‘ಸೂತ್ರಧಾರಿ’ ಸಿನಿಮಾದ ಡ್ಯಾಶ್ ಹಾಡು ಹಿಟ್.

‘ಬಿಗ್ ಬಾಸ್’ ವಿನ್ನರ್, ಸಂಗೀತ ನಿರ್ದೇಶಕ, ಗಾಯಕ ಚಂದನ್ ಶೆಟ್ಟಿ ಈಗ ನಟ ಕೂಡ ಆಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರ ಮೊದಲು ಹೀರೋ ಆಗಿ ಬಣ್ಣ ಹಚ್ಚಿರುವ ‘ಎಲ್ರ ಕಾಲೆಳಿಯತ್ತೆ ಕಾಲ’ ಸಿನಿಮಾವು ತೆರೆಗೆ ಬರುವ ಮುನ್ನವೇ ‘ಸೂತ್ರಧಾರಿ’ ಅನ್ನೋ ಮತ್ತೊಂದು ಸಿನಿಮಾದಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾವನ್ನು ನವರಸನ್ ನಿರ್ಮಾಣ ಮಾಡಿದ್ದಾರೆ. ‘ಸೂತ್ರಧಾರಿ’ ಸಿನಿಮಾದಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯೂ ಕೂಡ ಚಂದನ್ ಶೆಟ್ಟಿ ಅವರದ್ದೇ. ಈ ಸಿನಿಮಾಕ್ಕಾಗಿ ಅವರು ಸಂಯೋಜಿಸಿದ್ದ ಡ್ಯಾಶ್ ಹಾಡು ಈಚೆಗೆ ರಿಲೀಸ್ ಆಗಿತ್ತು. ಇದೀಗ ಬಿಡುಗಡೆಯಾದ ಕೆಲವೇ ದಿನಗಳಲ್ಲಿ 1 ಕೋಟಿ ವೀವ್ಸ್ ಪಡೆದುಕೊಂಡಿರುವುದು ಈ ಹಾಡಿನ ಹೆಗ್ಗಳಿಕೆ. ಈ ಬಗ್ಗೆ ಸಂತಸ ವ್ಯಕ್ತಪಡಿಸುವ ಚಂದನ್‌ ಶೆಟ್ಟಿ, ‘ಸಾಂಗ್ ರಿಲೀಸ್ ಆದ ಮೂರು ವಾರದಲ್ಲೇ ಒಂದು ಕೋಟಿ ವೀಕ್ಷಣೆ ಆಗಿರುವುದು ಹೆಮ್ಮೆ ತಂದಿದೆ. ಮಾಧ್ಯಮಗಳ ಸಹಕಾರದಿಂದಾಗಿ ಈ ಹಾಡು ಇಂಥದ್ದೊಂದು ಸಾಧನೆ ಮಾಡಲು ಸಾಧ್ಯವಾಗಿದೆ. ಈ ಡ್ಯಾಶ್ ಹಾಡಿಗೆ ನನ್ನ ಜೊತೆಗೆ ಭರ್ಜರಿ ಚೇತನ್ ಕುಮಾರ್ ಅವರು ಕೂಡ ಸಾಹಿತ್ಯ ಬರೆದಿದ್ದಾರೆ..’ ಎಂದರು. ಅಂದಹಾಗೆ, ‘ಸೂತ್ರಧಾರಿ’ ಸಿನಿಮಾಗೆ ಅಪೂರ್ವ ನಾಯಕಿ. ಆದರೆ ಈ ಡ್ಯಾಶ್ ಸಾಂಗ್‌ನಲ್ಲಿ ಮಾತ್ರ ಸಂಜನಾ ಆನಂದ್ ಹೆಜ್ಜೆ ಹಾಕಿದ್ದಾರೆ. ವಿಶೇಷವೆಂದರೆ, ಈ ರೀತಿ ಹಾಡಿನಲ್ಲಿ ಸಂಜನಾ ಕಾಣಿಸಿಕೊಂಡಿರುವುದು ಇದೇ ಮೊದಲು. ‘ಈ ಹಾಡಿನ ಶೂಟಿಂಗ್ ಶುರುವಾಗುವುದಕ್ಕೂ ಮುನ್ನವೇ ನಾನು ನಿರ್ಮಾಪಕರಿಗೆ ಈ ಹಾಡು ಚೆನ್ನಾಗಿ ಬರಬೇಕು ಸರ್. ಇದೇ ಮೊದಲ ಬಾರಿ ನಾನು ಬೇರೆಯರವರ ಸಿನಿಮಾವೊಂದರ ಹಾಡಿನಲ್ಲಿ ನಟಿಸುತ್ತಿದ್ದೇನೆ ಎಂದಿದ್ದೆ. ಈಗ ಈ ಹಾಡಿನಲ್ಲಿ ನಾನಿರುವುದಕ್ಕೆ ಖುಷಿಯಾಗಿದೆ.’ ಎನ್ನುತ್ತಾರೆ ನಟಿ ಸಂಜನಾ ಆನಂದ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫೆಬ್ರವರಿ 5ರಿಂದ ಕಾಂಗ್ರೆಸ್‌ನ 'ಕರಾವಳಿ ಧ್ವನಿ ಯಾತ್ರೆ'.

Fri Jan 27 , 2023
ಮಂಗಳೂರು, ಜನವರಿ, 27: ಇತ್ತೀಚೆಗೆ ನಡೆದ ಪ್ರಜಾಧ್ವನಿ ಮಾದರಿಯಲ್ಲಿಯೇ ‘ಕರಾವಳಿ ಧ್ವನಿ ಯಾತ್ರೆ’ ನಡೆಸಲು ಕಾಂಗ್ರೆಸ್ ಸಭೆಯಲ್ಲಿ ನಿರ್ಧರಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ನಡೆದ ಆರು ಜಿಲ್ಲೆಗಳ ಪಕ್ಷದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ವಿಧಾನಪರಿಷತ್ ವಿಪಕ್ಷ ನಾಯಕ ನಡೆಸಿರುವ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ […]

Advertisement

Wordpress Social Share Plugin powered by Ultimatelysocial