ಹೀಗೊಂದು ವಿಚಿತ್ರ ಮದುವೆ.

ಕೆಲವರು ವಿಚಿತ್ರ ರೀತಿಯಲ್ಲಿ ಹೆಸರು ಮಾಡುತ್ತಾರೆ. ಹಿಂದೊಮ್ಮೆ ತನ್ನನ್ನು ತಾನೇ ಮದುವೆಯಾಗಿ ಯುವತಿಯೊಬ್ಬಳು ಸುದ್ದಿ ಮಾಡಿದ್ದರೆ, ಪ್ರಾಣಿಗಳನ್ನು ಮದುವೆಯಾಗಿ ಸುದ್ದಿ ಮಾಡಿದವರೂ ಇದ್ದಾರೆ. ಇದೀಗ ಮಹಿಳೆ ತನ್ನ ತುಪ್ಪಳದ ಹಾಸಿಗೆಯನ್ನೇ ಮದುವೆಯಾಗಿದ್ದಾಳೆ !

49 ವರ್ಷದ ಪಾಸ್ಕಲ್ ಸೆಲ್ಲಿಕ್ ತನ್ನ ಹಾಸಿಗೆಯನ್ನು ಮದುವೆಯಾಗಲು ಅದ್ಧೂರಿ ಸಮಾರಂಭವನ್ನು ಆಯೋಜಿಸಿದ್ದಳು. ಮದುವೆಯನ್ನು ಆಚರಿಸಲು ಅವಳು ಮದುವೆಯ ಯೋಜಕನನ್ನು ಸಹ ನೇಮಿಸಿಕೊಂಡಿದ್ದರು. ಅತಿಥಿಗಳಿಗೂ ಆಹ್ವಾನ ನೀಡಿದ್ದಳು.

ತನ್ನ ನಿರ್ಧಾರದ ಬಗ್ಗೆ ಮಾತನಾಡಿರುವ ಪಾಸ್ಕಲ್​, ನನಗೆ ಬೇರೆ ಯಾರ ಮೇಲೂ ನಂಬಿಕೆ ಇಲ್ಲ. ಅನೇಕ ವರ್ಷಗಳಿಂದ ನನ್ನ ನಿಕಟವಾಗಿ ಇದ್ದುದು ಹಾಗೂ ಅತ್ಯಂತ ವಿಶ್ವಾಸಾರ್ಹ ಸಂಬಂಧವಾಗಿರುವುದು ಈ ಹಾಸಿಗೆ ಮಾತ್ರ. ಅದಕ್ಕಿಂತ ದೊಡ್ಡ ಅಪ್ಪುಗೆಯನ್ನು ಯಾರೂ ನೀಡಲು ಸಾಧ್ಯವಿಲ್ಲ ಎಂದಿದ್ದಾಳೆ.

ಮದುವೆಗೆ ಜನರೂ ಬಂದಿದ್ದರು. ಸಾಮಾನ್ಯ ಮದುವೆಯಂತೆ ಸಂಗೀತ ಮತ್ತು ಸಮಾರಂಭ, ನಗು ಮತ್ತು ಮನರಂಜನೆ ಇತ್ತು. 2019ರಲ್ಲಿ ನಡೆದ ಈ ಮದುವೆಯ ಬಗ್ಗೆ ಈಗ ಮತ್ತೆ ಸುದ್ದಿ ವೈರಲ್​ ಆಗುತ್ತಿದ್ದು, ಜನರು ಬಿದ್ದೂ ಬಿದ್ದೂ ನಗುತ್ತಿದ್ದಾರೆ

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆದರಿಕೆ ಕರೆಯಿಂದಾಗಿ 6 ಸಾವಿರ ಕೋಟಿ.ರೂ. ಯೋಜನೆ ಕರ್ನಾಟಕಕ್ಕೆ ಶಿಫ್ಟ್ ಆಗಿದೆ.

Sun Jan 15 , 2023
  ಪುಣೆ: ರಾಜ್ಯದಲ್ಲಿ 6,000 ಕೋಟಿ ರೂ. ಹೂಡಿಕೆ ಮಾಡಲು ಬಯಸಿದ್ದ ಉದ್ಯಮಿಯೊಬ್ಬರು ಕಳೆದ ವರ್ಷ ಬೆದರಿಕೆ ಹಾಗೂ ಸುಲಿಗೆ ಕರೆಗಳನ್ನು ಸ್ವೀಕರಿಸಿದ ನಂತರ ತಮ್ಮ ಯೋಜನೆಯನ್ನು ಕರ್ನಾಟಕಕ್ಕೆ ಸ್ಥಳಾಂತರಿಸಿದ್ದರು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ಹೇ ಳಿದ್ದಾರೆ. ಕಳೆದ ಜೂನ್‌ನಲ್ಲಿ ಅಧಿಕಾರಕ್ಕೆ ಬಂದ ಏಕನಾಥ್ ಶಿಂಧೆ ಸರಕಾರದಲ್ಲಿ ಗೃಹ ಸಚಿವಾಲಯದ ಮುಖ್ಯಸ್ಥರಾಗಿರುವ ಫಡ್ನವಿಸ್, ಉದ್ಯಮಿಗಳಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ಪುಣೆಯಲ್ಲಿ […]

Advertisement

Wordpress Social Share Plugin powered by Ultimatelysocial