮೇಲ್ ದೂರು ದಾಖಲಿಸಿದ್ರೆ, ಕಬ್ಬನ್ ಪಾರ್ಕ್‌ನಲ್ಲಿ ಸಂತ್ರಸ್ತ ಯುವತಿ ಅಧಿಕಾರ‌ ದುರುಪಯೋಗ ಪಡಿಸಿಕೊಂಡು ಅತ್ಯಾಚಾರವೆಸಗಿದ್ದಾರೆ ಎಂದು ದೂರು ದಾಖಲಿಸಿದ್ದಳು. ಯುವತಿ ದಾಖಲಿಸಿದ ದೂರಿನನ್ವಯ ತನಿಖೆ ನಡೆಸಿದ ಪೊಲೀಸರು ಅತ್ಯಾಚಾರ ಕೇಸ್ ಸಂಬಂಧ ಬಿ ರಿಪೋರ್ಟ್ ಸಲ್ಲಿಸಿದ್ದರು. ಇನ್ನೂ ಸಿ.ಡಿ ಕೇಸ್‌ನಿಂದಾಗಿ ಸಚಿವರಾಗಿದ್ದ ಜಾರಕಿಹೊಳಿ ತಮ್ಮ ಸಚಿವ ಸ್ಥಾನವನ್ನೇ ಕಳೆದುಕೊಂಡಿದ್ರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀಲಂಕಾ ವಿರುದ್ಧ ಟೆಸ್ಟ್ ಆಡುತ್ತಿದ್ದರೂ ಆಸಿಸ್ ನಾಯಕನ ಕಣ್ಣು ಭಾರತದ ಮೇಲೆ!

Sat Jul 2 , 2022
ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಸದ್ಯ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಮೊದಲ ಪಂದ್ಯ ಈಗಾಗಲೇ ಮುಕ್ತಾಯವಾಗಿದ್ದು ಮೂರು ದಿನದಲ್ಲಿಯೇ ಶ್ರಿಲಂಕಾ ತಂಡವನ್ನು ಆಸಿಸ್ ಪಡೆ ಸುಲಭವಾಗಿ ಮಣಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲ ಟೆಸ್ಟ್ ಪಂದ್ಯ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಸಿಸ್ ನಾಯಕ […]

Advertisement

Wordpress Social Share Plugin powered by Ultimatelysocial