ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವವರಿಗೆ ಇಂದು ಪಾಠವಾಗಲಿದೆ.

ಬೀದರ್ ಜಿಲ್ಲೆ ಮನ್ನಾ ಖೇಳಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ.
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್ ಗೆ ಶಕ್ತಿ ಇಲ್ಲ ಎಂದು ಜೆಡಿಎಸ್ ಬಗ್ಗೆ ಲಘುವಾಗಿ ಮಾತಾಡುತ್ತಿದ್ದವರಿಗೆ ಇದು ಪಾಠವಾಗಿದೆ. ಈ ಭಾಗದಲ್ಲೂ ಜೆಡಿಎಸ್ ಇದೆ ಎಂಬುದನ್ನು ಈ ಎರಡು ದಿನಗಳ ಕಾರ್ಯಕ್ರಮಗಳ ಮೂಲಕ ತೋರಿಸಿಕೊಟ್ಟಿದ್ದಿರಿ.
ನಮ್ಮ ಪಕ್ಷದ ಪರವಾಗಿ ಬಹಳಷ್ಟು ಒಲವು ತೊರಿಸಿದ್ದಿರಿ.ನಮಗೂ ಬಿಜೆಪಿಗೆ ಇರುವ ವ್ಯತ್ಯಾಸ ಏನು ಎಂಬುದನ್ನು ತಾವೆಲ್ಲರೂ ಯೋಚಿಸಬೇಕು.

*ರೈತರ ಸಾಲಮನ್ನಾ ಮಾಡುವ ನಿರ್ಧಾರ ಮಾಡಿದ್ದೇನೆ ಎಂದು ನಾನು ಸಮ್ಮಿಶ್ರ ಸರ್ಕಾರದ ವೇಳೆಯಲ್ಲಿ ಬೀದರ್ ನಗರದ ಗಣೇಶ ಮೈದಾನದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದೆ ಆದರೇ ಅದಕ್ಕೆ ಕಾಂಗ್ರೆಸ್ ನವ್ರು ವಿರೋಧ ವ್ಯಕ್ತಪಡಿಸಿದ್ದರು.

*ನಾನು ಕಾಂಗ್ರೆಸ್ ನವ್ರ ವಿರೋಧದ ನಡುವೆಯೂ ಅಂದು ರೈತರ ಸಾಲಮನ್ನಾ ಮಾಡಿದ್ದೆ. ಬಡತನ, ನಿರುದ್ಯೋಗ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಾನು ಪಂಚರತ್ನ ಎಂಬ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಜಾರಿಗೆ ತರಲು ಹೋಗುತ್ತಿದ್ದೇನೆ.
ತಾವು ಮುಂದಿನ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡಿದರೆ ಆ ಎಲ್ಲಾ ಯೋಜನೆಗಳನ್ನು ಜಾರಿಗೆ ತರುತ್ತೇನೆ. ತರದೆ ಇದ್ದರೇ ನಾನು ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಘೋಷಣೆ ಕೂಡ ಮಾಡಿದ್ದೇನೆ.
ನಮ್ಮ ಆರೋಗ್ಯವನ್ನು ಲೆಕ್ಕಿಸದೇ ನಾನು ನಾಡಿನ ಒಳಿತಿಗಾಗಿ ಹೋರಾಡುತ್ತಿದ್ದೇನೆ.
ಉತ್ತರ ಕರ್ನಾಟಕ ನೀರಾವರಿ ಯೋಜನೆಗಳನ್ನು ದೇವೇಗೌಡರು ಜಾರಿಗೆ ತಂದಿದ್ದಾರೆ. ಅವರು ಮುಖ್ಯಮಂತ್ರಿ, ಪ್ರಧಾನ ಮಂತ್ರಿಯಾಗದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಅದನ್ನು ಜನರು ಗಮನಿಸಬೇಕು.*ಬಿಜೆಪಿ ಕರ್ನಾಟಕ, ಉತ್ತರ ಕರ್ನಾಟಕ ಭಾಗಕ್ಕೆ ದ್ರೋಹ, ವಂಚನೆ ಮಾಡುತ್ತಿದ್ದಾರೆ. ಅವ್ರು ತೆರಿಗೆ ಹಣ ಲೂಟಿ ಮಾಡ್ತಿದ್ದಾರೆ. ಮಂತ್ರಿಗಳು ಲೂಟಿಯಲ್ಲಿ ತೊಡಗಿದ್ದಾರೆ. ಇಜಾಬ್ ವಿಷಯದಲ್ಲಿ ಅವರು ರಾಜಕೀಯ ಮಾಡಿದ್ದಾರೆ. ಅವರನ್ನು ತಾವು ಬೆಂಬಲಿಸಬಾರದು ಎಂದು ಹೆಚ್ಡಿಕೆ ನಾಡಿನ ಜನತೆಗೆ ಮನವಿ ಮಾಡಿದರು. ಜೆಡಿಎಸ್ ಗೆ ಬೆಂಬಲಿಸುವಂತೆ ವಿನಂತಿಸಿದರು.
ಬಂಡೆಪ್ಪ ಖಾಶೆಂಪುರ್ ರವರು ನಿಜವಾದ ರೈತನ ಮಗನಾಗಿದ್ದಾನೆ. ಉಳಿಸಿಕೊಂಡು ಹೋಗಿ
ಬಂಡೆಪ್ಪ ಖಾಶೆಂಪುರ್ ರವರಿಗೆ ಹೃದಯವೈಶಾಲತೆ ಇದೆ. ಅವರು ಬಡವರ, ರೈತರ ಒಳಿತಿಗಾಗಿ ಯೋಜನೆಗಳನ್ನು ತಂದಿದ್ದಾರೆ. ಬಡವರ ಬಂಧು, ರೈತರ ಸಾಲಮನ್ನಾ ಗಳನ್ನು ಅವರು ಜಾರಿಗೆ ತಂದಿದ್ದಾರೆ. ಅವರು ಬಡವರ ಬಗ್ಗೆ ಸದಾಕಾಲವೂ ಚಿಂತನೆ ಮಾಡುತ್ತಾರೆ. ಅವರನ್ನು ತಾವು ಉಳಿಸಿಕೊಂಡು ಸಾಗಬೇಕು. ನಿಮ್ಮ ಕಷ್ಟಸುಖದಲ್ಲಿ ಭಾಗಿಯಾಗುವ ಬಂಡೆಪ್ಪ ಖಾಶೆಂಪುರ್ ರವರನ್ನು ಉಳಿಸಿಕೊಂಡು ಹೋಗಿ ಎಂದು ಹೆಚ್ಡಿಕೆ ಬೀದರ್ ದಕ್ಷಿಣ ಕ್ಷೇತ್ರದ ಜನತೆಗೆ ಮನವಿ ಮಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಒಂದೇ ಗ್ರಾಮದ ಒಂದೇ ಸ್ಥಳದಲ್ಲಿ ಮೂರು ಚಿರತೆಗಳ ಸೆರೆ

Sat Jan 7 , 2023
ರಾಜ್ಯದಲ್ಲಿ ಚಿರತೆಗಳ ಹಾವಳಿ ಎಷ್ಟು ಜೋರಾಗಿದೆ ಎಂದರೆ ಹೀಗೇ ಬಿಟ್ಟರೆ ಜಾನುವಾರುಗಳ ಹಾಗೆ ಬೀದಿಯಲ್ಲಿ ಓಡಾಡಬಹುದು ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ! ಇದಕ್ಕೆ ಪೂರಕವಾದ ಉದಾಹರಣೆಯೊಂದು ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಸಿಕ್ಕಿದೆ (Leopard trapped).ಇಲ್ಲಿ ಒಂದೇ ಗ್ರಾಮದ ಒಂದೇ ಸ್ಥಳದಲ್ಲಿ ಒಂದೇ ತಿಂಗಳಲ್ಲಿ ಮೂರು ಚಿರತೆಗಳು ಬೋನಿಗೆ ಬಿದ್ದಿವೆ. ಮೂರು ಚಿರತೆಗಳು ಬೋನಿಗೇ ಬಿದ್ದಿವೆ ಎಂದರೆ ಈ ಭಾಗದಲ್ಲಿ ಎಷ್ಟು ಚಿರತೆಗಳು ಇದ್ದಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. […]

Advertisement

Wordpress Social Share Plugin powered by Ultimatelysocial